House Construction Price Money : ಚಿಕ್ಕಮಗಳೂರು ನಗರಸಭೆಯಿಂದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಭರ್ಜರಿ ಸಹಾಯಧನ. ಮನೆ ನಿರ್ಮಾಣ, ಉಚಿತ ಲ್ಯಾಪ್ಟಾಪ್, ಮತ್ತು ಸ್ವಯಂ ಉದ್ಯೋಗಕ್ಕೆ ಅವಕಾಶ. ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಒಂದು ಸುವರ್ಣ ಅವಕಾಶ ಲಭ್ಯವಾಗಿದೆ.
2026 27 ನೇ ಸಾಲಿನ ಕ್ರಿಯಾ ಯೋಜನೆ ಅಡಿ ನಗರಸಭೆ ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಮತ್ತು ಸ್ವಯಂ ಉದ್ಯೋಗ ಆರಂಭಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ.
ಅರ್ಹರು ಆಗಸ್ಟ್ 18 ರೊಳಗೆ ಅರ್ಜಿ ಸಲ್ಲಿಸಿ, ಈ ಸೌಲಭ್ಯಗಳನ್ನು ಪಡೆಯಬಹುದು.
ಇದನ್ನು ಓದಿ
House Construction Price Money : ಸಿಗಲಿರುವ ಮುಖ್ಯ ಸೌಲಭ್ಯಗಳು (ಸಹಾಯಧನ).
ನಗರಸಭೆಯ ಈ ವರ್ಷದ ಕ್ರಿಯಾಯೋಜನೆಯಡಿ ಮೂರು ಪ್ರಮುಖ ವಿಭಾಗಗಳಲ್ಲಿ ಸಹಾಯಧನ ಕಲ್ಪಿಸಲಾಗಿದೆ.
ಇದು ನಗರದಲ್ಲಿ ವಾಸಿಸುವ ಹಿಂದುಳಿದ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವ ಮತ್ತು ಶೈಕ್ಷಣಿಕ ಹಾಗೂ ಉದ್ಯೋಗಾತ್ಮಕ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶವೆ ಹೊಂದಿದೆ.
House Construction Price Money : ಮನೆ ನಿರ್ಮಾಣಕ್ಕೆ ಸಹಾಯಧನ.
ಸ್ವಂತ ಜಮೀನು ಅಥವಾ ಮಾನ್ಯ ಹಕ್ಕು ಪತ್ರ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಪಕ್ಕ ಮನೆ ನಿರ್ಮಿಸಿಕೊಳ್ಳಲು ಕಾರ್ತಿಕ ನೆರವು ನೀಡಲಾಗುತ್ತದೆ. ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ ಇದು ದೊಡ್ಡ ಆಶಾಕಿರಣವಾಗಿದೆ.
ಸರ್ಕಾರಿ ವಸತಿ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಆದ್ಯತೆ ನೀಡುವ ನೀತಿಯ ಭಾಗವಾಗಿ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಇದನ್ನು ಓದಿ
LPG Cylinder Price : ಎಲ್ ಪಿ ಜಿ ಸಿಲಿಂಡರ್ ಬೆಲೆ ಇಳಿಕೆ, Important update.
House Construction Price Money : ಉಚಿತ ಲ್ಯಾಪ್ಟಾಪ್ ಸಹಾಯಧನ.
ಎಂಬಿಬಿಎಸ್ (MBBS )ಹಾಗೂ ಬಿಇ (B,E) ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಸಲು ಸಹಾಯಧನ ನೀಡಲಾಗುತ್ತಿದೆ.
ಆಧುನಿಕ ಶಿಕ್ಷಣದಲ್ಲಿ ಡಿಜಿಟಲ್ ಸಾಧನಗಳು ಅನಿವಾರ್ಯವಾಗಿರುವುದರಿಂದ ಈ ಕಾಲದಲ್ಲಿ ವಿದ್ಯಾರ್ಥಿಗಳು ಅಧ್ಯಯನ, ಸಂಶೋಧನೆ ಮತ್ತು ಆನ್ಲೈನ್ ಸಂಪನ್ಮೂಲಗಳನ್ನು ಸುಲಭವಾಗಿ ಬಳಸಲು ಇದು ಸಹಾಯಕವಾಗಲಿದೆ.
ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕ ಯುವತಿಯರಿಗೆ ಇದು ವಿಶೇಷ ಪ್ರೋತ್ಸಾಹ.
House Construction Price Money : ಸ್ವಯಂ ಉದ್ಯೋಗಕ್ಕೆ ಸಹಾಯಧನ.
ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸ್ವಂತ ಉದ್ಯೋಗ ಆರಂಭಿಸಲು ಆರ್ಥಿಕ ಸಹಾಯ ಧನ ಕಲ್ಪಿಸಲಾಗಿದೆ.
ಸಣ್ಣ ವ್ಯವಹಾರ, ಸೇವಾ ಘಟಕ ಅಥವಾ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಪ್ರಾರಂಭಿಸಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಇದರಿಂದ ಉದ್ಯೋಗಾವಕಾಶಗಳು ಹೆಚ್ಚುವುದಲ್ಲದೆ ಕುಟುಂಬದ ಆದಾಯದ ಮೂಲವೂ ಬಲಗೊಳ್ಳುತ್ತದೆ.
ಇದನ್ನು ಓದಿ
House Construction Price Money : ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ.
ಈ ಸೌಲಭ್ಯಗಳನ್ನು ಪಡೆಯಲು ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಚಿಕ್ಕಮಗಳೂರು ನಗರಸಭೆ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 18 2026. ಸಂಜೆ 5:00 ಒಳಗೆ ಅರ್ಜಿ ಸಲ್ಲಿಸಬೇಕು. ಸಮಯ ಮೀರಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಆದ್ದರಿಂದ ಅರ್ಹರು ತಡ ಮಾಡದೆ ದಾಖಲೆಗಳನ್ನು ಸಿದ್ಧಪಡಿಸಿ ಕಚೇರಿಗೆ ಭೇಟಿ ನೀಡುವುದು ಉತ್ತಮ.
ನಗರಸಭೆ ಕಚೇರಿ ವಿಳಾಸ : ಡಿ.ಸಿ ಕಚೇರಿ ಸಮೀಪ, ಬೇಲೂರು ರಸ್ತೆ, ಚಿಕ್ಕಮಗಳೂರು 577 101.
ಅಧಿಕೃತ ವೆಬ್ಸೈಟ್
https://www.chickamagalurcity.mrc.gov.in/
ಅಗತ್ಯವಿರುವ ಪ್ರಮುಖ ದಾಖಲೆಗಳು ?
ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
- ಆಧಾರ್ ಕಾರ್ಡ್ (Aadhar card)
- ಬ್ಯಾಂಕ್ ಪಾಸ್ ಬುಕ್ (bank passbook)
- ಬಿಪಿಎಲ್ ಕಾರ್ಡ್ (BPL ration card)
- ಆರ್ ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ (cast and income certificate)
- ಪಾಸ್ ಪೋರ್ಟ್ ಸೈಜ್ ಫೋಟೋ. (Passport size photo)
ಎಲ್ಲಾ ದಾಖಲೆಗಳು ಮೂಲ ಹಾಗೂ ನಕಲು ಪ್ರತಿಗಳೊಂದಿಗೆ ಇರಬೇಕು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸುವ ಸಾಧ್ಯತೆ ಇರುವುದರಿಂದ ಎಲ್ಲಾ ದಾಖಲೆಗಳನ್ನು ಪೂರ್ಣವಾಗಿ ಸಿದ್ಧಪಡಿಸಿಕೊಳ್ಳುವುದು ಮುಖ್ಯ.
ಪೌರಾಯುಕ್ತಾರಾದ ಬಿ ಸಿ ಬಸವರಾಜು ಕೂಡಲೇ ಅರ್ಜಿ ಸಲ್ಲಿಸುವಂತೆ ಕರೆ ನೀಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಮನೆ, ಶಿಕ್ಷಣ ಮತ್ತು ಉದ್ಯೋಗ ಈ ಮೂರೂ ಕ್ಷೇತ್ರಗಳಲ್ಲಿ ನೆರವು ನೀಡುವುದರಿಂದ ಕುಟುಂಬಗಳು ಸ್ವಾವಲಂಬನೆ ಯತ್ತ ಸಾಗಬಹುದು.
ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿರುವ ಅರ್ಹ ಕುಟುಂಬಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು..
ಅರ್ಹರು ಆಗಸ್ಟ್ 18 ರೊಳಗೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆಯಿರಿ. ಸಮಯವನ್ನು ವ್ಯರ್ಥ ಮಾಡದೆ ಕಚೇರಿಗೆ ಭೇಟಿ ನೀಡಿ.
House Construction Price Money : ಕ್ರಿಯಾ ಯೋಜನೆಯಿಂದ ಬಡವರಿಗೆ ಆಗುವ ಪ್ರಯೋಜನಗಳು?
- ಸ್ವಯಂ ಉದ್ಯೋಗಕ್ಕೆ ಅಗತ್ಯವಾದ ಉಪಕರಣಗಳು ಅಥವಾ ಆರ್ಥಿಕ ನೆರವು
- ಕೌಶಲಾಭಿವೃದ್ಧಿ ಮತ್ತು ಉದ್ಯೋಗ ತರಬೇತಿ ಕಾರ್ಯಕ್ರಮಗಳು
- ಮನೆ ನಿರ್ಮಾಣ ಅಥವಾ ಮನೆ ದುರಸ್ತಿ ಯೋಜನೆಗಳಿಗೆ ಸಹಾಯ
- ಕುಡಿಯುವ ನೀರು, ಒಳಚರಂಡಿ, ರಸ್ತೆ, ಬೀದಿ ದೀಪಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿ.
- ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅಧ್ಯಯನ ಸಾಮಗ್ರಿಗಳು ಅಥವಾ ಇತರೆ ಶಿಕ್ಷಣ ಸಂಬಂಧಿತ ಸೌಲಭ್ಯಗಳು.
- ಮಹಿಳಾ ಸ್ವ ಸಹಾಯ ಸಂಘಗಳಿಗೆ ಪ್ರೋತ್ಸಾಹ ಮತ್ತು ಜೀವನೋಪಾಯ ಕಾರ್ಯಕ್ರಮಗಳು.
- ಆರೋಗ್ಯ ಮತ್ತು ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳು ಹಾಗೂ ಕೆಲವು ವಿಶೇಷ ಆರೋಗ್ಯ ಶಿಬಿರಗಳು.
- ಸಮುದಾಯ ಭವನ, ಸ್ಮಶಾನ, ಕುಡಿಯುವ ನೀರಿನ ವ್ಯವಸ್ಥೆ, ಮೊದಲಾದ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿ.
ಅರ್ಜಿ ಸಲ್ಲಿಸಲು ಬಯಸುವವರು ಚಿಕ್ಕಮಗಳೂರು ನಗರ ಸಭೆ ಕಚೇರಿಗೆ ನೇರವಾಗಿ ಭೇಟಿ ನೀಡಿ ಮಾಹಿತಿಯೊಂದಿಗೆ ಸ್ವತಃ ನೀವೇ ಅರ್ಜಿ ಸಲ್ಲಿಸಿ. ಮತ್ತು ಅದರ ಮಾಹಿತಿಯನ್ನು ಅವಶ್ಯಕತೆ ಇರುವವರಿಗೆ ಆದಷ್ಟು ಶೇರ್ ಮಾಡಿ ಅವರು ಸಹ ಈ ಕ್ರಿಯಾಯೋಜನೆಯಲ್ಲಿ ತಮ್ಮ ಜೀವನವನ್ನು ನಿರ್ಮಿಸಿಕೊಳ್ಳಲು ಸಹಾಯಧನವನ್ನು ಪಡೆಯುವಂತೆ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಮೂಲಕ ಚೆಕ್ ಮಾಡಿ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಈ ಕ್ರಿಯಾಯೋಜನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಧನ್ಯವಾದಗಳು.
ಇದನ್ನು ಓದಿ
KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.