Bagalkot Sahakari Okkuta Recruitment 2026 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ₹47,650 ವರೆಗೆ 10th , PUC ವಿದ್ಯಾರ್ಥಿಗಳಿಗೆ Important update.

Bagalkot Sahakari Okkuta Recruitment 2026Bagalkot Sahakari Okkuta Recruitment 2026 : ಬಾಗಲಕೋಟೆ ಸಹಕಾರ ಒಕ್ಕೂಟದಲ್ಲಿ ದ್ವಿತೀಯ ದರ್ಜೆ ಸಹಾಯಕರು ಕಮ್ ಮಾರಾಟ ಅಧಿಕಾರಿ, ಟೈಪಿಸ್ಟ್ ಕಮ್ ಅಕೌಂಟೆಂಟ್ ಮತ್ತು ಡ್ರೈವರ್ ಕಮ್ ಅಟೆಂಡರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ತಿಳಿಯಲು ಈಗಲೇ ಓದಿ. 

ನೀವು ಸಹಕಾರ ಕ್ಷೇತ್ರದಲ್ಲಿ ಉತ್ತಮ ಸರ್ಕಾರಿ ಅಥವಾ ಅರೆ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸುವರ್ಣ ಅವಕಾಶವಿದೆ. ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟ ನಿಯಮಿತವು 2026ನೇ ಸಾಲಿನ ಸಿಬ್ಬಂದಿ ನೇಮಕಾತಿಗಾಗಿ ಅಧಿಕೃತ ಆದಿ ಸೂಚನೆಯನ್ನು ಹೊರಡಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಉದ್ಯೋಗದ ಕುರಿತಾದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

Bagalkot Sahakari Okkuta Recruitment 2026 : ಪ್ರಮುಖ ವಿವರಗಳು 

  • ಸಂಸ್ಥೆಯ ಹೆಸರು : ಬಾಗಲಕೋಟೆ ಜಿಲ್ಲೆಯ ಸಹಕಾರ ಸಂಘಗಳ ನೇಮಕಾತಿ ಸಂಸ್ಥೆ.
  • ಹುದ್ದೆಗಳ ಹೆಸರು : ದ್ವಿತೀಯ ದರ್ಜೆ ಸಹಾಯಕರು ಕಮ್ ಮಾರಾಟ ಅಧಿಕಾರಿ, ಟೈಪಿಸ್ಟ್ ಕಮ್ ಅಕೌಂಟೆಂಟ್, ಡ್ರೈವರ್ ಕಮ್ ಅಟೆಂಡರ್
  • ಒಟ್ಟು ಹುದ್ದೆಗಳು : 05
  • ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್ (ಅಂಚೆ ಅಥವಾ ನೇರವಾಗಿ)
  • ಉದ್ಯೋಗ ಸ್ಥಳ : ಬಾಗಲಕೋಟೆ, ಕರ್ನಾಟಕ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ನವೆಂಬರ್ 2026

ಹುದ್ದೆಗಳ ವಿವರ ಮತ್ತು ಮಾಸಿಕ ಸಂಬಳ (Vacancy & Salary Details)

Bagalkot Sahakari Okkuta Recruitment 2026 ಈ ನೇಮಕಾತಿ ಅಡಿಯಲ್ಲಿ ಒಟ್ಟು 3 ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ ಈ ಕೆಳಗಿನಂತಿವೆ.

1. ದ್ವಿತೀಯ ದರ್ಜೆ ಸಹಾಯಕ ಕಮ್ ಮಾರಾಟ ಅಧಿಕಾರಿ 

  • ಖಾಲಿ ಇರುವ ಹುದ್ದೆಗಳು : 02
  • ವೇತನ ಶ್ರೇಣಿ : ₹23,500 ರಿಂದ ₹47,650

2. ಟೈಪಿಸ್ಟ್ ಕಮ್ ಅಕೌಂಟೆಂಟ್ 

  • ಖಾಲಿ ಇರುವ ಹುದ್ದೆಗಳು : 02
  • ವೇತನ ಶ್ರೇಣಿ : ₹21,400 ರಿಂದ ₹42,000

3. ಡ್ರೈವರ್ ಕಮ್ ಅಟೆಂಡರ್ 

  • ಖಾಲಿ ಇರುವ ಹುದ್ದೆಗಳು : 01
  • ವೇತನ ಶ್ರೇಣಿ: ₹17,000 ರಿಂದ ₹28,950

ಇದನ್ನು ಓದಿ

RRB Station Master Jobs 2026 : ಈ ಬಾರಿ ಆಯ್ಕೆ ವಿಧಾನದಲ್ಲಿ ಭಾರಿ ಬದಲಾವಣೆ. ಅರ್ಹತೆ, ವೇತನ ಮತ್ತು ಪಠ್ಯಕ್ರಮದ Important update.

Bagalkot Sahakari Okkuta Recruitment 2026 : ಅಗತ್ಯ ವಿದ್ಯಾರ್ಹತೆ 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ತಕ್ಕಂತೆ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

  1. ದ್ವಿತೀಯ ದರ್ಜೆ ಸಹಾಯಕರು ಕಮ್ ಮಾರಾಟ ಅಧಿಕಾರಿ : ದ್ವಿತೀಯ ಪಿಯುಸಿ (12th) ಪಾಸ್ ಆಗಿರಬೇಕು. ಇದರೊಂದಿಗೆ ಜಿಡಿಸಿ (GDC) ಅಥವಾ ಜೆಡಿಸಿ (JDC) ಸಹಕಾರ ತರಬೇತಿ ಪಡೆದಿರುವುದು ಕಡ್ಡಾಯ. ಕನ್ನಡ ಓದಲು ಮತ್ತು ಬರೆಯಲು ಬರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  2. ಟೈಪಿಸ್ಟ್ ಕಮ್ ಅಕೌಂಟೆಂಟ್: ದ್ವಿತೀಯ ಪಿಯುಸಿ (12th) ಉತ್ತೀರ್ಣರಾಗಿರಬೇಕು. ಮತ್ತು ಸಹಕಾರ ಪದವಿ ಅಥವಾ ಡಿಪ್ಲೋಮಾ ಹೊಂದಿರಬೇಕು. ಕಂಪ್ಯೂಟರ್ ಆಪರೇಟಿಂಗ್ ಮತ್ತು ಟೈಪಿಂಗ್ ಜ್ಞಾನ ಕಡ್ಡಾಯ.
  3. ಡ್ರೈವರ್ ಕಮ್ ಅಟೆಂಡರ್: ಎಸ್ ಎಸ್ ಎಲ್ ಸಿ (10th) ಪಾಸಾಗಿರಬೇಕು. ಚಾಲ್ತಿಯಲ್ಲಿರುವ ಹೆವಿ/ಲೈಟ್ ವಾಹನ ಚಾಲನ ಪರವಾನಗಿ (Driving Licence) ಹೊಂದಿರಬೇಕು.

ವಯೋಮಿತಿ ವಿವರ (Age Limit)

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯನ್ನು ವರ್ಗವಾರು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

  • ಸಾಮಾನ್ಯ ವರ್ಗ (General) : ಗರಿಷ್ಠ 35 ವರ್ಷ
  • ಇತರ ಹಿಂದುಳಿದ ವರ್ಗಗಳು (2A,2B,3A,3B) : ಗರಿಷ್ಠ 38 ವರ್ಷ
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 (SC, ST,cat-1) : ಗರಿಷ್ಠ 40 ವರ್ಷ.

ಅರ್ಜಿ ಶುಲ್ಕ (Application Fee)

ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಅಥವಾ ಡಿಮ್ಯಾಂಡ್ ಡ್ರಾಫ್ಟ್  (DD) ಮೂಲಕ ಪಾವತಿಸಬೇಕಾಗುತ್ತದೆ.

  • ಸಾಮಾನ್ಯ ಮತ್ತು ಓಬಿಸಿ (General & OBC) ಅಭ್ಯರ್ಥಿಗಳಿಗೆ : ₹1,000
  • SC, ST ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಿಗೆ : ₹500

ಆಯ್ಕೆ ವಿಧಾನ (Selection Process) 

ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಒಟ್ಟು 200 ಅಂಕಗಳಿಗೆ ಮೌಲ್ಯಮಾಪನ ನಡೆಯಲಿದ್ದು, ಪ್ರಕ್ರಿಯೆ ಹೀಗಿರಲಿದೆ.

  • ಲಿಖಿತ ಪರೀಕ್ಷೆ (Written Exam) : 150 ಅಂಕಗಳು
  • ನೇರ ಸಂದರ್ಶನ (Interview ) : 25 ಅಂಕಗಳು
  • ಸಹಕಾರ ಸಂಬಂಧಿತ ವಿಷಯಗಳು/ಕಂಪ್ಯೂಟರ್ ಜ್ಞಾನ : 25 ಅಂಕಗಳು

ಪ್ರಮುಖ ದಿನಾಂಕಗಳು (Important Dates)

Bagalkot Sahakari Okkuta Recruitment 2026 ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

  • ಅಧಿ ಸೂಚನೆ ಹೊರಡಿಸಿದ ದಿನಾಂಕ : 16 ಅಕ್ಟೋಬರ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ನವೆಂಬರ್ 2026 (ಸಂಜೆ 5:00 ಒಳಗೆ)

ಅರ್ಜಿ ಸಲ್ಲಿಸುವುದು ಹೇಗೆ ? (How To Apply)

Bagalkot Sahakari Okkuta Recruitment 2026 ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

  1. ಪ್ರಕಟಣೆಯಲ್ಲಿ ನೀಡಿರುವ ನಿಗದಿತ ಅರ್ಜಿ ನಮೂನೆಯನ್ನು (Application Form) ಭರ್ತಿ ಮಾಡಿ.
  2. ಅರ್ಜಿಯೊಂದಿಗೆ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳ (ವಿದ್ಯಾರ್ಹತೆ ಪ್ರಮಾಣ ಪತ್ರ, ವಯಸ್ಸಿನ ದಾಖಲೆ, ಜಾತಿ ಪ್ರಮಾಣ ಪತ್ರ, ಚಾಲನ ಪರವಾನಗಿ ಇತ್ಯಾದಿ) ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ.
  3. ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಕೆಳಗೆ ನೀಡಿರುವ ಅಧಿಕೃತ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗಾಗಿ ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ :

  • ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ/ಸಹಕಾರಿಗಳ ಸಹಕಾರ ಒಕ್ಕೂಟ ನಿ. ಬಾಗಲಕೋಟೆ ಪ್ಲಾಟ್ ನಂಬರ್. 58ಡಿ , ಸೆಕ್ಟರ್ ನಂಬರ್. 25, ನವನಗರ, ಬಾಗಲಕೋಟೆ 587103

Notification pdf: https://drive.google.com/file/d/1sd04Mj84g9k3KGt8Vy8uay6bl3jMjidk/view?usp=drivesdk

ಇದನ್ನು ಓದಿ

Supreme Court Recruitment 2026 : ಜೂನಿಯರ್ ಕೋರ್ಟ್ ಅಟೆಂಡೆಂಟ್ 130 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ, Important update.

Bagalkot Sahakari Okkuta Recruitment 2026 : FAQs 

1. ಬಾಗಲಕೋಟೆ ಸಹಕಾರ ಒಕ್ಕೂಟ ನೇಮಕಾತಿಯ ಒಟ್ಟು ಹುದ್ದೆಗಳು ಎಷ್ಟು? 

ಈ ನೇಮಕಾತಿ ಅಡಿಯಲ್ಲಿ ಒಟ್ಟು 05 ಹುದ್ದೆಗಳು ಖಾಲಿ ಇವೆ. ಇದರಲ್ಲಿ ದ್ವಿತೀಯ ದರ್ಜೆ ಸಹಾಯಕ ಕಮ್ ಮಾರಾಟ ಅಧಿಕಾರಿ 02, ಟೈಪಿಸ್ಟ್ ಕಮ್ ಅಕೌಂಟೆಂಟ್ 02, ಡ್ರೈವರ್ ಕಮ್ ಅಟೆಂಡರ್ 01 ಹುದ್ದೆಗಳು.

2. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಭರ್ತಿ ಮಾಡಿದ ಆಫ್ ಲೈನ್ ಅರ್ಜಿಗಳನ್ನು ಸಲ್ಲಿಸಲು 12 ನವೆಂಬರ್ 2026 (ಸಂಜೆ 5:00 ಒಳಗೆ) ಕೊನೆಯ ದಿನಾಂಕವಾಗಿದೆ.

3. ಈ ಉದ್ಯೋಗಗಳಿಗೆ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದೇ? 

ಇಲ್ಲ.Bagalkot Sahakari Okkuta Recruitment 2026 ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳೊಂದಿಗೆ ಬಾಗಲಕೋಟೆಯ ನವನಗರದಲ್ಲಿರುವ ಒಕ್ಕೂಟದ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕಾಗುತ್ತದೆ.

4. ಸಿಬ್ಬಂದಿ ನೇಮಕಾತಿಗೆ ಇರುವ ಗರಿಷ್ಠ ವಯೋಮಿತಿ ಎಷ್ಟು? 

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 38 ವರ್ಷ ಹಾಗೂ SC, ST ಪ್ರವರ್ಗ -1 ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

5. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? 

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Exam -150 ಅಂಕಗಳು) ಮತ್ತು ನೇರ ಸಂದರ್ಶನ (Interview -25 ಅಂಕಗಳು) ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೆ ಸಹಕಾರ ವಿಷಯ ಹಾಗೂ ಕಂಪ್ಯೂಟರ್ ಜ್ಞಾನಕ್ಕೆ 25 ಅಂಕಗಳು ಇರುತ್ತವೆ.

ಕೊನೆಯ ಮಾತು : ಬಾಗಲಕೋಟೆ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಇಂದೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ ಕಳುಹಿಸಿಕೊಡಿ. ಇದೇ ರೀತಿಯ ಹೆಚ್ಚಿನ ಉದ್ಯೋಗದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ

ಇದನ್ನು ಓದಿ

LIC HFL Recruitment 2026 : 232 ಹುದ್ದೆಗಳ ನೇಮಕಾತಿ, ಸಂಪೂರ್ಣ ವಿವರಗಳು. ಪದವಿ ವಿದ್ಯಾರ್ಥಿಗಳಿಗೆ Important update.

Leave a Comment