India Post Car Driver : ಹತ್ತನೇ ತರಗತಿ ಪಾಸಾದವರಿಗೆ ಪೋಸ್ಟ್ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ₹63,200 ವರೆಗೆ ಸಂಬಳವಿದ್ದು, ಆಫ್ ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರಿ ಉದ್ಯೋಗ (government job) ಹುಡುಕುತ್ತಿರುವ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಿಂದ (India Post) ಉತ್ತಮ ಅವಕಾಶ ಲಭ್ಯವಾಗಿದೆ.
ಇಂಡಿಯಾ ಪೋಸ್ಟ್ ಬೆಂಗಳೂರು ಮೇಲ್ ಮೋಟಾರ್ ಸರ್ವಿಸ್ (mail motor service- MMS )ಘಟಕದಲ್ಲಿ ಸ್ಟಾಪ್ ಕಾರ್ ಡ್ರೈವರ್ (car driver) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯ ವಿಶೇಷವೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ಕೇಂದ್ರವೇತನ ಆಯೋಗ ಅನ್ವಯ ತಿಂಗಳಿಗೆ ₹19,900 – ₹63,200 ವರೆಗೆ ವೇತನ ದೊರೆಯಲಿದೆ.
ಇದನ್ನು ಓದಿ
India Post Car Driver : ಒಟ್ಟು ಎಷ್ಟು ಹುದ್ದೆಗಳಿವೆ?
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 11 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಬರ್ತೀಯಾ ಆಗಲಿದೆ.
- ಬೆಂಗಳೂರು ಮೇಲ್ ಮೋಟರ್ ಸರ್ವಿಸ್ (MMS ):10 ಹುದ್ದೆಗಳು
- ಮೈಸೂರು ಉಪ ಡಿಪೋ (Sub Dipot) : 1 ಹುದ್ದೆ
India Post Car Driver : ವಿದ್ಯಾರ್ಹತೆ ಏನು?
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
- ಲಘು ಹಾಗೂ ಬಾರಿ ವಾಹನ ಚಾಲನ (heavy motor vehicle) ಪರವಾನಗಿ ಹೊಂದಿರಬೇಕು.
- ಕನಿಷ್ಠ ಮೂರು ವರ್ಷಗಳ ವಾಹನ ಚಾಲನ ಅನುಭವ ಕಡ್ಡಾಯ.
- ವಾಹನಗಳ ಸಣ್ಣಪುಟ್ಟ ದುರಸ್ತಿ ಮಾಡುವ (basic mechanical knowledge) ಮೂಲಭೂತ ಯಾಂತ್ರಿಕ ಜ್ಞಾನ ಇರಬೇಕು.
India Post Car Driver : ವೇತನ ಎಷ್ಟು ಸಿಗಲಿದೆ ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಏಳನೇ ಕೇಂದ್ರ ವೇತನ ಆಯೋಗದ ವೇತನ ಮಟ್ಟ -2 ಅನ್ವಯ ನೇಮಕ ಮಾಡಲಾಗುತ್ತದೆ.
- ಕನಿಷ್ಠ ಮೂಲ ವೇತನ : ₹19,900
- ಗರಿಷ್ಠ ಮೂಲ ವೇತನ: ₹63,200
ಇದರ ಜೊತೆಗೆ ಸರ್ಕಾರದ ನಿಯಮಾನುಸಾರ ಅನ್ವಯಿಸುವ ವಿವಿಧ ಭತ್ಯೆಗಳು (allowance) ದೊರೆಯಲಿವೆ.
ಇದನ್ನು ಓದಿ
India Post Car Driver : ಯಾರು ಅರ್ಜಿ ಸಲ್ಲಿಸಬಹುದು?
ಈ ನೇಮಕಾತಿಯು ಸಾಮಾನ್ಯ ಸಾರ್ವಜನಿಕರಿಗೆ ಅಲ್ಲ. ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮಾತ್ರ, ಡೆಪ್ಯುಟೇಷನ್ ಆದಾರದ ಮೇಲೆ ಅವಕಾಶ ನೀಡಲಾಗಿದೆ.
ಅಂಚೆ ಇಲಾಖೆಯಲ್ಲಿರುವ ಕೆಳಕಂಡ ಸಿಬ್ಬಂದಿಗಳಿಗೆ ಆದ್ಯತೆ ನೀಡಲಾಗುತ್ತದೆ
- ಡಿಸ್ ಪ್ಯಾಚ್ ರೈಡರ್ಸ್ (dispatch riders)
- ಮಲ್ಟಿ ಟಾಸ್ಕಿಂಗ್ ಸ್ಟಾಪ್ (multitasking staff)
- ಇತರ ಅರ್ಹ ಅಂಚೆ ಇಲಾಖೆ ಸಿಬ್ಬಂದಿ
ಪಂಚ ಇಲಾಖೆಯಲ್ಲಿ ಸೂಕ್ತ ಅಭ್ಯರ್ತಿಗಳು ಲಭ್ಯವಾಗದಿದ್ದರೆ, ನಂತರ ಇತರ ಕೇಂದ್ರ ಸರ್ಕಾರದ ಇಲಾಖೆಗಳ ಉದ್ಯೋಗಿಗಳನ್ನು ಪರಿಗಣಿಸಲಾಗುತ್ತದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದ ವೇಳೆಗೆ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು.
ಅಧಿಸೂಚನೆಯಲ್ಲಿ ನೀಡಿರುವ ಷರತ್ತುಗಳಿಗೆ ಅನುಗುಣವಾಗಿ, ನಿವೃತ್ತಿಯಾಗಲಿರುವ ಅಥವಾ ಒಂದು ವರ್ಷದ ಒಳಗೆ ಮೀಸಲು ಪಡೆಗೆ ವರ್ಗಾವಣೆಯಾಗಲಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಯು ಅರ್ಜಿ ಸಲ್ಲಿಸಲು ಅವಕಾಶವಿದೆ.
ಇದನ್ನು ಓದಿ
KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.
India Post Car Driver : ಅರ್ಜಿ ಸಲ್ಲಿಸುವ ವಿಧಾನ
ಈ ನೇಮಕಾತಿಗೆ ಆನ್ಲೈನ್ ಅರ್ಜಿ ಅವಕಾಶ ಇಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ಆಫ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅದರೊಂದಿಗೆ ಈ ದಾಖಲೆಗಳನ್ನು ಲಗತ್ತಿಸಬೇಕು.
- 10ನೇ ತರಗತಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ.
- ಚಾಲನ ಪರವಾನಗಿ (driving licence)
- ವಯಸ್ಸಿನ ಪುರಾವೆ.
- ನೇಮಕಾತಿ ಸಂಬಂಧಿಸಿದ ದಾಖಲೆಗಳು.
- ಅನುಭವ ಪ್ರಮಾಣ ಪತ್ರ
- ಇತರೆ ಅಗತ್ಯ ಸ್ವಯಂ ದೃಢೀಕರಣ ದಾಖಲೆಗಳು.
ಪೂರ್ಣಗೊಂಡ ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಬೇಕು.
ವ್ಯವಸ್ಥಾಪಕರು (Manager), Mail Motor Service, ಬೆಂಗಳೂರು -560001
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 1/8/2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/9/2026
10ನೇ ತರಗತಿ ವಿದ್ಯಾರ್ಹತೆ, ಮಾನ್ಯ ಚಾಲನಾ ಪರವಾನಗಿ ಹಾಗೂ ಮೂರು ವರ್ಷಗಳ ಅನುಭವ ಹೊಂದಿರುವ ಅರ್ಹರು ಅಧಿಸೂಚನೆಯನ್ನು ಪರಿಶೀಲಿಸಿ, ನಿಗದಿತ ಅವಧಿ ಒಳಗೆ ಅರ್ಜಿ ಸಲ್ಲಿಸುವುದು ಒಳಿತು. ಈ ಹುದ್ದೆಗಳು ಉತ್ತಮ ವೇತನದ ಜೊತೆಗೆ ಕೇಂದ್ರ ಸರ್ಕಾರದ ಸೇವೆಯಲ್ಲಿ ಮುಂದುವರೆಯುವ ಅವಕಾಶವನ್ನು ಒದಗಿಸುತ್ತದೆ.
ಅಧಿಕೃತ ವೆಬ್ಸೈಟ್
https://www.indiapost.gov.in/vacancies
India Post Car Driver: ಭಾರತೀಯ ಅಂಚೆ ಇಲಾಖೆ ವೃತ್ತಿಯಿಂದ ಆಗುವ ಪ್ರಯೋಜನಗಳು?
- ಸ್ಥಿರ ಸರ್ಕಾರಿ ಉದ್ಯೋಗ – ಉದ್ಯೋಗ ಭದ್ರತೆ ಉತ್ತಮವಾಗಿರುತ್ತದೆ.
- ನಿಯಮಿತ ವೇತನ – ಸರ್ಕಾರದ ವೇತನ ಆಯೋಗದ ಪ್ರಕಾರ ಸಂಬಳ ಮತ್ತು ವಾರ್ಷಿಕ ವೇತನ ಹೆಚ್ಚಳ ದೊರೆಯುತ್ತದೆ.
- ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು – ಅನ್ವಯಿಸುವ ನಿಯಮಗಳ ಪ್ರಕಾರ ನಿವೃತ್ತಿ ಪ್ರಯೋಜನಗಳು ದೊರೆಯುತ್ತವೆ.
- ರಜೆ ಸೌಲಭ್ಯಗಳು – ಗಳಿಕೆ ರಜೆ, ವೈದ್ಯಕೀಯ ರಜೆ, ಪ್ರಸೂತಿ/ಪಿತೃತ್ವ ರಜೆ ಸೇರಿದಂತೆ ವಿವಿಧ ರಜೆಗಳು ಲಭ್ಯ
- ವೈದ್ಯಕೀಯ ಸೌಲಭ್ಯಗಳು – ಅರ್ಹತೆ ಮತ್ತು ನಿಯಮಗಳ ಪ್ರಕಾರ ವೈದ್ಯಕೀಯ ನೆರವು ದೊರೆಯಬಹುದು.
- ಬಡ್ತಿ ಅವಕಾಶಗಳು – ಅನುಭವ, ಸೇವಾ ಅವಧಿ ಮತ್ತು ಇಲಾಖಾ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆಗಳಿಗೆ ಬಡ್ತಿ ಪಡೆಯಬಹುದು.
- ಸಾಮಾಜಿಕ ಗೌರವ – ಸಾರ್ವಜನಿಕರಿಗೆ ಪ್ರಮುಖ ಸೇವೆ ನೀಡುವ ಸರ್ಕಾರಿ ಉದ್ಯೋಗ ವಾಗಿರುವುದರಿಂದ ಗೌರವ ದೊರೆಯುತ್ತದೆ.
- ವಿವಿಧ ಕೆಲಸದ ಅವಕಾಶಗಳು – ಅಂಚೆ ವಿತರಣೆ, ಉಳಿತಾಯ ಬ್ಯಾಂಕ್ ಸೇವೆಗಳು, ವಿಮೆ, ಪಾರ್ಸಲ್ ಸೇವೆ, ಡಿಜಿಟಲ್ ಸೇವೆಗಳು ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶವಿದೆ.
ಅಂಚೆ ಇಲಾಖೆಯಲ್ಲಿ ಸಿಗುವ ಉದ್ಯೋಗಾವಕಾಶವನ್ನು ಅರ್ಹರು ದಯಮಾಡಿ ಮಿಸ್ ಮಾಡಿಕೊಳ್ಳದೆ ಅರ್ಜಿಯನ್ನು ಸಲ್ಲಿಸಿ ಭಾರತೀಯ ಅಂಚೆ ಇಲಾಖೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಸಾಗಿಸಿ ಎಂಬ ಸಲಹೆಯನ್ನು ನೀಡಬಹುದು.
ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ ನಿಮ್ಮ ಹತ್ತಿರದ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
ಇದನ್ನು ಓದಿ
ಇದನ್ನು ಓದಿ
ಇದನ್ನು ಓದಿ