KSP Recruitment 2026: 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪಿಯುಸಿ ಪಾಸಾದವರಿಗೆ ಅವಕಾಶ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ KEA ಮೂಲಕ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಶೈಕ್ಷಣಿಕ ಅರ್ಹತೆ ವಯೋಮಿತಿ ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ(police Department) ಸೇವೆ ಸಲ್ಲಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಕನಸು ಹೊತ್ತಿರುವ ಕರ್ನಾಟಕದ ಯುವಕ ಯುವತಿಯರಿಗೆ ರಾಜ್ಯ ಸರ್ಕಾರವು ಬಂಪರ್ ಸುದ್ದಿಯೊಂದು ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು( KSP )ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸಲಿದ್ದು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಮಿಕ್ಕುಳಿದ ವೃಂದ ಸೇರಿ ಒಟ್ಟು 3,991 ಹುದ್ದೆಗಳನ್ನು ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ, ವಯೋಮಿತಿ ಸಡಿಲಿಕೆ, ದೈಹಿಕ ಪರೀಕ್ಷೆ ,ಹಾಗೂ ಶುಲ್ಕದ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನು ಓದಿ
KSP Recruitment 2026: ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ (Vacancy details)
ಒಟ್ಟು 3,991 ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳನ್ನು ಎರಡು ಪ್ರಮುಖ ವೃಂದಗಳ ಅಡಿಯಲ್ಲಿ ವಿಂಗಡಿಸಿ ಭರ್ತಿ ಮಾಡಲಾಗುತ್ತಿದೆ.
- ಮಿಕ್ಕುಳಿದ ವೃಂದ ( Non -Kalyana Karnataka -RPC) : 3,395 ಹುದ್ದೆಗಳು ( ನೇರ ಪುರುಷ- 2,266, ನೇರ ಮಹಿಳಾ-755, ಸೇವಾನಿರತ -339, ತೃತಿಯ ಲಿಂಗ-35 ).
- ಕಲ್ಯಾಣ ಕರ್ನಾಟಕ (Kalyana Karnataka -KK): 596 ಹುದ್ದೆಗಳು (ನೇರ ಪುರುಷ- 398 , ನೇರ ಮಹಿಳಾ- 133, ಸೇವಾನಿರತ -60, ತೃತೀಯಲಿಂಗ -5 )
- ವೇತನ ಶ್ರೇಣಿ Salary: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹37,500 ರಿಂದ ₹76,100 ವರೆಗೆ ವೇತನ ನೀಡಲಾಗುತ್ತದೆ.
KSP Recruitment 2026: ಶೈಕ್ಷಣಿಕ ಅರ್ಹತೆ (Educational qualification)
- KSP Recruitment 2026: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಕಡ್ಡಾಯವಾಗಿ ಪಿಯುಸಿ (PUC) ಅಥವಾ 12ನೇ ತರಗತಿ ಅಥವಾ ಅದಕ್ಕೆ ತತ್ಸಮಾನದ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
- ಎರಡು ವರ್ಷಗಳ ಐಟಿಐ( ITI) ಕೋರ್ಸ್ ಅಥವಾ 3 ವರ್ಷಗಳ ಡಿಪ್ಲೋಮೋ (Diploma )ಮಾಡಿದವರು ಸಹ ಸರ್ಕಾರದ ನಿಯಮಾವಳಿಯಂತೆ (ಭಾಷಾ ವಿಷಯ ಉತ್ತೀರ್ಣರಾಗಿದ್ದಲ್ಲಿ )ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
KSP Recruitment 2026: ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ (Age limit Details)
ಸರ್ಕಾರದ ಹೊಸ ನಿಯಮದನ್ವಯ ( ಐದು ವರ್ಷಗಳ ಸೆಡಿಲಿಕೆ ಸೇರಿಸಿ) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸಲಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು.
- ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳಿಗೆ: ಗರಿಷ್ಠ 33 ವರ್ಷಗಳು.
- OBC (2A,2B,3A,3B), SC, ST ಹಾಗೂ ಪ್ರವರ್ಗ 1 ರ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷಗಳು.
- ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳು.
- ಸೇವಾ ನಿರತ ಅಭ್ಯರ್ಥಿಗಳಿಗೆ: ಸಾಮಾನ್ಯ ವರ್ಗಕ್ಕೆ 38 ವರ್ಷ ಹಾಗೂ ಮೀಸಲಾತಿ ವರ್ಗಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
KSP Recruitment 2026: ಆಯ್ಕೆ ಪ್ರಕ್ರಿಯೆ ( Selection process)
ಅಭ್ಯರ್ಥಿಗಳನ್ನು ಕಟ್ಟುನಿಟ್ಟಾದ ಹಾಗೂ ಪಾರದರ್ಶಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು.
ಲಿಖಿತ ಪರೀಕ್ಷೆ (written Exam)
- KEA ವತಿಯಿಂದ ಆಫ್ ಲೈನ್ OMR ಮಾದರಿಯಲ್ಲಿ 100 ಅಂಕಗಳ ಲಿಖಿತ ಪರೀಕ್ಷೆ ನಡೆಯಲಿದೆ.
- ಪರೀಕ್ಷೆಯ ಅವಧಿ 1.5 ಗಂಟೆ (90 ನಿಮಿಷಗಳು) ಇರುತ್ತದೆ.
- ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು (Negative Marking) ಕಡಿತಗೊಳಿಸಲಾಗುತ್ತದೆ.
- ಪರೀಕ್ಷಾ ದಿನಾಂಕ: ಆಗಸ್ಟ್ 2.2026 ರಂದು ನಡೆಯಲಿದೆ.
ದೇಹದಾಢ್ಯತೆ ಹಾಗೂ ಸಹಿಷ್ಣುತ ಪರೀಕ್ಷೆ (PST&ET)
ಲಿಖಿತ ಪರೀಕ್ಷೆಯಲ್ಲಿ 1:5 ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಯಲಿದೆ.
- ಪುರುಷರಿಗೆ: ಕನಿಷ್ಠ ಎತ್ತರ 168 ಸೆಂಟಿಮೀಟರ್ ಹಾಗೂ ಎದೆ ಸುತ್ತಳತೆ 86 ಸೆಂಟಿಮೀಟರ್ (ವಿಸ್ತರಿಸಿದಾಗ) ಇರಬೇಕು. 1600 ಮೀಟರ್ ಓಟವನ್ನು 6 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.
- ಮಹಿಳೆಯರಿಗೆ: ಕನಿಷ್ಠ ಎತ್ತರ 157cm ಹಾಗೂ ಕನಿಷ್ಠ ತೂಕ 45 ಕೆಜಿ ಇರಬೇಕು. 400 ಮೀಟರ್ ಓಟವನ್ನು 2 ನಿಮಿಷದೊಳಗೆ ಪೂರ್ಣಗೊಳಿಸಬೇಕು.
ವೈದ್ಯಕೀಯ ಪರೀಕ್ಷೆ (Medical Test)
ದೈಹಿಕ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಂತಿಮ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
KSP Recruitment 2026: ಅರ್ಜಿ ಶುಲ್ಕದ ವಿವರ( Application Fee)
ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಶುಲ್ಕವನ್ನು ಪಾವತಿಸ ಬೇಕಾಗಿರುತ್ತದೆ.
- ಸಾಮಾನ್ಯ ಅರ್ಹತೆ (GM) ಮತ್ತು ಪ್ರವರ್ಗ 2A ,2B , 3A , 3B ಅಭ್ಯರ್ಥಿಗಳಿಗೆ: ₹750.
- ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ (ST), ಪ್ರವರ್ಗ-1 , ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹ 500.
KSP Recruitment 2026: ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ಸೈಟ್
https://cetonline.karnataka.gov.in/kea/ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಅಧಿಸೂಚನೆ ನಿನ್ನೆ ರಾತ್ರಿ ಬಿಡುಗಡೆ ಆಗಿರುವುದರಿಂದ, KEA ಪೋರ್ಟಲ್ ನಲ್ಲಿ ಇಂದು ಆನ್ಲೈನ್ ಅರ್ಜಿ ತೆರೆಯುವ ಸಾಧ್ಯತೆ ಇದೆ. ಅರ್ಜಿ ತೆರೆದ ತಕ್ಷಣ ನಿಮಗೆ ಇಲ್ಲಿ ಮುಂದಿನ ಹಂತಗಳನ್ನು ತಿಳಿಸಲಾಗುವುದು. ಹಾಗಾಗಿ ಆ ಕ್ಷಣದ ಮಾಹಿತಿಗೆ ನಮ್ಮ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ.
KSP Recruitment 2026: ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 8 ಜೂನ್ 2026.
- ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 3 ಜುಲೈ 2026.
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 4 ಜುಲೈ 2026
- ಲಿಖಿತ ಪರೀಕ್ಷೆಯ ದಿನಾಂಕ: 2 ಆಗಸ್ಟ್ 2026.
ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ. ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಹಾಗೂ ಲಿಖಿತ ಪರೀಕ್ಷೆಗೆ ಸಿದ್ಧರಾಗಿ.