Bank Of Baroda Recruitment 2026 : ಬ್ಯಾಂಕ್ ಆಫ್ ಬರೋಡದಲ್ಲಿ ಭರ್ಜರಿ ನೇಮಕಾತಿ , 206 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 1.20 ಲಕ್ಷದವರೆಗೆ ವೇತನ. Important update.

WhatsAppಫಾಲೋ ಮಾಡಿ

Bank Of Baroda Recruitment 2026Bank Of Baroda Recruitment 2026 : ಬ್ಯಾಂಕ್ ಆಫ್ ಬರೋಡ ವಿವಿಧ ವಿಭಾಗಗಳ 206 ಮ್ಯಾನೇಜರ್ ಮತ್ತು ಆಫೀಸರ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. 1.20 ಲಕ್ಷದವರೆಗೆ ವೇತನ ವಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ. 

ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿರುವ ಯುವಜನತೆಗೆ ಇಲ್ಲಿದೆ ಭರ್ಜರಿಯ ಅವಕಾಶ. ದೇಶದ ಪ್ರಮುಖ ಹಾಗೂ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಒಟ್ಟು 206 ವಿವಿಧ ಮ್ಯಾನೇಜರ್ ಹಾಗೂ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಬೃಹತ್ ನೇಮಕಾತಿಯಡಿ  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಗರಿಷ್ಠ 1,20,000 ರೂಪಾಯಿವರೆಗೆ ಅತ್ಯುತ್ತಮ ವೇತನ ಸಿಗಲಿದೆ. 2026 ರ ಆಗಸ್ಟ್ 6 ರಿಂದಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆಗಸ್ಟ್ 26ರ ಒಳಗೆ ತಮ್ಮರ್ಜಿಗಳನ್ನು ಸಲ್ಲಿಸಬೇಕಿದ್ದು, ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವುದು ಜಾಣ್ಮೆ.

ಯಾವುದೇ ಪದವಿ, ಇಂಜಿನಿಯರಿಂಗ್, ಎಂಸಿಎ ಅಥವಾ ಸಿಎ ಓದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ದೇಶದಾದ್ಯಂತ ನಿಯೋಜನೆಗೊಳ್ಳುವ ಈ ಹುದ್ದೆಗಳು ನಿಮ್ಮ ವೃತ್ತಿ ಜೀವನಕ್ಕೆ ಭದ್ರಬುನಾದಿ ಒದಗಿಸಲಿದೆ. ಖಾಲಿ ಇರುವ ಹುದ್ದೆಗಳ ವಿಭಾಗವಾರು ವಿವರ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ಇದನ್ನು ಓದಿ

Court Recruitment 2026: Important ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಹತ್ತನೇ ತರಗತಿ ಪಾಸ್ ಆಗಿದ್ದರೆ ನ್ಯಾಯಾಲಯದಲ್ಲಿ ಸರ್ಕಾರಿ ಕೆಲಸ.

Bank Of Baroda Recruitment 2026 : ಬ್ಯಾಂಕ್ ಆಫ್ ಬರೋಡ ನೇಮಕಾತಿ ಮುಖ್ಯಾಂಶಗಳು. 

  • ನೇಮಕಾತಿ ಸಂಸ್ಥೆ , : ಬ್ಯಾಂಕ್ ಆಫ್ ಬರೋಡ
  • ಅಧಿಸೂಚನೆ ಸಂಖ್ಯೆ : BOB/HRM/REC/ADVT/2026/15
  • ಹುದ್ದೆ ಹೆಸರು : ಮ್ಯಾನೇಜರ್, ಟೆಕ್ನಿಕಲ್ ಆಫೀಸರ್, ಚೀಫ್ ಮ್ಯಾನೇಜರ್
  • ಓಟ್ಟು ಹುದ್ದೆಗಳು : 206
  • ಅರ್ಜಿ ಸಲ್ಲಿಕೆ ಆರಂಭ  : 06 ಆಗಸ್ಟ್ 2026
  • ಕೊನೆಯ ದಿನಾಂಕ : 26 ಆಗಸ್ಟ್ 2026
  • ಉದ್ಯೋಗದ ಸ್ಥಳ : ಭಾರತದಾದ್ಯಂತ
  • ಅಧಿಕೃತ ವೆಬ್ಸೈಟ್ : https://bankofbaroda.bank.in/career/current-opportunities

Bank Of Baroda Recruitment 2026 : ವಿಭಾಗವಾರು ಖಾಲಿ  ಹುದ್ದೆಗಳು ಹಾಗೂ ಶೈಕ್ಷಣಿಕ ಅರ್ಹತೆ 

ಬ್ಯಾಂಕ್ ಆಫ್ ಬರೋಡ ಓಟ್ಟು 206 ಹುದ್ದೆಗಳನ್ನು ವಿವಿಧ ಪ್ರಮುಖ ಇಲಾಖೆಗಳ ಅಗತ್ಯಕ್ಕೆ ತಕ್ಕಂತೆ ವಿಂಗಡಿಸಿದೆ. ಅದರ ಸಂಪೂರ್ಣ ವಿವರ ಹೀಗಿದೆ

1. ಡಿಜಿಟಲ್ ಬ್ಯಾಂಕಿಂಗ್ ವಿಭಾಗ (19 ಹುದ್ದೆಗಳು) 

ಮ್ಯಾನೇಜರ್ : 13 ಹುದ್ದೆಗಳಿವೆ. ಐಟಿ (IT), ಸಿ ಎಸ್(CS) ಅಥವಾ ಇಸಿಇ(ECA) ವಿಭಾಗದಲ್ಲಿ ಬಿ ಇ(B.E) ಅಥವಾ ಬಿ ಟೆಕ್ (B.Tec)ಪದವಿ ಜೊತೆಗೆ 3 ವರ್ಷಗಳ ಅನುಭವ ವಿರಬೇಕು.

ಸೀನಿಯರ್ ಮ್ಯಾನೇಜರ್ : 1 ಹುದ್ದೆ ಖಾಲಿಯಿದ್ದು, ಬಿ ಇ (B.e), ಬಿ ಟೆಕ್(B.Tec) ಅಥವಾ ಎಂಸಿಎ(MCA) ಜೊತೆಗೆ ಆರು ವರ್ಷಗಳ ಕೆಲಸದ ಅನುಭವ ಕೇಳಲಾಗಿದೆ.

ಪ್ರಾಡಕ್ಟ್ ಮ್ಯಾನೇಜರ್ : 5 ಹುದ್ದೆಗಳಿದ್ದು, ಯಾವುದೇ ಪದವಿ ಹಾಗೂ 3 ವರ್ಷಗಳ ಡಿಜಿಟಲ್ ಲಿಂಡಿಂಗ್ ಅನುಭವವಿದ್ದರೆ ಸಾಕು.

2. ಫೆಸಿಲಿಟಿ ಮ್ಯಾನೇಜ್ಮೆಂಟ್ ವಿಭಾಗ (88 ಹುದ್ದೆಗಳು) 

ಟೆಕ್ನಿಕಲ್ ಆಫೀಸರ್ : 50 ಹುದ್ದೆಗಳಿಗೆ ಸಿವಿಲ್ ಅಥವಾ ಎಲೆಕ್ಟ್ರಿಕಲ್ ವಿಭಾಗದ ಬಿ ಇ (B.E) ಅಥವಾ ಬಿ ಟೆಕ್(B.Tec) ಪದವೀಧರರು ಅರ್ಜಿ ಹಾಕಬಹುದು. ಕನಿಷ್ಠ 2 ವರ್ಷ ಅನುಭವ ಕಡ್ಡಾಯ.

ಟೆಕ್ನಿಕಲ್ ಮ್ಯಾನೇಜರ್ : 30 ಹುದ್ದೆಗಳಿವೆ.4 ವರ್ಷಗಳ ಅನುಭವದೊಂದಿಗೆ ಸಂಬಂಧ ಪಟ್ಟ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿರಬೇಕು.

ಸೀನಿಯರ್ ಟೆಕ್ನಿಕಲ್ ಮ್ಯಾನೇಜರ್ : 8 ಹುದ್ದೆಗಳಿದ್ದು, 07 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಬಿಇ ಅಥವಾ ಬಿ ಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು.

3. ಇನ್ಫರ್ಮೇಷನ್ ಸೆಕ್ಯೂರಿಟಿ ವಿಭಾಗ (16 ಹುದ್ದೆಗಳು) 

ಮ್ಯಾನೇಜರ್ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಸೈಬರ್ ಸೆಕ್ಯೂರಿಟಿಯಲ್ಲಿ ಬಿಇ/ಬಿ ಟೆಕ್/ಎಂಸಿಎ/ಎಂ ಟೆಕ್ ಜೊತೆಗೆ ಕಡ್ಡಾಯ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

4. ಸೆಕ್ಯೂರಿಟಿ ವಿಭಾಗ (54 ಹುದ್ದೆಗಳು) 

ಯಾವುದೇ ಪದವಿ ಪಡೆದ, ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸಿದವರು ಅಥವಾ/ಪ್ಯಾರಾ ಮಿಲಿಟರಿಯಲ್ಲಿ ಶ್ರೇಣಿ-1 ಅಧಿಕಾರಿಯಾಗಿ ಕೆಲಸ ಮಾಡಿದವರಿಗೆ ಮಾತ್ರ ಇಲ್ಲಿ ಅವಕಾಶವಿದೆ.

5. ಎಂಟರ್ಪ್ರೈಸ್ ಡೇಟಾ ಮ್ಯಾನೇಜರ್ (14 ಹುದ್ದೆಗಳು) 

ಡೇಟಾ ಸೈಂಟಿಸ್ಟ್, ಡೇಟಾ ಪ್ರೊಫೈಲಿಂಗ್ ಸೇರಿದಂತೆ ಹಲವು ಹುದ್ದೆಗಳಿದ್ದು, ತಾಂತ್ರಿಕ ಅನುಭವಗಳೊಂದಿಗೆ ಬಿಇ, ಬಿ ಟೆಕ್, ಬಿಎಸ್ಸಿ, ಎಂ ಎಸ್ ಸಿ, ಅಥವಾ ಎಂ ಸಿ ಎ ಓದಿದವರು ಅರ್ಜಿ ಸಲ್ಲಿಸಬಹುದು.

6. (Bank Of Baroda Recruitment 2026) ಕಾರ್ಪೊರೇಟ್ ಅಕೌಂಟ್ ಮತ್ತು ಟ್ಯಾಕ್ಸೇಶನ್ (15 ಹುದ್ದೆಗಳು) 

ಮ್ಯಾನೇಜರ್ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಸಿಎ (CA), ಐ ಸಿ ಡಬ್ಲ್ಯೂ ಎ (ICWA) ಅಥವಾ ಎಂಬಿಎ (MBA) ಪದವಿ ಪೂರ್ಣಗೊಳಿಸಿರಬೇಕು. ಇನ್ವೆಸ್ಟರ್ ರೇಶನ್ಸ್ ವಿಭಾಗದಲ್ಲಿ 1 ಚೀಫ್ ಮ್ಯಾನೇಜರ್ ಹುದ್ದೆ ಖಾಲಿ ಇದೆ.

ಇದನ್ನು ಓದಿ

KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

Bank Of Baroda Recruitment 2026 : ವಯೋಮಿತಿ ಹಾಗೂ ಸಡಿಲಿಕೆ. 

ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1 2026 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ. ಹುದ್ದೆಗಳ ಶ್ರೇಣಿಗೆ ಅನುಗುಣವಾಗಿ ವಯೋಮಿತಿಯನ್ನು ಈ ಕೆಳಗಿನಂತೆ ನಿರ್ಧರಿಸಲಾಗಿದೆ.

  • JMG/S-| ಹುದ್ದೆಗಳಿಗೆ : ಕನಿಷ್ಠ 23 ವರ್ಷ, ಗರಿಷ್ಠ 35 ವರ್ಷ.
  • MMG/S-|| ಹುದ್ದೆಗಳಿಗೆ : ಕನಿಷ್ಠ 24-25 ವರ್ಷ, ಗರಿಷ್ಠ 35-37 ವರ್ಷ.
  • MMG/S-||| ಹುದ್ದೆಗಳಿಗೆ : ಕನಿಷ್ಠ 27ರಿಂದ 28 ವರ್ಷ, ಗರಿಷ್ಠ 39 ರಿಂದ 40 ವರ್ಷ.
  • SMG/S-|V ಹುದ್ದೆಗಳಿಗೆ : ಕನಿಷ್ಠ 28 ರಿಂದ 31 ವರ್ಷ, ಗರಿಷ್ಠ 40ರಿಂದ 43 ವರ್ಷ.

ಸರ್ಕಾರಿ ನಿಯಮಗಳ ಪ್ರಕಾರ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನರಿಗೆ ಹತ್ತರಿಂದ ಹದಿನೈದು ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ. ಮಾಜಿ ಸೈನಿಕರಿಗೂ ನಿಯಮಾನಸಾರ ವಿನಾಯಿತಿ ಇರಲಿದೆ.

Bank Of Baroda Recruitment 2026 : ವೇತನ ಶ್ರೇಣಿ 

ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಆಯ್ಕೆಯಾದ ಅಧಿಕಾರಿಗಳಿಗೆ ಆಕರ್ಷಕ ವೇತನ ಹಾಗೂ ಇತರ ಸೌಲಭ್ಯಗಳು ಸಿಗಲಿದೆ.

  • JMG/S-| : ₹48,000 – ₹85,920
  • MMG/S-|| : ₹64,820 – ₹93,960
  • MMG/S-||| : ₹85,920 – ₹1,05,280
  • SMG/S-|V : ₹1,02,300 – ₹1,20,940

Bank Of Baroda Recruitment 2026 : ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಿ ಮುಂದಿನ ಹಂತಕ್ಕೆ ಕರೆಯಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಆನ್ಲೈನ್ ಲಿಖಿತ ಪರೀಕ್ಷೆ, ಸೈಕೋ ಮೆಟ್ರಿಕ್ ಪರೀಕ್ಷೆ, ಗುಂಪು ಚರ್ಚೆ (GD) ಮತ್ತು ನೇರ ಸಂದರ್ಶನವನ್ನು (interview) ಒಳಗೊಂಡಿರುತ್ತದೆ.

ಆನ್ಲೈನ್ ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿರುತ್ತವೆ. 25 ಅಂಕಗಳ ಈ ಪರೀಕ್ಷೆಗೆ 150 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ರೀಸನಿಂಗ್, ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಹಾಗೂ ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿ ದ ಪ್ರಶ್ನೆಗಳಿರುತ್ತವೆ. ಗಮನಿಸಿ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸುವ ಋಣಾತ್ಮಕ ಮೌಲ್ಯಮಾಪನ ಪದ್ಧತಿ ಜಾರಿಯಲ್ಲಿದೆ.

ಇದನ್ನು ಓದಿ

KRCL Recruitment 2026 : 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

Bank Of Baroda Recruitment 2026 : ಅರ್ಜಿ ಶುಲ್ಕದ ವಿವರ

  • ಸಾಮಾನ್ಯ ವರ್ಗ, ಒಬಿಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು :  850 ರೂ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : 175 ರೂ
  • ಈ ಶುಲ್ಕವನ್ನು ಆನ್ಲೈನ್ ಬ್ಯಾಂಕಿಂಗ್, ಯುಪಿಐ ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಸುಲಭವಾಗಿ ಪಾವತಿಸಬಹುದು.

Bank Of Baroda Recruitment 2026 : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? 
  1. ಮೊದಲಿಗೆ ಬ್ಯಾಂಕ್ ಆಫ್ ಬರೋಡದ ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ಮುಖಪುಟದಲ್ಲಿರುವ Careers ವಿಭಾಗದ ಮೇಲೆ ಕ್ಲಿಕ್ ಮಾಡಿ, ಅಲ್ಲಿ Current Opportunities ಆಯ್ಕೆಮಾಡಿಕೊಳ್ಳಿ.
  3. ನೇಮಕಾತಿ ಲಿಂಕ್ ತೆರೆದು, ಆನ್ಲೈನ್ ಅರ್ಜಿಯಲ್ಲಿ ಕೇಳಲಾದ ನಿಮ್ಮ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ.
  4. ನಿಮ್ಮ Resume , ಫೋಟೋ, ಸಹಿ ಹಾಗೂ ಅಗತ್ಯ ಪ್ರಮಾಣ ಪತ್ರಗಳನ್ನು ನಿಗದಿತ ಅಳತೆಯಲ್ಲಿ ತಪ್ಪದೆ ಅಪ್ಲೋಡ್ ಮಾಡಿ.
  5. ಅಂತಿಮವಾಗಿ ಶುಲ್ಕ ಪಾವತಿಸಿ, ಅರ್ಜಿಯನ್ನು ಸಬ್ಮಿಟ್ ಮಡಿ. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಬ್ಯಾಂಕ್ ಆಫ್ ಬರೋಡ ನೇಮಕಾತಿ ಅಧಿಸೂಚನೆಯೂ ಉದ್ಯೋಗ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ದೊಡ್ಡ ಭರವಸೆ ಮೂಡಿಸಿದೆ. ಉತ್ತಮ ವೇತನ, ಉದ್ಯೋಗ ಭದ್ರತೆ ಹಾಗೂ ವೃತ್ತಿ ಜೀವನದಲ್ಲಿ ಬೆಳೆಯಲು  ಅವಕಾಶಗಳನ್ನು ಒದಗಿಸುವ ಈ ಬ್ಯಾಂಕ್ ಹುದ್ದೆಗಳಿಗೆ ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು.

ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಸ್ಪರ್ಧೆ ತುಸು ಹೆಚ್ಚೇ ಇರುತ್ತದೆ. ಹೀಗಾಗಿ ಈಗಿನಿಂದಲೇ ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ವ್ಯವಸ್ಥಿತವಾಗಿ ತಯಾರಿ ಆರಂಭಿಸಿ. ನಮ್ಮ ವಾಟ್ಸಪ್ ಚಾನಲ್ ಅನ್ನು ಫಾಲೋ ಮಾಡುವ ಮೂಲಕ ನಿರಂತರವಾಗಿ ಅಪ್ಡೇಟ್ ಅನ್ನು ಪಡೆದುಕೊಳ್ಳಿ.

ಇದನ್ನು ಓದಿ

KSRLPS Recruitment 2026 : ಯಾವುದೇ ಪರೀಕ್ಷೆ ಶುಲ್ಕವಿಲ್ಲ, 28,000 ವೇತನದ ಹುದ್ದೆಗಳಿಗೆ ಹಿಂದೆ ಅರ್ಜಿ ಸಲ್ಲಿಸಿ. KSRLPS Important update..

Leave a Comment