ಹಾಸನ ಆಯುಷ್ ಇಲಾಖೆ ನೇಮಕಾತಿ 2026 : ಪ್ರತಿಯೊಂದು ಹುದ್ದೆಯ ಸಂಪೂರ್ಣ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಬಗ್ಗೆ Important update.

ಹಾಸನ ಆಯುಷ್ ಇಲಾಖೆ ನೇಮಕಾತಿ 2026ಹಾಸನ ಆಯುಷ್ ಇಲಾಖೆ ನೇಮಕಾತಿ 2026 : CHO ಫಾರ್ಮಸಿಸ್ಟ್ ಸೇರಿ 24 ಹುದ್ದೆಗಳ ಸಂಪೂರ್ಣ ಶೈಕ್ಷಣಿಕ ಅರ್ಹತೆ, ವೇತನ ಮತ್ತು ಆಫ್ ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ. 

ಹಾಸನ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯು ರಾಷ್ಟ್ರೀಯ ಆಯುಷ್ ಮಿಷನ್ (National Ayush Mission) ಯೋಜನೆಯಡಿ ಖಾಲಿ ಇರುವ ವಿವಿಧ 24 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕೃತ ನೇಮಕಾತಿ ಆದಿ ಸೂಚನೆಯನ್ನು ಹೊರಡಿಸಿದೆ. ಕರ್ನಾಟಕದಲ್ಲಿ ಆಯುಷ್ ವೈದ್ಯಕೀಯ ಕ್ಷೇತ್ರ ಅಥವಾ ಆಸ್ಪತ್ರೆ ನಿರ್ವಹಣಾ ವಿಭಾಗದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಸುವರ್ಣ ಅವಕಾಶವಾಗಿದೆ.

ಈ ಲೇಖನದಲ್ಲಿ ನಾವು ಹಾಸನ ಆಯುಷ್ ಇಲಾಖೆ ನೇಮಕಾತಿಯ ಪ್ರತಿಯೊಂದು ನಿರ್ದಿಷ್ಟ ಹುದ್ದೆಯ ಶೈಕ್ಷಣಿಕ ಅರ್ಹತೆ, ಅಗತ್ಯವಿರುವ ಅನುಭವ ಮತ್ತು ಪ್ರಮುಖ ನಿಯಮಗಳನ್ನು ವಿವರವಾಗಿ ತಿಳಿದುಕೊಳ್ಳೋಣ.

ಇದನ್ನು ಓದಿ

Indian Army TES 57 Recruitment : ದ್ವಿತೀಯ ಪಿಯುಸಿ ಮುಗಿಸಿದವರಿಗೆ ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುವ ಅವಕಾಶ, ಇಲ್ಲಿದೆ Important update.

ಹಾಸನ ಆಯುಷ್ ಇಲಾಖೆ ನೇಮಕಾತಿ 2026 : ಕಿರು ವಿವರಗಳು 

  • ನೇಮಕಾತಿ ಸಂಸ್ಥೆ : ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹಾಸನ ಜಿಲ್ಲೆ.
  • ಒಟ್ಟು ಹುದ್ದೆಗಳು : 24
  • ಉದ್ಯೋಗದ ಪ್ರಕಾರ : ಗುತ್ತಿಗೆ ಆಧಾರದ ಮೇಲೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 5 ನವೆಂಬರ್ 2026 (ಸಂಜೆ 5:30 ಗಂಟೆ ಒಳಗೆ)
  • ಅಧಿಕೃತ ಜಾಲತಾಣ : Hassan District Web Portal

ಪ್ರತಿಯೊಂದು ನಿರ್ದಿಷ್ಟ ಹುದ್ದೆಯ ಶೈಕ್ಷಣಿಕ ಅರ್ಹತೆ ಮತ್ತು ಅನುಭವ (Post – Wise Eligibility Criteria)

ಅಧಿಸೂಚನೆಯ ಪ್ರಕಾರ ಪ್ರತಿ ಹುದ್ದೆಗೆ ನಿಗದಿಪಡಿಸಲಾದ ಅರ್ಹತೆ ಮತ್ತು ಕಾರ್ಯಾನುಭವದ ವಿವರಗಳು ಈ ಕೆಳಗಿನಂತಿವೆ.

1. ಸ್ಪೆಷಲಿಸ್ಟ್ ಡಾಕ್ಟರ್ : ಯೋಗ ಮತ್ತು ನ್ಯಾಚುರೋಪತಿ (Specialist Doctor – Yoga & Naturopathy)

  • ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BNYS ಪದವಿಯೊಂದಿಗೆ ಯೋಗ ಮತ್ತು ನ್ಯಾಚುರೋಪತಿಯಲ್ಲಿ MS/MD ಸ್ನಾತಕೋತ್ತರ (PG) ಪದವಿ ಹೊಂದಿರಬೇಕು. (ಒಂದು ವೇಳೆ ಪಿಜಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಕೇವಲ BNYS ಪದವಿ ಪಡೆದವರನ್ನು ಪರಿಗಣಿಸಲಾಗುವುದು, ಆದರೆ ಅವರಿಗೆ ಪಿಜಿ ಭತ್ಯೆ ಸಿಗುವುದಿಲ್ಲ)
  • ಅನುಭವ : ಕನಿಷ್ಠ 3 ವರ್ಷಗಳ ವೃತ್ತಿಪರ ಅನುಭವ ಹೊಂದಿರಬೇಕು.
  • ಮಾಸಿಕ ವೇತನ : ₹57,550
  • ಒಟ್ಟು ಹುದ್ದೆಗಳು : 01

2. ಸ್ಪೆಷಲಿಸ್ಟ್ ಡಾಕ್ಟರ್ -ಆಯುರ್ವೇದ (Specialist Doctor – Ayurveda)

  • ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಸಂಸ್ಥೆಯಿಂದ BAMS ಪದವಿಯೊಂದಿಗೆ ಶಲ್ಯ ತಂತ್ರ ವಿಭಾಗದಲ್ಲಿ MS ಅಥವಾ ಪಂಚಕರ್ಮ/ಕಾಯ ಚಿಕಿತ್ಸೆ ವಿಭಾಗದಲ್ಲಿ MD ಸ್ನಾತಕೋತ್ತರ (PG) ಪದವಿ ಪಡೆದಿರಬೇಕು.
  • ಅನುಭವ : ಕನಿಷ್ಠ 3 ವರ್ಷಗಳ ವೈದ್ಯಕೀಯ ಅನುಭವ ಕಡ್ಡಾಯ.
  • ಮಾಸಿಕ ವೇತನ: ₹57,550
  • ಒಟ್ಟು ಹುದ್ದೆಗಳು: 01

3. ಸಮುದಾಯ ಆರೋಗ್ಯ ಅಧಿಕಾರಿ ಸಿ ಎಚ್ ಓ (Community Health Officer – CHO)

  • ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ BAMS ಪದವಿ ಮುಗಿಸಿರಬೇಕು ಮತ್ತು ಸಂಬಂಧಪಟ್ಟ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಆಗಿರಬೇಕು.
  • ಮಾಸಿಕ ವೇತನ : ₹25,000 + ಪ್ರೋಗ್ರಾಮ್ ಆಧಾರಿತ ಪ್ರೋತ್ಸಾಹ ಧನ.
  • ಒಟ್ಟು ಹುದ್ದೆಗಳು : 12

4. ಔಷದ ವಿತರಕರು/ಫಾರ್ಮಸಿಸ್ಟ್ (Pharmacist/Drug Distributor)

  • ಶೈಕ್ಷಣಿಕ ಅರ್ಹತೆ : B.Pharma ಅಥವಾ D.Pharma (ಆಯುರ್ವೇದ/ಆಯುಷ್ ವಿಭಾಗ) ವಿದ್ಯಾರ್ಹತೆ ಹೊಂದಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನ ಇರುವುದು ಕಡ್ಡಾಯ.
  • ಅನುಭವ : ಆಯುಷ್ ಆಸ್ಪತ್ರೆಗಳು ಅಥವಾ ಕ್ಲಿನಿಕ್ ಗಳಲ್ಲಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಇರಬೇಕು.
  • ಮಾಸಿಕ ವೇತನ : ₹27,550
  • ಒಟ್ಟು ಹುದ್ದೆಗಳು: 06

5. ಮಸಾಜಿಸ್ಟ್ (Masseur – Male/ Female)

  • ಶೈಕ್ಷಣಿಕ ಅರ್ಹತೆ : ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.
  • ಅನುಭವ : ಆಯುಷ್ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಲ್ಲಿ ಕನಿಷ್ಠ 2 ವರ್ಷಗಳ ಮಸಾಜಿಸ್ಟ್ ಆಗಿ ಕೆಲಸ ಮಾಡಿದ ಅನುಭವದ ಪ್ರಮಾಣ ಪತ್ರ ಹೊಂದಿರಬೇಕು.
  • ಮಾಸಿಕ ವೇತನ ₹18,500
  • ಒಟ್ಟು ಹುದ್ದೆಗಳು : 02

6. ಮಲ್ಟಿಪರ್ಪಸ್ ವರ್ಕರ್ (Multipurpose Worker)& ಅಟೆಂಡೆಂಟ್ (Female Attendant)

  • ಶೈಕ್ಷಣಿಕ ಅರ್ಹತೆ : ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು.
  • ಅನುಭವ : ಸಂಬಂಧಿತ ಆಸ್ಪತ್ರೆ ಅಥವಾ ಕ್ಲಿನಿಕ್ ಕೆಲಸಗಳಲ್ಲಿ 1 ರಿಂದ 2 ವರ್ಷಗಳ ಅನುಭವ ಇರಬೇಕು.
  • ಮಾಸಿಕ ವೇತನ : ₹16,900 ವರೆಗೆ (multipurpose worker) : 01 ಹುದ್ದೆಗಳು
  • ಮಾಸಿಕ ವೇತನ  (female attendant) : ₹18,500 : 01 ಹುದ್ದೆಗಳು

ಹಾಸನ ಆಯುಷ್ ಇಲಾಖೆ ನೇಮಕಾತಿ 2026 : Mandatory Documents Rules 

ನೀವು ಖಾಸಗಿ ಆಯುಷ್ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಿಂದ ಅನುಭವದ ಪ್ರಮಾಣ ಪತ್ರವನ್ನು ಸಲ್ಲಿಸುತ್ತಿದ್ದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕು.

  1. ಆ ಖಾಸಗಿ ಸಂಸ್ಥೆಯು KPME (Karnataka Private Medical Establishment act) ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು.
  2. ಅನುಭವದ ಪ್ರಮಾಣ ಪತ್ರದ ಜೊತೆಗೆ, ಆ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಲ್ಪಟ್ಟ ಕಳೆದ 3 ತಿಂಗಳ ವೇತನ ಪ್ರಮಾಣ ಪತ್ರವನ್ನು (Salary Certificate)ಲಗತ್ತಿಸುವುದು ಕಡ್ಡಾಯವಾಗಿದೆ.

ಹಾಸನ ಆಯುಷ್ ಇಲಾಖೆ ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಈ ನೇಮಕಾತಿಯು ಸಂಪೂರ್ಣವಾಗಿ ಆಫ್ ಲೈನ್ (Offline) ಆಗಿರುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

  1. ಮೊದಲು ಹಾಸನ ಜಿಲ್ಲೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://hassan.nic.in/notice/%E0%B2%86%E0%B2%AF%E0%B3%81%E0%B2%B7%E0%B3%8D-%E0%B2%A8%E0%B3%87%E0%B2%AE%E0%B2%95%E0%B2%BE%E0%B2%A4%E0%B2%BF-2026/ . ಅಧಿಕೃತ ನೋಟಿಫಿಕೇಶನ್ ಮತ್ತು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ. (ನೆನಪಿರಲಿ, ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಒಂದೇ ಅರ್ಜಿಯಲ್ಲಿ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ)
  3. ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು, ವಯಸ್ಸಿನ ಪುರಾವೆ, ಜಾತಿ/ಮೀಸಲಾತಿ ಪ್ರಮಾಣ ಪತ್ರ ಮತ್ತು ಕೆಪಿಎಂಇ ನೊಂದಾಯಿತ ಅನುಭವ ಪತ್ರಗಳ ಸ್ವಯಂ ದೃಢೀಕೃತ (Self Attested) ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
  4. ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವಾ ರಿಜಿಸ್ಟರ್ಡ್ ಪೋಸ್ಟ್/ಸ್ಪೀಡ್ ಪೋಸ್ಟ್ ಮೂಲಕ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಲುಪಿಸಿ.
  5. ವಿಳಾಸ : ಸದಸ್ಯ ಕಾರ್ಯದರ್ಶಿಗಳು/ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹೊಸ ಲೈನ್ ರಸ್ತೆ, ಹಾಸನ – 573201

ಅರ್ಜಿ ಶುಲ್ಕ (Application Fee)

ಹಾಸನ ಆಯುಷ್ ಇಲಾಖೆ ನೇಮಕಾತಿ 2026 ಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ.

ವಯೋಮಿತಿ ವಿವರ : (Age Limit & Relaxation)

5/11/2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಐದು ವರ್ಷಗಳ ಸಡಿಲಿಕೆಯನ್ನು ಅಳವಡಿಸಿಕೊಂಡ ನಂತರ ಗರಿಷ್ಠ ವಯೋಮಿತಿ ಕೆಳಗಿನಂತಿರುತ್ತದೆ.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷಗಳು
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ಗರಿಷ್ಠ 43 ವರ್ಷಗಳು
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ : ಗರಿಷ್ಠ 45 ವರ್ಷಗಳು

ಆಯ್ಕೆ ಪ್ರಕ್ರಿಯೆ ( Selection Process)

ಹಾಸನ ಆಯುಷ್ ಇಲಾಖೆ ನೇಮಕಾತಿ 2026 ಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಇದನ್ನು ಓದಿ

NLSIU Recruitment 2026 : ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಲೈಬ್ರರಿ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ, Important update for Degree Students.

ಹಾಸನ ಆಯುಷ್ ಇಲಾಖೆ ನೇಮಕಾತಿ 2026 : FAQs

1. ಹಾಸನ ಆಯುಷ್ ಇಲಾಖೆ ನೇಮಕಾತಿ 2026 ರ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು? 

ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು 5 ನವಂಬರ್ 2026 ಕೊನೆಯ ದಿನಾಂಕವಾಗಿದೆ.

2. ಈ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ? 

ರಾಷ್ಟ್ರೀಯ ಆಯುಷ್ ಮಿಷನ್ (NAM) ಯೋಜನೆ ಅಡಿ ಒಟ್ಟು 24 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

3. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇದೆಯೇ? 

ಇಲ್ಲ. ಈ ನೇಮಕಾತಿಗೆ ಯಾವುದೇ ವರ್ಗದ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ಇರುವುದಿಲ್ಲ.

4. ಈ ಹುದ್ದೆಗಳು ಖಾಯಂ ಸರ್ಕಾರಿ ಉದ್ಯೋಗಗಳೇ?

ಇಲ್ಲ, ಇವುಗಳು ರಾಷ್ಟ್ರೀಯ ಆಯುಷ್ ಮಿಷನ್ ಅಡಿಯಲ್ಲಿ ಸಂಪೂರ್ಣವಾಗಿ ತಾತ್ಕಾಲಿಕ ಗುತ್ತಿಗೆ (Contract Basis)ಆಧಾರದ ಹುದ್ದೆಗಳಾಗಿವೆ.

5. ಖಾಸಗಿ ಆಸ್ಪತ್ರೆಯ ಅನುಭವದ ಪ್ರಮಾಣ ಪತ್ರ ಸಲ್ಲಿಸಲು ಯಾವ ನಿಯಮಗಳಿವೆ? 

ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್ ನ ಅನುಭವ ಪತ್ರವು KPME ನೊಂದಾಯಿತ ಸಂಸ್ಥೆ ಯದ್ದಾಗಿರಬೇಕು ಮತ್ತು ಅದರೊಂದಿಗೆ ಕೊನೆಯ ಮೂರು ತಿಂಗಳ ವೇತನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.

6. ಅರ್ಜಿಯನ್ನು ಆನ್ ಲೈನ್ ನಲ್ಲಿ ಸಲ್ಲಿಸಬಹುದೇ? 

ಇಲ್ಲ. ಅರ್ಜಿಗಳನ್ನು ಕೇವಲ ಆಫ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವಾ ರಿಜಿಸ್ಟರ್ಡ್ ಪೋಸ್ಟ್/ಸ್ಪೀಡ್ ಪೋಸ್ಟ್ ಮೂಲಕ ಹಾಸನದ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಗೆ ತಲುಪಿಸಬೇಕು.

ಹಾಸನ ಆಯುಷ್ ಇಲಾಖೆ ನೇಮಕಾತಿ 2026: ಕೊನೆಯ ಮಾತು : ಹಾಸನ ಜಿಲ್ಲಾ ಆಯುಷ್ ಇಲಾಖೆಯ ಈ ನೇಮಕಾತಿಯು ಯಾವುದೇ ಪರೀಕ್ಷಾ ಶುಲ್ಕವಿಲ್ಲದೆ ಅರ್ಹತೆ ಮತ್ತು ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ನಿಗದಿತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ತಡ ಮಾಡದೆ ಕೊನೆಯ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿ. ಮತ್ತಷ್ಟು ಉದ್ಯೋಗದ ಮಾಹಿತಿಗಾಗಿ ಆಯುಷ್ ಇಲಾಖೆಯ ಅಧಿಕೃತ ಜಾಲತಾಣವನ್ನು ಗಮನಿಸುತ್ತಿರಿ.

ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.

ಇದನ್ನು ಓದಿ

RRB Station Master Jobs 2026 : ಈ ಬಾರಿ ಆಯ್ಕೆ ವಿಧಾನದಲ್ಲಿ ಭಾರಿ ಬದಲಾವಣೆ. ಅರ್ಹತೆ, ವೇತನ ಮತ್ತು ಪಠ್ಯಕ್ರಮದ Important update.

 

Leave a Comment