BEL Recruitment 2026 Kannada : ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. 350 ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ₹13 ಲಕ್ಷ ಸಂಬಳದ ಪ್ಯಾಕೇಜ್ ಮತ್ತು ಆನ್ಲೈನ್ ಅರ್ಜಿ ಲಿಂಕ್ ಇಲ್ಲಿದೆ.
ನೀವು ಇಂಜಿನಿಯರ್ ಮುಗಿಸಿ ಕೇಂದ್ರ ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶವಿದೆ. ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯ ನವರತ್ನ ಸಂಸ್ಥೆಯಾದ “ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್” (BEL) ಒಟ್ಟು 350 ಪ್ರೊಬೇಷನರಿ ಇಂಜಿನಿಯರ್ (Grade E-11) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ನೇಮಕಾತಿಯ ಅತ್ಯಂತ ಆಕರ್ಷಕ ವಿಷಯವೆಂದರೆ, ಇದಕ್ಕೆ GATE ಅಂಕಗಳ ಅಗತ್ಯವಿಲ್ಲ! BEL ಸಂಸ್ಥೆಯೇ ಸ್ವತಂತ್ರವಾಗಿ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು (CBT) ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಈ ಲೇಖನದಲ್ಲಿ ನಾವು ಈ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳದ ವಿವರ, ಆಯ್ಕೆ ಪ್ರಕ್ರಿಯೆ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ಹಂತಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
BEL Recruitment 2026 Kannada : ಪ್ರಮುಖ ವಿವರಗಳು
- ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
- ಒಟ್ಟು ಹುದ್ದೆಗಳು : 350
- ಹುದ್ದೆಯ ಹೆಸರು : ಪ್ರೊಬೇಷನರಿ ಇಂಜಿನಿಯರ್ (Probationary Engineer)
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ ಮಾತ್ರ.
- ಅಧಿಸೂಚನೆ ಪ್ರಕಟವಾದ ದಿನಾಂಕ : 28 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ನವೆಂಬರ್ 2026 (ರಾತ್ರಿ 11:59ರವರೆಗೆ)
- ಲಿಖಿತ ಪರೀಕ್ಷೆಯ ದಿನಾಂಕ (ತಾತ್ಕಾಲಿಕ) : 22 ಡಿಸೆಂಬರ್ 2026
- ಅಧಿಕೃತ ವೆಬ್ಸೈಟ್ : https://bel-india.in/homepage/
ವಿಭಾಗವಾರು ಹುದ್ದೆಗಳ ಹಂಚಿಕೆ ವಿವರಗಳು (Vacancy Details)
ಒಟ್ಟು 350 ಹುದ್ದೆಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗಗಳಿಗೆ ಹಂಚಿಕೆ ಮಾಡಲಾಗಿದ್ದು, ವರ್ಗವಾರು ಸಂಪೂರ್ಣ ವಿವರಗಳನ್ನು ಈ ಕೆಳಗಿನಂತೆ ನೋಡಬಹುದು.
1. ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ (Total: 200 Post’s)
- ಸಾಮಾನ್ಯ ವರ್ಗ (UR) : 81 ಹುದ್ದೆಗಳು
- ಆರ್ಥಿಕವಾಗಿ ಹಿಂದುಳಿದ ವರ್ಗ (EWS) : 20 ಹುದ್ದೆಗಳು
- ಇತರ ಹಿಂದುಳಿದ ವರ್ಗ (OBC – NCL) : 54 ಹುದ್ದೆಗಳು
- ಪರಿಶಿಷ್ಟ ಜಾತಿ (SC) : 30 ಹುದ್ದೆಗಳು
- ಪರಿಶಿಷ್ಟ ಪಂಗಡ (ST) : 15 ಹುದ್ದೆಗಳು
2. ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ (Total: 150 Post’s)
- ಸಾಮಾನ್ಯ ವರ್ಗ (UR) : 62 ಹುದ್ದೆಗಳು
- ಆರ್ಥಿಕವಾಗಿ ಹಿಂದುಳಿದ ವರ್ಗ (EWS) : 15 ಹುದ್ದೆಗಳು
- ಇತರ ಹಿಂದುಳಿದ ವರ್ಗ (OBC – NCL) : 40 ಹುದ್ದೆಗಳು
- ಪರಿಶಿಷ್ಟ ಜಾತಿ (SC) : 22 ಹುದ್ದೆಗಳು
- ಪರಿಶಿಷ್ಟ ಪಂಗಡ (ST) : 11 ಹುದ್ದೆಗಳು
ಒಟ್ಟು ನೇಮಕಾತಿ ಸಾರಾಂಶ : ಸಾಮಾನ್ಯ (UR) -143, EWS – 35 , OBC – 94 , SC – 52, ST – 26 ಸೇರಿ ಒಟ್ಟು 350 ಹುದ್ದೆಗಳು.
BEL Recruitment 2026 Kannada : ಅರ್ಹತಾ ಮಾನದಂಡಗಳು
ಅಭ್ಯರ್ಥಿಗಳು 1 ಅಕ್ಟೋಬರ್ 2026ರ ಅನ್ವಯ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
1. ಶೈಕ್ಷಣಿಕ ಅರ್ಹತೆ (Educational Qualification)
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ AICTE ಅನುಮೋದಿತ ಸಂಸ್ಥೆಯಿಂದ 4 ವರ್ಷದ ಪೂರ್ಣಾವಧಿಯ B.E / B.Tech/B.Sc engineering ಪದವಿ ಪಡೆದಿರಬೇಕು.
ಕನಿಷ್ಠ ಅಂಕಗಳು
- ಸಾಮಾನ್ಯ (General) , EWS ಮತ್ತು OBC ಅಭ್ಯರ್ಥಿಗಳು ಇಂಜಿನಿಯರಿಂಗ್ ನಲ್ಲಿ ಪ್ರಥಮ ದರ್ಜೆ (First Class) ಹೊಂದಿರಬೇಕು.
- SC, ST, pwbd (ವಿಕಲಚೇತನ) ಅಭ್ಯರ್ಥಿಗಳಿಗೆ ಪಾಸ್ ಕ್ಲಾಸ್ ( Pass Class) ಇದ್ದರೆ ಸಾಕು.
2. ವಯೋಮಿತಿ (Age Limit)
- ಸಾಮಾನ್ಯ ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 25 ವರ್ಷಗಳು.
- ವಯೋಮಿತಿ ಸಡಿಲಿಕೆ (ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ)
- OBC (NCL) ಅಭ್ಯರ್ಥಿಗಳಿಗೆ : 3 ವರ್ಷಗಳು (ಗರಿಷ್ಠ 28 ವರ್ಷ)
- SC, ST ಅಭ್ಯರ್ಥಿಗಳಿಗೆ : 5 ವರ್ಷಗಳು (ಗರಿಷ್ಠ 30 ವರ್ಷ)
- PWBD ಅಭ್ಯರ್ಥಿಗಳಿಗೆ : 10 ವರ್ಷಗಳು
ಸಂಬಳದ ವಿವರ ಮತ್ತು ಸೇವಾ ಬಾಂಡ್ (Salary & Service Bond)
BEL Recruitment 2026 Kannada : ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಮತ್ತು ಭತ್ಯೆ ಗಳು ಸಿಗಲಿದೆ.
- ವೇತನ ಶ್ರೇಣಿ (Pay Scale) : ₹40,000 ರಿಂದ ₹1,40,000 (Grade E-||)
- ವಾರ್ಷಿಕ ಆದಾಯ (CTC) : ವರ್ಷಕ್ಕೆ ಸುಮಾರು ₹13 ಲಕ್ಷ (13 LPA) ಪ್ಯಾಕೇಜ್ ಇರಲಿದೆ.
- ಇತರ ಸವಲತ್ತುಗಳು : ಮೂಲವೇತನದ ಜೊತೆಗೆ ತುಟ್ಟಿ ಭತ್ಯೆ (DA) , ಮನೆ ಬಾಡಿಗೆ ಭತ್ಯೆ (HRA) , ವೈದ್ಯಕೀಯ ವಿಮೆ, ಪ್ರದರ್ಶನ ಆಧಾರಿತ ಪ್ರೋತ್ಸಾಹಕ ಧನ (PRP) ಸೇರಿದಂತೆ ಕಂಪನಿಯ ನಿಯಮಾವಳಿಗಳ ಪ್ರಕಾರ ಎಲ್ಲಾ ಸೌಲಭ್ಯಗಳು ಸಿಗುತ್ತವೆ.
- ಸೇವಾ ಬಾಂಡ್ (Service Bond) : ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ 6 ತಿಂಗಳು ತರಬೇತಿ ಇರುತ್ತದೆ. ತರಬೇತಿ ಮುಗಿದ ನಂತರ ಕನಿಷ್ಠ 2 ವರ್ಷಗಳ ಕಾಲ ಸಂಸ್ಥೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲು ₹2,00,000 ಮೊತ್ತದ ಬಾಂಡ್ ನೀಡಬೇಕಾಗುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Process)
ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ನಡೆಯಲಿದ್ದು, ಎರಡು ಹಂತಗಳನ್ನು ಒಳಗೊಂಡಿರುತ್ತದೆ.
1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT – 85% ವೇಟೇಜ್)
ಇದು ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳ (MCQ) ಲಿಖಿತ ಪರೀಕ್ಷೆಯಾಗಿದೆ. ಪರೀಕ್ಷೆಯಲ್ಲಿ ಎರಡು ಭಾಗಗಳಿರುತ್ತವೆ.
- General Aptitude: ಇಂಗ್ಲಿಷ್, ಮೆಂಟಲ್ ಎಬಿಲಿಟಿ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್.
- Technical Knowledge: ಅಭ್ಯರ್ಥಿಯ ಇಂಜಿನಿಯರಿಂಗ್ ವಿಭಾಗಕ್ಕೆ (Electronics/ Mechanical) ಸಂಬಂಧಿಸಿದ ಪ್ರಶ್ನೆಗಳು.
2. ವೈಯಕ್ತಿಕ ಸಂದರ್ಶನ (Interview – 15% ವೇಟೇಜ್)
ಲಿಖಿತ ಪರೀಕ್ಷೆಯಲ್ಲಿ ನಿಗದಿತ ಕಟ್ ಆಫ್ ಅಂಕಗಳನ್ನು ಗಳಿಸಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.
BEL Recruitment 2026 Kannada : ಅರ್ಜಿ ಶುಲ್ಕದ ವಿವರಗಳು (Application Fee)
- General/OBC/EWS ಅಭ್ಯರ್ಥಿಗಳಿಗೆ : ₹1000 +18% GST= ₹1,180
- SC, ST, pwbd/ ಮಾಜಿ ಸೈನಿಕರು : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಶುಲ್ಕ ವಿನಾಯಿತಿ ಇದೆ)
(ಗಮನಿಸಿ : ಶುಲ್ಕವನ್ನು ಆನ್ಲೈನ್ ನಲ್ಲಿ ಎಸ್ ಬಿ ಐ ಕಲೆಕ್ಟ್ (SBI collect) ಮೂಲಕ ಪಾವತಿಸಬೇಕಾಗುತ್ತದೆ)
ಇದನ್ನು ಓದಿ
BEL Recruitment 2026 Kannada ಉದ್ಯೋಗಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
BEL Recruitment 2026 Kannada : ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
- ಮೊದಲು BEL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://bel-india.in/homepage/
- ಹೋಂ ಪೇಜ್ ನಲ್ಲಿರುವ “Careers” ಟ್ಯಾಬ್ ಕ್ಲಿಕ್ ಮಾಡಿ, ನಂತರ “Recruitment – Advertisement” ವಿಭಾಗಕ್ಕೆ ಹೋಗಿ.
- ಅಲ್ಲಿ “Recruitment of Probationary Engineers – 350 post’s” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಧಿಕೃತ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿದ ನಂತರ Apply Online ಲಿಂಕ್ ಒತ್ತಿ.
- ನಿಮ್ಮ ಹೆಸರು, ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನೀಡಿ ಮೊದಲು ನೋಂದಣಿ (Register) ಮಾಡಿಕೊಳ್ಳಿ.
- ನಂತರ ಲಾಗಿನ್ ಐಡಿ ಬಳಸಿ ಲಾಗಿನ್ ಆಗಿ, ನಿಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ಭಾವಚಿತ್ರ (Photo) , ಸಹಿ (Signature) ಮತ್ತು ಅಗತ್ಯ ದಾಖಲೆಗಳನ್ನು (ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಇತ್ಯಾದಿ) ನಿಗದಿತ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಅನ್ವಯವಾಗುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ಫಾರಂ ಅನ್ನು ಮತ್ತೊಮ್ಮೆ ಪರಿಶೀಲಿಸಿ “Submit ” ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಶುಲ್ಕದ ರಸಿದಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಇದನ್ನು ಓದಿ
BEL Recruitment 2026 Kannada : FAQs
1.(BEL Recruitment 2026 Kannada) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ನವೆಂಬರ್ 2026 ಆಗಿದೆ.
2. ಈ ಹುದ್ದೆಗೆ ಗೇಟ್ (GATE) ಸ್ಕೋರ್ ಕಡ್ಡಾಯವೇ?
ಇಲ್ಲ. GATE ಅಂಕಗಳ ಅಗತ್ಯವಿಲ್ಲ. BEL ಸಂಸ್ಥೆಯು ಸ್ವತಹ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡುತ್ತದೆ.
3. ಅಂತಿಮ ವರ್ಷದ (Final Year) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಇಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಇಂಜಿನಿಯರಿಂಗ್ ಪದವಿಯನ್ನು ಸಂಪೂರ್ಣವಾಗಿ ಮುಗಿಸಿ. ಅಂಕಪಟ್ಟಿ ಮತ್ತು ಪ್ರಾವಿಷನಲ್ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
4. ಲಿಖಿತ ಪರೀಕ್ಷೆ ಯಾವಾಗ ನಡೆಸಬಹುದು?
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಕಂಪ್ಯೂಟರ್ ಆಧಾರಿತ ಪರೀಕ್ಷೆಯು (CBT) 22 ಡಿಸೆಂಬರ್ 2026ರಂದು ನಡೆಯಲಿದೆ.
BEL Recruitment 2026 Kannada : Conclusion
ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಈ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ, ಕೊನೆಯ ದಿನದಲ್ಲಿ ಉಂಟಾಗುವ ಸರ್ವರ್ ಸಮಸ್ಯೆಯನ್ನು ತಪ್ಪಿಸಿಕೊಳ್ಳಿ. ಇದೇ ರೀತಿಯ ಹೆಚ್ಚಿನ ಉದ್ಯೋಗದ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ. ಅದರಲ್ಲಿ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳು ನಿರಂತರವಾಗಿ ಅಪ್ಡೇಟ್ ಆಗುತ್ತಿರುತ್ತದೆ.
ಇದನ್ನು ಓದಿ