PM Surya Ghar Yojana : ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ Important update.

WhatsAppಫಾಲೋ ಮಾಡಿ

PM Surya Ghar YojanaPM Surya Ghar Yojana : ಕೇಂದ್ರ ಸರ್ಕಾರದ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿ ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡು ₹78,000 ವರೆಗೆ ಸಬ್ಸಿಡಿ ಪಡೆಯಬಹುದು. ಈ ಯೋಜನೆಗೆ ಬೇಕಾಗುವ ಅರ್ಹತೆಗಳು ಹಾಗೂ ಲಾಭಗಳ ಸಂಪೂರ್ಣ ಮಾಹಿತಿ ಇಲ್ಲಿದೆ. 

ಪ್ರತಿ ತಿಂಗಳು ಬರುತ್ತಿರುವ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ಲಿನಿಂದ ಆಗುತ್ತಿರುವ ತೊಂದರೆಗಳಿಗೆ ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಬಿಲ್ಲನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳುವ ಅವಕಾಶ ಇಲ್ಲಿದೆ.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ (PM Surya Ghar Muft Bijli Yojana) ಯೋಜನೆ ಅಡಿಯಲ್ಲಿ ಮನೆಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳುವವರಿಗೆ ಕೇಂದ್ರ ಹಣಕಾಸು ನೆರವು (CFA) ನೀಡಲಾಗುತ್ತದೆ. 6kw ಸಾಮರ್ಥ್ಯದ ವ್ಯವಸ್ಥೆಗೆ ಗರಿಷ್ಠ ₹78,000 ವರೆಗೆ ಕೇಂದ್ರ ಸಬ್ಸಿಡಿ ಲಭ್ಯವಿದೆ. Solar Rooftop+1.

ಸಬ್ಸಿಡಿ ಎಷ್ಟು ಸಿಗುತ್ತದೆ? ಆನ್ ಗ್ರಿಡ್ ಅಥವಾ ಹೈಬ್ರಿಡ್ ಸಿಸ್ಟಮ್ ಗಳಲ್ಲಿ ಯಾವುದು ಸೂಕ್ತ? ಸೋಲಾರ್ ಅಳವಡಿಕೆಯಿಂದ ವಿದ್ಯುತ್ ಬಿಲ್ ಎಷ್ಟು ಕಡಿಮೆಯಾಗಬಹುದು? ಮತ್ತು ಯೋಜನೆ ಅಡಿ ಸಬ್ಸಿಡಿ ಪಡೆಯುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

PM Surya Ghar Yojana : ಸಬ್ಸಿಡಿ ವಿವರಗಳು 

ಇದು ರಾಜ್ಯ ಸರ್ಕಾರದ ಯೋಜನೆಯಲ್ಲ , ಬದಲಾಗಿ ನೇರವಾಗಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಯೋಜನೆಯಾಗಿದೆ. ಈ ಯೋಜನೆಯು ಮಾರ್ಚ್ 31 2027 ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ನೀವು ಅಳವಡಿಸುವ ಸೋಲಾರ್ ಸಾಮರ್ಥ್ಯದ ಮೇಲೆ ಸಬ್ಸಿಡಿ ಮೊತ್ತ ನಿರ್ಧಾರವಾಗುತ್ತದೆ.

ಸೋಲಾರ್ ಸಾಮರ್ಥ್ಯ ಮತ್ತು ಕೇಂದ್ರ ಸರ್ಕಾರ ನೀಡುವ ಗರಿಷ್ಠ ಸಬ್ಸಿಡಿ ವಿವರ 

  • 1 ಕಿಲೋ ವ್ಯಾಟ್ : ₹30,000
  • 2 ಕಿಲೋ ವ್ಯಾಟ್ : ₹60,000
  • 3 ರಿಂದ 10 ಕಿಲೋ ವ್ಯಾಟ್ : ₹78,000

(ಸೂಚನೆ : ಈ ಸಬ್ಸಿಡಿ ಮತ್ತು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಯಾಗುತ್ತದೆ. ಕಮರ್ಷಿಯಲ್ ಅಥವಾ ಕೈಗಾರಿಕೆಗಳಿಗೆ ಈ ಸಬ್ಸಿಡಿ ಅನ್ವಯಿಸುವುದಿಲ್ಲ. ಇದು ಕೇವಲ ವಸತಿ ಮನೆಗಳಿಗೆ ಮಾತ್ರ)

PM Surya Ghar Yojana : ಸೋಲಾರ್ ಸಿಸ್ಟಮ್ ವಿಧಗಳು : ಆನ್ ಗ್ರಿಡ್  vs ಹೈಬ್ರಿಡ್ 

ಸೋಲಾರ್ ಅಳವಳಿಸುವಾಗ ಪ್ರಮುಖವಾಗಿ ಎರಡು ವಿಧಗಳಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

  • ಆನ್ ಗ್ರಿಡ್ (On -Grid system ):  ಇದರಲ್ಲಿ ಬ್ಯಾಟರಿ ಇರುವುದಿಲ್ಲ. ಬೆಸ್ಕಾಂ ವಿದ್ಯುತ್ ಇದ್ದಾಗ ಮಾತ್ರ ಇದು ಕೆಲಸ ಮಾಡುತ್ತದೆ. ನೀವು ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್ತನ್ನು ನೆಟ್ ಮೀಟರ್ (net metering)ಮೂಲಕ ಸರ್ಕಾರಕ್ಕೆ ಮಾರಾಟ ಮಾಡಬಹುದು. ಕಡಿಮೆ ಪವರ್ ಕಟ್ ಇರುವ ನಗರ ಪ್ರದೇಶಗಳಿಗೆ ಇದು ಸೂಕ್ತ.
  • ಹೈಬ್ರಿಡ್ ಸಿಸ್ಟಮ್ (hybrid system) : ಇದರಲ್ಲಿ ಬ್ಯಾಟರಿ ಸ್ಟೋರೇಜ್ ಇರುತ್ತದೆ. ವಿದ್ಯುತ್ ಕಡಿತಗೊಂಡಾಗಲು ಇದು ಮನೆಯ ಉಪಕರಣಗಳಿಗೆ ಪವರ್ ನೀಡುತ್ತದೆ. ಜೊತೆಗೆ ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರಕ್ಕೂ ರವಾನಿಸಬಹುದು. ಪದೇ ಪದೇ ಪವರ್ ಕಟ್ ಆಗುವ ಪ್ರದೇಶಗಳಿಗೆ ಹಾಗೂ ಲಿಫ್ಟ್ ಎಸಿ ಮುಂತಾದ ಹೆವಿ ಲೋಡ್ ಇರುವ ಮನೆಗಳಿಗೆ ಇದು ಅತ್ಯುತ್ತಮ ಆಯ್ಕೆ.

ಇದನ್ನು ಓದಿ

PM Kissan Yojana Update 2026: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಯೋಜನೆ ವಿಸ್ತರಣೆಗೆ ಅನುಮೋದನೆ, Important update.

PM Surya Ghar Yojana : ಲಿಥಿಯಂ ಐಯಾನ್ ಬ್ಯಾಟರಿ : ಭವಿಷ್ಯದ ತಂತ್ರಜ್ಞಾನ 

ಹಳೆಯ ಲೆಡ್ ಆಸಿಡ್ ಬ್ಯಾಟರಿಗಳಿಗೆ ಹೋಲಿಸಿದರೆ ಇವುಗಳ ನಿರ್ವಹಣೆ ಸಂಪೂರ್ಣ ಶೂನ್ಯ.

  • ಬ್ಯಾಟರಿ ಮತ್ತು ಇನ್ವರ್ಟರ್ಗಳ ಮೇಲೆ ಹತ್ತು ವರ್ಷಗಳ ವಾರೆಂಟಿ ಇರುತ್ತದೆ.
  • ಸೋಲಾರ್ ಪ್ಯಾನೆಲ್ ಗಳ ಮೇಲೆ 25 ರಿಂದ 30 ವರ್ಷಗಳ ಪರ್ಫಾರ್ಮೆನ್ಸ್ ವಾರಂಟಿ ಇರುತ್ತದೆ.
  • ಕಡಿಮೆ ಜಾಗದಲ್ಲಿ ಹೆಚ್ಚು ಪವರ್ ಶೇಖರಣೆ ಮಾಡುವ ಸಾಮರ್ಥ್ಯ ಈ ಬ್ಯಾಟರಿಗಳಿಗಿದೆ.

PM Surya Ghar Yojana : ಹೂಡಿಕೆ ಮತ್ತು ಲಾಭ 

ಒಂದು ಅಂದಾಜಿನ ಪ್ರಕಾರ ನಿಮ್ಮ ತಿಂಗಳ ವಿದ್ಯುತ್ ಬಿಲ್ ₹2,500 ರಿಂದ ₹3,000 ಬರುತ್ತಿದ್ದರೆ, ನಿಮಗೆ 3 ಕಿಲೋ ವ್ಯಾಟ್ ಸೋಲಾರ್ ಸಿಸ್ಟಮ್ ಬೇಕಾಗುತ್ತದೆ.

  • ಒಟ್ಟು ವೆಚ್ಚ: ಅಂದಾಜು. ₹1.90 ಲಕ್ಷದಿಂದ ₹2.00 ಲಕ್ಷ
  • ಸಬ್ಸಿಡಿ ವಾಪಸಾತಿ: ₹78,000 (ನೇರವಾಗಿ ನಿಮ್ಮ ಖಾತೆಗೆ)
  • ನಿವ್ವಳ ಹೂಡಿಕೆ : ಕೇವಲ ₹1.20 ಲಕ್ಷದ ಆಸು ಪಾಸು.
  • ಲಾಭ : ವರ್ಷಕ್ಕೆ ₹36,000 ಉಳಿತಾಯ. ಅಂದರೆ ಕೇವಲ 3.5 ರಿಂದ 4 ವರ್ಷಗಳಲ್ಲಿ ನಿಮ್ಮ ಹೂಡಿಕೆ ವಾಪಸ್ ಬರುತ್ತದೆ. ನಂತರದ 20+ವರ್ಷಗಳ ಕಾಲ ವಿದ್ಯುತ್ ಸಂಪೂರ್ಣ ಉಚಿತ.

ಯಾರಿಗೆಲ್ಲ ಇದು ಉಪಯುಕ್ತ ?

  1. ಸ್ವಂತ ಮನೆ ಹೊಂದಿರುವವರು : ಎಲೆಕ್ಟ್ರಿಕ್ ಕಾರು ಹೊಂದಿರುವವರಿಗೆ ಹಗಲಿನಲ್ಲಿ ಕಾರು ಚಾರ್ಜ್ ಮಾಡಲು ಇದು ಹೇಳಿ ಮಾಡಿಸಿದಂತಿದೆ.
  2. ಪಿಜಿ ಮಾಲೀಕರು : ಹೆಚ್ಚಿನ ವಿದ್ಯುತ್ ಬಿಲ್ ಕಟ್ಟುವ ಪಿಜಿ ಮಾಲೀಕರು DCR/non DCR ಪ್ಯಾನಲ್ ಗಳನ್ನು ಅಳವಡಿಸಿ ಬಿಲ್ ಉಳಿಸಬಹುದು.
  3. ಕೈಗಾರಿಕೆಗಳು ಮತ್ತು ಕಮರ್ಷಿಯಲ್ : ಗಾರ್ಮೆಂಟ್ಸ್ ಕೋಲ್ಡ್ ಸ್ಟೋರೇಜ್, ಆಸ್ಪತ್ರೆಗಳು ಮುಂತಾದ ಬೃಹತ್ ವಿದ್ಯುತ್ ಬಳಸುವವರು 100 ಕಿಲೋ ವ್ಯಾಟ್ ನಿಂದ 125 ಕಿಲೋ ವ್ಯಾಟ್ ವರೆಗಿನ ಹೈಬ್ರಿಡ್ ಸಿಸ್ಟಮ್ ಅಳವಡಿಸಿ ಡೀಸೆಲ್ ಜನರೇಟರ್ ವೆಚ್ಚವನ್ನು ಶೂನ್ಯ ಮಾಡಬಹುದು.
PM Surya Ghar Yojana : ಅರ್ಜಿ ಸಲ್ಲಿಸುವುದು ಹೇಗೆ? 

ಮೊದಲು ರಾಷ್ಟ್ರೀಯ ಪೋರ್ಟಲ್ ನಲ್ಲಿ ನೋಂದಾಯಿಸಿ. ಮೊಬೈಲ್ ಸಂಖ್ಯೆ, (ಬೆಸ್ಕಾಂ ಆರ್ ಆರ್ ಸಂಖ್ಯೆ)  ಗ್ರಾಹಕ ಸಂಖ್ಯೆ ಮತ್ತು ವಿತರಣಾ ಕಂಪನಿ ಆಯ್ಕೆ ಮಾಡಿ. ವಿವರಗಳು ಬಂದ ನಂತರ ಸಾಮರ್ಥ್ಯ ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.

ನಂತರ ಸಂಬಂಧಪಟ್ಟ ವಿತರಣಾ ಕಂಪನಿ ಪೋರ್ಟಲ್ಲಿ ಅನುಮೋದನೆ, ನೆಟ್ ಮೀಟರ್ ಮತ್ತು ಕಮಿಶನಿಂಗ್ ಪ್ರಕ್ರಿಯೆ ನಡೆಯುತ್ತದೆ. ನೊಂದಾಯಿತ ವೆಂಡರ್ ಮೂಲಕ ಅಳವಡಿಕೆ ಮಾಡಿಸಬೇಕು. ಕಮಿಶನಿಂಗ್ ನಂತರ ಬ್ಯಾಂಕ್ ವಿವರ ಸಲ್ಲಿಸಿದರೆ ಸಬ್ಸಿಡಿ ಸಾಮಾನ್ಯವಾಗಿ 30 ದಿನಗಳ ಒಳಗೆ ಜಮೆ ಆಗುತ್ತದೆ.

ಅಧಿಕೃತ ಅರ್ಜಿ ಲಿಂಕ್

https://pmsuryaghar.gov.in/#/

ಬೆಸ್ಕಾಂ ಗ್ರಾಹಕರು ರಾಷ್ಟ್ರೀಯ ಪೋರ್ಟಲ್ ನಂತರ ಸ್ಥಳೀಯ ರೂಫ್ ಟಾಪ್ ಪೋರ್ಟಲ್ ನಲ್ಲಿಯೂ ಮುಂದುವರಿಯಬೇಕು.

ನಿಮಗೆ ಸ್ವತಹ ಅರ್ಜಿ ಸಲ್ಲಿಸಲು ಗೊಂದಲಗಳಿದ್ದರೆ ನಿಮ್ಮ ಹತ್ತಿರದ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಇದರ ವಿವರಗಳನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.

PM Surya Ghar Yojana : ಅಗತ್ಯ ದಾಖಲೆಗಳು 
  1. ಇತ್ತೀಚಿನ ವಿದ್ಯುತ್ ಬಿಲ್
  2. ಆಧಾರ್ ಕಾರ್ಡ್
  3. ಬ್ಯಾಂಕ್ ಖಾತೆ ವಿವರ
  4. ಛಾವಣಿ ಫೋಟೋ
  5. ಮಾಲಿಕತ್ವದ ದಾಖಲೆ
  6. ಮಾಲೀಕರ ಇ ಕೆ ವೈ ಸಿ ಬೇಕಾಗಬಹುದು.

ಇದನ್ನು ಓದಿ

Free House Scheme : ಸ್ವಂತ ಜಾಗ ಇದೆಯೇ? ಮನೆ ಕಟ್ಟಲು ಸರ್ಕಾರದಿಂದ ₹2 ಲಕ್ಷದಿಂದ ₹3 ಲಕ್ಷದವರೆಗೆ ನೆರವು, ಆಶ್ರಯ ಯೋಜನೆ Important update.

 

Leave a Comment