KRCL Recruitment 2026 : 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

WhatsAppಫಾಲೋ ಮಾಡಿ

KRCL Recruitment 2026 KRCL Recruitment 2026 : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL ) 201 ಸ್ಟೇಷನ್ ಮಾಸ್ಟರ್, ಅಸಿಸ್ಟೆಂಟ್ ಲೋಕೋ (ALP) ಪೈಲೆಟ್, ಟ್ರ್ಯಾಕ್ ಮೆಂಟೇನರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಒಟ್ಟು 201 ಸ್ಟೇಷನ್ ಮಾಸ್ಟರ್, ಎ ಎಲ್ ಪಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ.
  • ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2026

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ 2026 ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಡಿ ಸ್ಟೇಷನ್ ಮಾಸ್ಟರ್, ಅಸಿಸ್ಟೆಂಟ್ ಲೋಕೋ ಪೈಲೆಟ್ (ALP), ಜೂನಿಯರ್ ಇಂಜಿನಿಯರ್, ಟ್ರ್ಯಾಕ್ ಮೆಂಟೇನೆರ್ ಸೇರಿದಂತೆ ಒಟ್ಟು 201 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹತ್ತನೇ ತರಗತಿ, ಐಟಿಐ, ಡಿಪ್ಲೋಮೋ ಅಥವಾ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಕೊಂಕಣ ರೈಲ್ವೆಯ ಅಧಿಕೃತ ವೆಬ್ಸೈಟ್ ಮೂಲಕ ಆಗಸ್ಟ್ 31 2026 ರ ಒಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ,ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಇದನ್ನು ಓದಿ

Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿ ವೇತನ. ಆನ್ಲೈನ್ ಅರ್ಜಿ ಆಹ್ವಾನ, Important update.

KRCL Recruitment 2026 : ಹುದ್ದೆಗಳ ವಿವರ 

  • ನೇಮಕಾತಿ ಸಂಸ್ಥೆ : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL)
  • ಒಟ್ಟು ಹುದ್ದೆಗಳು : 201
  • ಉದ್ಯೋಗ ಸ್ಥಳ : ಅಖಿಲ ಭಾರತ (all India)/ ಕೊಂಕಣ ರೈಲ್ವೆ ವ್ಯಾಪ್ತಿ
  • ಮಾಸಿಕ ವೇತನ : ₹18,000/- ₹44,900/(ಹುದ್ದೆಗಳಿಗೆ ಅನುಗುಣವಾಗಿ)

ಖಾಲಿ ಇರುವ ಹುದ್ದೆಗಳು 

  1. ಜೂನಿಯರ್ ಇಂಜಿನಿಯರ್ (ಸಿವಿಲ್) : 25 ಹುದ್ದೆಗಳು
  2. ಟ್ರ್ಯಾಕ್ ಮೆಂಟೇನರ್ (track maintainer) : 57 ಹುದ್ದೆಗಳು
  3. ಸೀನಿಯರ್ ಸೆಕ್ಷನ್ ಇಂಜಿನಿಯರ್ (s and t): ಐದು ಹುದ್ದೆಗಳು
  4. ESTM -|||: 15 ಹುದ್ದೆಗಳು
  5. ಸೆಕ್ಷನ್ ಕಂಟ್ರೋಲರ್ : 9 ಹುದ್ದೆಗಳು
  6. ಸ್ಟೇಷನ್ ಮಾಸ್ಟರ್ : 15 ಹುದ್ದೆಗಳು
  7. ಗುಡ್ಸ್ ಟ್ರೈನ್ ಮ್ಯಾನೇಜರ್ : 10 ಹುದ್ದೆಗಳು
  8. ಅಸಿಸ್ಟೆಂಟ್ ಲೋಕೋ ಪೈಲೆಟ್ (ALP) : 30 ಹುದ್ದೆಗಳು
  9. ಸೀನಿಯರ್ ಸೆಕ್ಷನ್ ಇಂಜಿನಿಯರ್ (ಮೆಕಾನಿಕಲ್) : 6 ಹುದ್ದೆಗಳು
  10. ಟೆಕ್ನಿಷಿಯನ್ -||| (ಮೆಕಾನಿಕಲ್) : 15 ಹುದ್ದೆಗಳು
  11. ಕಮರ್ಷಿಯಲ್ ಸೂಪರ್ವೈಸರ್ : 7 ಹುದ್ದೆಗಳು

KRCL Recruitment 2026 : ವೇತನ ಶ್ರೇಣಿ 

  • ಜೂನಿಯರ್ ಇಂಜಿನಿಯರ್ (ಸಿವಿಲ್) :₹35,400
  • ಟ್ರ್ಯಾಕ್ ಮೆಂಟೇನರ್ :₹18,000
  • ಸೀನಿಯರ್ ಸೆಕ್ಷನ್ ಇಂಜಿನಿಯರ್ :₹44,900
  • ESTM -||| :₹19,900
  • ಸೆಕ್ಷನ್ ಕಂಟ್ರೋಲರ್ :₹35,400
  • ಸ್ಟೇಷನ್ ಮಾಸ್ಟರ್ :₹35,400
  • ಗೂಡ್ಸ್ ಟ್ರೈನ್ ಮ್ಯಾನೇಜರ್ :₹29,200
  • ಅಸಿಸ್ಟೆಂಟ್ ಲೋಕೋ ಪೈಲೆಟ್ : ₹19,900
  • ಸೀನಿಯರ್ ಸೆಕ್ಷನ್ ಇಂಜಿನಿಯರ್ :₹44,900 (ಮೆಕಾನಿಕಲ್)
  • ಜೂನಿಯರ್ ಇಂಜಿನಿಯರ್ (ಮೆಕಾನಿಕಲ್) :₹35,400
  • ಟೆಕ್ನಿಷಿಯನ್ -||| :₹19,900
  • ಕಮರ್ಷಿಯಲ್ ಸೂಪರ್ವೈಸರ್ : ₹35,400

ಇದನ್ನು ಓದಿ

Tumkur District Court Recruitment 2026 : 24 ಶೀಘ್ರಲಿಪಿಗಾರ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

KRCL Recruitment 2026 : ಶೈಕ್ಷಣಿಕ ವಿದ್ಯಾರ್ಹತೆ 

ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಐಟಿಐ, ಡಿಪ್ಲೋಮಾ ಅಥವಾ ಪದವಿ ಪೂರ್ಣಗೊಳಿಸಿರಬೇಕು.

  • ಜೂನಿಯರ್ ಮತ್ತು ಸೀನಿಯರ್ ಇಂಜಿನಿಯರ್ : ಸಂಬಂಧಿತ ವಿಭಾಗದಲ್ಲಿ (ಸಿವಿಲ್/ಮೆಕಾನಿಕಲ್/S/T) ಡಿಪ್ಲೋಮೋ ಅಥವಾ ನಾಲ್ಕು ವರ್ಷದ ಇಂಜಿನಿಯರಿಂಗ್ ಪದವಿ.
  • ಟ್ರ್ಯಾಕ್ ಮೆಂಟೇನರ್ : 10ನೇ ತರಗತಿ ಉತ್ತೀರ್ಣರಾಗಿರಬೇಕು.
  • ಅಸಿಸ್ಟೆಂಟ್ ಲೋಕೋ ಪೈಲೆಟ್ : ಹತ್ತನೇ ತರಗತಿ ಜೊತೆಗೆ ಐಟಿಐ ಅಥವಾ ಡಿಪ್ಲೋಮೋ/ಇಂಜಿನಿಯರಿಂಗ್ ಪದವಿ.
  • ಸ್ಟೇಷನ್ ಮಾಸ್ಟರ್, ಸೆಕ್ಷನ್ ಕಂಟ್ರೋಲರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಕಮರ್ಷಿಯಲ್ ಸೂಪರ್ವೈಸರ್ : ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.
  • ಟೆಕ್ನಿಷಿಯನ್ -||| , ESTM -||| : ಹತ್ತನೇ ತರಗತಿ ಜೊತೆಗೆ ಸಂಬಂಧಪಟ್ಟ ಟ್ರೇಡಿನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.

ಇದನ್ನು ಓದಿ

  1. House Construction Price Money : ಮನೆ ನಿರ್ಮಾಣ, ಉಚಿತ ಲ್ಯಾಪ್ಟಾಪ್, ಸ್ವಯಂ ಉದ್ಯೋಗಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ, important update.

KRCL Recruitment 2026 : ವಯೋಮಿತಿ ವಿವರ ಮತ್ತು ಅರ್ಜಿ ಶುಲ್ಕ 

  • ಗ್ರೂಪ್ ಸಿ ಹುದ್ದೆಗಳಿಗೆ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯಸ್ಸಾಗಿರಬೇಕು.
  • ಗ್ರೂಪ್ ಡಿ ಹುದ್ದೆಗಳಿಗೆ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು

ವಯೋಮಿತಿ ಸಡಿಲಿಕೆ

  • ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ : ಐದು ವರ್ಷಗಳ ಸಡಿಲಿಕೆ
  • OBC – NCL ಅಭ್ಯರ್ಥಿಗಳಿಗೆ: ಮೂರು ವರ್ಷಗಳ ಸಡಿಲಿಕೆ.
  • ಮಾಜಿ ಸೈನಿಕರಿಗೆ : ಮೂರು ವರ್ಷಗಳ ಸೆಡಿಲಿಕೆ (ಸೇವಾ ಅವಧಿಯನ್ನು ಕಳೆದ ನಂತರ)
  • ಅಂಗವಿಕಲ ಅಭ್ಯಾರ್ಥಿಗಳಿಗೆ : ಹತ್ತು ವರ್ಷಗಳ ಸಡಿಲಿಕೆ

ಅರ್ಜಿ ಶುಲ್ಕ 

  • ಸಾಮಾನ್ಯ ಮತ್ತು OBC – NCL ಅಭ್ಯರ್ಥಿಗಳಿಗೆ : ₹1,180
  • ಎಸ್ ಸಿ, ಎಸ್ ಟಿ/ಮಾಜಿ ಸೈನಿಕರು/ಮಹಿಳಾ/ಅಲ್ಪಸಂಖ್ಯಾತರು/ EBC/PWBD ಅಭ್ಯರ್ಥಿಗಳಿಗೆ : ಈ ವರ್ಗದ ಅಭ್ಯರ್ಥಿಗಳು ಪಾವತಿಸುವ ಶುಲ್ಕವನ್ನು ಅವರು CBT ಪರೀಕ್ಷೆಗೆ ಹಾಜರಾದ ನಂತರ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಿ ಮರುಪಾವತಿಸಲಾಗುವುದು .
  • ಪಾವತಿ ವಿಧಾನ : ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕು.
KRCL Recruitment 2026 : ಆಯ್ಕೆ ಪ್ರಕ್ರಿಯೆ 
  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (Comptuter Based test) : ತಪ್ಪು ಉತ್ತರಗಳಿಗೆ ನಕಾರಾತ್ಮಕ ಅಂಕ ಇರುತ್ತದೆ. (Negative Marking)
  2. ಆಪ್ಟಿಟ್ಯೂಡ್ ಟೆಸ್ಟ್ (CBAT/OMR) : ಕೇವಲ ಸೆಕ್ಷನ್ ಕಂಟ್ರೋಲರ್, ಸ್ಟೇಷನ್ ಮಾಸ್ಟರ್ ಮತ್ತು ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ.
  3. ದೈಹಿಕ ಸಾಮರ್ಥ್ಯ ಪರೀಕ್ಷೆ (physical efficiency test) : ಕೇವಲ ಟ್ರ್ಯಾಕ್ ಮೆಂಟೇನರ್ ಹುದ್ದೆಗೆ ಮಾತ್ರ ಕಡ್ಡಾಯ ಪರೀಕ್ಷೆ.
  4. ದಾಖಲೆಗಳ ಪರಿಶೀಲನೆ (Documents Varification): ರೈಲ್ವೆ ನಿಯಮಗಳ ಪ್ರಕಾರ ದೈಹಿಕ ದೃಷ್ಟಿ ಹಾಗೂ ಸಾಮಾನ್ಯ ಫಿಟ್ನೆಸ್ ಪರೀಕ್ಷೆ.
KRCL Recruitment 2026 : ಅರ್ಜಿ ಸಲ್ಲಿಸುವುದು ಹೇಗೆ ?

Step 1. ಮೊದಲಿಗೆ ಕೊಂಕಣ ರೈಲ್ವೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

https://konkanrailway.com/

Step 2. ನೇಮಕಾತಿ ವಿಭಾಗದಲ್ಲಿ KRCL Recruitment 2026 ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಓದಿಕೊಳ್ಳಿ.

Step 3. ಆನ್ಲೈನ್ ಅರ್ಜಿ (Apply Online)ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸದಾಗಿ ನೋಂದಣಿ (registration) ಮಾಡಿಕೊಳ್ಳಿ.

Step 4. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ ಆನ್ಲೈನ್ ಅರ್ಜಿಯಲ್ಲಿ ಕೇಳಲಾದ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.

Step 5. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ನಿಮ್ಮ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

Step 6. ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

Step 7. ಅಂತಿಮವಾಗಿ ವಿವರಗಳನ್ನು ಪರಿಶೀಲಿಸಿ ಅರ್ಜಿಯನ್ನು submit ಮಾಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ರಿಜಿಸ್ಟ್ರೇಷನ್ ನಂಬರ್ ಇರುವ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

 

ಇದನ್ನು ಓದಿ

KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

Leave a Comment