High Court SDA Recruitment 2026 : ಸರ್ಕಾರಿ ವಲಯದಲ್ಲಿ ಗೌರವಾನ್ವಿತ ಹುದ್ದೆಯ ಹುಡುಕಾಟದಲ್ಲಿರುವವರಿಗೆ ಉತ್ತಮ ಅವಕಾಶ ಇಲ್ಲಿದೆ. ಕರ್ನಾಟಕ ಹುಚ್ಚ ನ್ಯಾಯಾಲಯವು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಚಾಲನೆ ನೀಡಿದೆ.
ಒಟ್ಟು 20 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶ. ಆಯ್ಕೆಯಾದ ಅಭ್ಯರ್ಥಿಗಳಿಗೆ 25,500 ನಿಂದ 81,100 ವರೆಗಿನ ಆಕರ್ಷಕ ವೇತನ ಶ್ರೇಣಿ ಸಿಗಲಿದೆ. 13/08/2026 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 11/09/2026 ರ ವರೆಗೆ ಅವಕಾಶವಿರುತ್ತದೆ.
ಪರೀಕ್ಷಾ ವಿಧಾನ, ವಯೋಮಿತಿ ಸಡಿಲಿಕೆ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ. ಉದ್ಯೋಗದ ಹೊಸ ಆದಿ ಸೂಚನೆಗಳು ತಪ್ಪದೆ ಬೇಕಾದಲ್ಲಿ ನಮ್ಮ ವಾಟ್ಸಪ್ ಚಾನೆಲ್ ಅನ್ನು ಫಾಲೋ ಮಾಡಿಕೊಳ್ಳಿ.
ಇದನ್ನು ಓದಿ
High Court SDA Recruitment 2026 : ಪ್ರಮುಖ ವಿವರಗಳು
- ಸಂಸ್ಥೆಯ ಹೆಸರು : ಕರ್ನಾಟಕ ಉಚ್ಚ ನ್ಯಾಯಾಲಯ (Karnataka High Court)
- ಹುದ್ದೆಯ ಹೆಸರು : ದ್ವಿತೀಯ ದರ್ಜೆ ಸಹಾಯಕರು (SDA)
- ಒಟ್ಟು ಹುದ್ದೆಗಳು : 20
- ಉದ್ಯೋಗ ಸ್ಥಳ: ಬೆಂಗಳೂರು, ಧಾರವಾಡ ಅಥವಾ ಕಲಬುರಗಿ ಪೀಠಗಳು
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಮಾತ್ರ
- ಅಧಿಕೃತ ವೆಬ್ಸೈಟ್ : https://judiciary.karnataka.gov.in/
High Court SDA Recruitment 2026 : ಹುದ್ದೆಗಳ ವಿವರ ಹಾಗೂ ವರ್ಗೀಕರಣ
ಒಟ್ಟು 20 ಹುದ್ದೆಗಳಲ್ಲಿ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಂಚಿಕೆ ಈ ಕೆಳಗಿನಂತಿದೆ.
- ಉಳಿಕೆ ಮೂಲ ವೃಂದ (RPC) : 18 ಹುದ್ದೆಗಳು
- ಕಲ್ಯಾಣ ಕರ್ನಾಟಕ ಪ್ರದೇಶ (KKR) : 02 ಹುದ್ದೆಗಳು
ವೇತನ ಶ್ರೇಣಿ : ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಂತ-4 ರ ಅಡಿಯಲ್ಲಿ ತಿಂಗಳಿಗೆ 25, 500 ರೂಪಾಯಿನಿಂದ 81,100 ರೂಪಾಯಿವರೆಗೆ ವೇತನದ ಜೊತೆಗೆ ಇತರ ಭತ್ಯೆ ಗಳು ಲಭ್ಯವಿರುತ್ತವೆ.
High Court SDA Recruitment 2026 : ಶೈಕ್ಷಣಿಕ ಅರ್ಹತೆ
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ, ವಿಜ್ಞಾನ, ವಾಣಿಜ್ಯ BBA ,BCA ಅಥವಾ BMS ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು.
- ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ : ಕನಿಷ್ಠ 55% ಅಂಕಗಳು
- SC ST ಅಭ್ಯರ್ಥಿಗಳಿಗೆ : ಕನಿಷ್ಠ 50% ಅಂಕಗಳು
- ಅಭ್ಯರ್ಥಿಗಳಿಗೆ ಕಂಪ್ಯೂಟರ್ ಚಾಲನೆ ಮತ್ತು ನಿರ್ವಹಣೆಯ ಜ್ಞಾನ ಇರುವುದು ಕಡ್ಡಾಯ.
ವಯೋಮಿತಿ
- ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರಿ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ವಿಶೇಷವಾಗಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
- ಸಾಮಾನ್ಯ ವರ್ಗ : ಗರಿಷ್ಠ 40 ವರ್ಷ (35+5 ವರ್ಷ ಸಡಿಲಿಕೆ)
- ಪ್ರವರ್ಗ 2A,2B,3A,3B : ಗರಿಷ್ಠ 43 ವರ್ಷ (38+5 ವರ್ಷ ಸಡಿಲಿಕೆ)
- SC ST ಹಾಗೂ ಪ್ರವರ್ಗ-1 : ಗರಿಷ್ಠ 45 ವರ್ಷ (40+5 ವರ್ಷ ಸಡಿಲಿಕೆ)
ಇದನ್ನು ಓದಿ
High Court SDA Recruitment 2026 : ಆಯ್ಕೆ ಪ್ರಕ್ರಿಯೆ ಮತ್ತು ಅಂಕಗಳ ವಿವರ
- ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ (90 ನಿಮಿಷಗಳ ಕಾಲಾವಧಿ) ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಒಟ್ಟು 100 ಅಂಕಗಳಲ್ಲಿ ಕನಿಷ್ಠ 60 ಅಂಕಗಳನ್ನು ಪಡೆಯುವುದು ಕಡ್ಡಾಯ.
- ಇಂಗ್ಲೀಷ್ ಪ್ರಬಂಧ: 30 ಅಂಕಗಳು
- ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ : 30 ಅಂಕಗಳು
- ಸಾಮಾನ್ಯ ಜ್ಞಾನ ಪರೀಕ್ಷೆ : 20 ಅಂಕಗಳು
- ಸಂದರ್ಶನ : 20 ಅಂಕಗಳು
- ಪರೀಕ್ಷೆಗೆ 1:10 ಅನುಪಾತದಲ್ಲಿ ಹಾಗೂ ಸಂದರ್ಶನಕ್ಕೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ.
ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ
- ಸಾಮಾನ್ಯ ವರ್ಗ, 2A,2B,3A,3B ಅಭ್ಯರ್ಥಿಗಳಿಗೆ :350 ರೂ
- SC ST ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: 200 ರೂ
- ಪಾವತಿ ವಿಧಾನ : SBI payment gateway ಮೂಲಕ net banking, credit card, debit card ಅಥವಾ UPI ಬಳಸಿ ಶುಲ್ಕ ಪಾವತಿಸಬಹುದು.
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 13/08/2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11/09/2026
High Court SDA Recruitment 2026 : ಅರ್ಜಿ ಸಲ್ಲಿಸುವ ವಿಧಾನ.
- ಮೇಲೆ ನೀಡಿರುವ ಕರ್ನಾಟಕದ ಹೈಕೋರ್ಟ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- Recruitment ವಿಭಾಗದಲ್ಲಿ “second division assistant (SDA) recruitment 2026” , ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಿಯಮದಂತೆ 50kb ಗಿಂತ ಕಡಿಮೆ ಇರುವ ಫೋಟೋ ಹಾಗೂ 25kb ಗಿಂತ ಕಡಿಮೆ ಇರುವ ಸಹಿಯನ್ನು ಅಪ್ಲೋಡ್ ಮಾಡಿ.
- ಶುಲ್ಕ ಪಾವತಿಸಿ ಅರ್ಜಿಯನ್ನು ಸಬ್ಮಿಟ್ ಮಾಡಿ.
ಇದನ್ನು ಓದಿ
High Court SDA Recruitment 2026 : ಯಾವ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು?
1. ಕನ್ನಡ
- ವ್ಯಾಕರಣ
- ಸಂಧಿ, ಸಮಾಜ
- ಗಾದೆಗಳು ಮತ್ತು ನುಡಿಗಟ್ಟುಗಳು
- ಸಮನಾರ್ಥಕ ಅಥವಾ ವಿರುದ್ಧಾರ್ಥಕ ಪದಗಳು
- ಅರ್ಥಗ್ರಹಣ
- ಕಾಗುಣಿತ
- ಪದ ಪ್ರಯೋಗ
2. ಇಂಗ್ಲಿಷ್
- Grammar
- Vocabulary
- Synonyms or antonyms
- Sentence correction
- Comprehension
3. ಸಾಮಾನ್ಯ ಜ್ಞಾನ
- ಕರ್ನಾಟಕದ ಇತಿಹಾಸ, ಭೂಗೋಳ
- ಭಾರತದ ಇತಿಹಾಸ ಮತ್ತು ಸಂವಿಧಾನ
- ಕರ್ನಾಟಕ ಸರ್ಕಾರ ಮತ್ತು ಆಡಳಿತ
- ವಿಜ್ಞಾನ
- ಕ್ರೀಡೆ, ಪ್ರಶಸ್ತಿಗಳು
- ಪ್ರಸ್ತುತ ಘಟನೆಗಳು
4. ಮಾನಸಿಕ ಸಾಮರ್ಥ್ಯ/reasoning
- Number series
- Analogy
- Coding decoding
- Blood relations
- Direction sense
- ಸಮಸ್ಯೆ ಪರಿಹಾರ
5. ಗಣಿತ
- ಶೇಕಡವಾರು
- ಅನುಪಾತ ಮತ್ತು ಪ್ರಮಾಣ
- ಸರಾಸರಿ
- ಲಾಭ ನಷ್ಟ
- ಬಡ್ಡಿ
- ಸಮಯ ಮತ್ತು ಕೆಲಸ
- ವೇಗ, ದೂರ ಮತ್ತು ಸಮಯ
ಹೆಚ್ಚು ಅಂಕ ಗಳಿಸಲು ಮೊದಲು ಕನ್ನಡ ವ್ಯಾಕರಣ+GK+reasoning+basic maths ಅನ್ನು ಚೆನ್ನಾಗಿ ತಯಾರಿ ಮಾಡಿ ನಂತರ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.
ಹೈಕೋರ್ಟ್ನಂತಹ ಪ್ರಮುಖ ನ್ಯಾಯಾಂಗ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ಉದ್ಯೋಗಕ್ಕೆ ಉತ್ತಮ ಗೌರವ ಮತ್ತು ಜವಾಬ್ದಾರಿ ಇರುತ್ತದೆ. ಅಭ್ಯರ್ಥಿಗಳು ಈ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮತ್ತು ಗಮನಹರಿಸಿ ಕೆಲಸದ ನಿಖರತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮ ವೃತ್ತಿ ಜೀವನವನ್ನು ಮುಂದುವರಿಸಿ.
- ಕೋರ್ಟ್ಗೆ ಸಂಬಂಧಿಸಿದ ದಾಖಲೆಗಳು, ಕಡತಗಳು, ಮತ್ತು ಕಚೇರಿ ಕೆಲಸಗಳನ್ನು ನಿರ್ವಹಿಸುವಲ್ಲಿ SDA ಸಿಬ್ಬಂದಿಯ ಪಾತ್ರ ಮುಖ್ಯ.
- ಸೇವಾ ಅವಧಿಯಲ್ಲಿ ಬಡ್ತಿ ಪಡೆಯುವ ಅವಕಾಶ ಇರುತ್ತದೆ.
- ಸಾಮಾನ್ಯವಾಗಿ ಕಚೇರಿ ಆಧಾರಿತ ಕೆಲಸವಾಗಿರುವುದರಿಂದ, ದೈಹಿಕವಾಗಿ ತುಂಬಾ ಕಷ್ಟದ ಕೆಲಸವಲ್ಲ.
ಇದನ್ನು ಓದಿ