ಗದಗ ಜಿಲ್ಲಾ ನ್ಯಾಯಾಲಯ Recruitment : ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 22 ಜವಾನ (Peon) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ. SSLC ಪಾಸಾದವರು ಈಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ವಯೋಮಿತಿ, ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ.
ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಕರ್ನಾಟಕದ ಯುವ ಜನತೆಗೆ ಒಂದು ಭರ್ಜರಿ ಅವಕಾಶ ಎದುರಾಗಿದೆ. ಗದಗ ಜಿಲ್ಲಾ ನ್ಯಾಯಾಲಯ ನೇಮಕಾತಿ ಪ್ರಕ್ರಿಯೆ ಇದೀಗ ಅಧಿಕೃತವಾಗಿ ಆರಂಭವಾಗಿದ್ದು, ಒಟ್ಟು 22 ಜಮಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಕೇವಲ ಹತ್ತನೇ ತರಗತಿ ಪಾಸಾದವರಿಗೆ ಈ ಮೂಲಕ ನ್ಯಾಯಾಲಯದಲ್ಲಿ ಉದ್ಯೋಗ ಪಡೆಯುವ ದಾರಿ ಸುಗಮವಾಗಿದೆ. ಈ ಬಾರಿಯ ನೇಮಕಾತಿಯ ಅತಿ ದೊಡ್ಡ ಆಕರ್ಷಣೆ ಎಂದರೆ, ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಕಠಿಣ ಲಿಖಿತ ಪರೀಕ್ಷೆಗಳನ್ನು ಎದುರಿಸುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಶುರುವಾಗಿದ್ದು ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕಡೆ ದಿನವಾಗಿದೆ. ಉತ್ತಮ ವೇತನ ಶ್ರೇಣಿ ಹಾಗೂ ಉದ್ಯೋಗ ಭದ್ರತೆ ಇರುವ ಈ ಹುದ್ದೆಗಳಿಗೆ ರಾಜ್ಯದ ಯಾವುದೇ ಭಾಗದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ.
ಗದಗ ಜಿಲ್ಲಾ ನ್ಯಾಯಾಲಯ Recruitment : ಹುದ್ದೆಗಳ ಸಂಪೂರ್ಣ ವಿವರ
ಉದ್ಯೋಗಾವಕಶದ ಬಗ್ಗೆ ಆಸಕ್ತಿ ಹೊಂದಿರುವವರು ಮೊದಲು ಹುದ್ದೆಯ ವಿವರಗಳನ್ನು ತಿಳಿದುಕೊಳ್ಳುವುದು ಬಹು ಮುಖ್ಯ.
- ಹುದ್ದೆ ಹೆಸರು : ಜವಾನ (peon)
- ಒಟ್ಟು ಖಾಲಿ ಹುದ್ದೆಗಳು : 22
- ಕೆಲಸದ ಸ್ಥಳ : ಗದಗ ಜಿಲ್ಲಾ ನ್ಯಾಯಾಲಯ ಘಟಕ
- ತಿಂಗಳ ವೇತನ : 27,000 ರೂಪಾಯಿಯಿಂದ 46,675 ರೂಪಾಯಿಗಳವರೆಗೆ
- ಪರಿವೀಕ್ಷಣಾ ಅವಧಿ (Prohibited Period) : ಆಯ್ಕೆಯಾದ ಅಭ್ಯರ್ಥಿಗಳನ್ನು ನಿಯಮಾನಸಾರ ಎರಡು ವರ್ಷಗಳ ಕಾಲ ಪ್ರೊಬೇಷನರಿ ಅವಧಿಯಲ್ಲಿ ಇಡಲಾಗುತ್ತದೆ.
ಗದಗ ಜಿಲ್ಲಾ ನ್ಯಾಯಾಲಯ Recruitment : ಪ್ರಮುಖ ದಿನಾಂಕಗಳು
- ಅಧಿಸೂಚನೆ ಪ್ರಕಟವಾದ ದಿನಾಂಕ : 25/09/2026
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 28/09/2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31/10/2026
- ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03/11/2026
ಗದಗ ಜಿಲ್ಲಾ ನ್ಯಾಯಾಲಯ Recruitment : ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಶೈಕ್ಷಣಿಕ ಅರ್ಹತೆ ಏನು?
- ನ್ಯಾಯಾಲಯದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಲೇಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ಹತ್ತನೇ ತರಗತಿ ಅಂದರೆ SSLC ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.
- ಇದರ ಜೊತೆಗೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು ಹಾಗೂ ಬರೆಯಲು ತಿಳಿದಿರುವುದು ಕಡ್ಡಾಯ.
ವೇತನ ಶ್ರೇಣಿ : ರೂ. 27,000-650-29,600-725-32,500-800-35,700-900-39,300-1000-43,300-1125-46,675 ಮತ್ತು ಇತರ ಭತ್ಯೆ ಗಳು
ಗದಗ ಜಿಲ್ಲಾ ನ್ಯಾಯಾಲಯ Recruitment : ವಯೋಮಿತಿ ವಿವರ ಹಾಗೂ ಸಡಿಲಿಕೆ
ಸರ್ಕಾರವು ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ಐದು ವರ್ಷಗಳ ಸಡಿಲಿಕೆಯನ್ನು ಘೋಷಿಸಿದೆ.
- ಕನಿಷ್ಠ ವಯಸ್ಸು : ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಲೇಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷ (35+5)
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ಗರಿಷ್ಠ 43 ವರ್ಷ ( 38+5)
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ರ ಅಭ್ಯರ್ಥಿಗಳಿಗೆ : 45 ವರ್ಷ (40+5)
ನಿಗದಿಪಡಿಸಿದ ಅರ್ಜಿ ಶುಲ್ಕ
- ಸಾಮಾನ್ಯ ವರ್ಗ : ರೂ. 200
- ಪ್ರವರ್ಗ 2A,2B,3A,3B ಸೇರಿದ ಅಭ್ಯರ್ಥಿಗಳಿಗೆ : ರೂ: 100
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ಇರುತ್ತದೆ.
ಸೂಚನೆ : ನಿಗದಿತ ಶುಲ್ಕವನ್ನು ನ್ಯಾಯಾಲಯದ ಜಾಲತಾಣ ದಲ್ಲಿ ನೀಡಲಾದ ಲಿಂಕ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ State Bank collect , online payment through net banking, credit card, debit card, upi ಸೌಲಭ್ಯದ ಮೂಲಕ ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ಡಿಮ್ಯಾಂಡ್ ಡ್ರಾಫ್ಟ್/ಪೋಸ್ಟಲ್ ಆರ್ಡರ್/ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಇದನ್ನು ಓದಿ
ಗದಗ ಜಿಲ್ಲಾ ನ್ಯಾಯಾಲಯ Recruitment : ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ ಎನ್ನುವುದು ಬಹುತೇಕರ ಪಾಲಿಗೆ ನೆಮ್ಮದಿಯ ವಿಚಾರ. ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ನಿಯಮಾನುಸಾರ ಮಾಡಲಾಗುತ್ತದೆ.
- ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ ನಿಯಮಗಳು 1977).
- ಕರ್ನಾಟಕ ಅಧೀನ ನ್ಯಾಯಾಲಯಗಳು (ಮಿನಿ ಸಿರಿಯಲ್ಲಿ ಮತ್ತು ಇತರೆ ಹುದ್ದೆಗಳು, ನಿಯಮಗಳು 2007 ಮತ್ತು 2021ರ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು)
- ಜವಾನ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 1:10 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳನ್ನು ಸಂದರ್ಶನಕ್ಕೆ ಕರೆಯಲು ಮಾತ್ರ ಪರಿಗಣಿಸಲಾಗುವುದು.
ಗದಗ ಜಿಲ್ಲಾ ನ್ಯಾಯಾಲಯ Recruitment : ಆನ್ಲೈನ್ ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು
- ಭಾವಚಿತ್ರ : ಇತ್ತೀಚಿನ ಬಿಳಿ ಹಿನ್ನೆಲೆಯ ಭಾವಚಿತ್ರ, ಭಾವಚಿತ್ರದ ಮೇಲೆ ಯಾವುದೇ ಸಹಿ ಇರಬಾರದು.
- ಸಹಿ : ಬಿಳಿ ಕಾಗದ ಮೇಲೆ ಕಪ್ಪು ಇಂಕ್ ಬಾಲ್ ಪಾಯಿಂಟ್ ಪೆನ್ನಿನಿಂದ ಮಾಡಿದ ಸಹಿ.
- ದಾಖಲೆ : ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯ.
- ಚಾಲ್ತಿಯಲ್ಲಿರುವ ಪ್ರಮಾಣ ಪತ್ರಗಳು : ಜಾತಿ ಪ್ರಮಾಣ ಪತ್ರ, ಗ್ರಾಮೀಣ ಮೀಸಲಾತಿ, ಕನ್ನಡ ಮಾಧ್ಯಮ, ಮಾಜಿ ಸೈನಿಕ, ಅಂಗವಿಕಲ ಪ್ರಮಾಣ ಪತ್ರ ಹಾಗೂ ಯೋಜನಾ ನಿರಾಶ್ರಿತ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದುಕೊಂಡಿರಬೇಕು.
- ನಡತೆ ಪ್ರಮಾಣ ಪತ್ರ : ಅಭ್ಯರ್ಥಿ ಕೊನೆಯದಾಗಿ ವ್ಯಾಸಂಗ ಮಾಡಿದ ಶಾಲಾ ಅಥವಾ ಕಾಲೇಜಿನಿಂದ ಪಡೆದ ನಡತೆ ಪ್ರಮಾಣ ಪತ್ರ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಆರು ತಿಂಗಳ ಒಳಗಾಗಿ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳು.
ಗದಗ ಜಿಲ್ಲಾ ನ್ಯಾಯಾಲಯ Recruitment: ಅರ್ಜಿ ಸಲ್ಲಿಸುವುದು ಹೇಗೆ ?
- ಗದಗ ಜಿಲ್ಲಾ ನ್ಯಾಯಾಲಯದ ಅಧಿಕೃತ ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ.https://gadag.dcourts.gov.in/online-recruitment/ “ಜವಾನರ ಹುದ್ದೆಗಳ ನೇಮಕಾತಿ -2026 “ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವೈಯಕ್ತಿಕ ವಿವರ, ವಿಳಾಸ, ಮೀಸಲಾತಿ ವರ್ಗ ಮತ್ತು ವಿದ್ಯಾರ್ಹತೆಯ ಅಂಕಗಳನ್ನು ದೋಷವಿಲ್ಲದೆ ನಮೂದಿಸಿ.
- ನಿಗದಿತ ಅಳತೆಯ ಫೋಟೋ, ಸಹಿ ಮತ್ತು ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಪಿಡಿಎಫ್ ಅಪ್ಲೋಡ್ ಮಾಡಿ. ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವೇ Submit ಬಟನ್ ಒತ್ತಿ.
- ನಂತರ SBI collect ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿಸಿ.
- ಪೂರ್ಣಗೊಂಡ ಅರ್ಜಿ ಹಾಗೂ ಶುಲ್ಕ ಪಾವತಿಯ ರಸೀದಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಮುಂದಿನ ಪ್ರಕ್ರಿಯೆಗೆ ಸುರಕ್ಷಿತವಾಗಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಗೊಂದಲವಿದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ನಿಮ್ಮ ದಾಖಲೆಗಳನ್ನು ಈಗಾಗಲೇ ಸಿದ್ಧಪಡಿಸಿಕೊಳ್ಳಿ. ಕೊನೆಯ ಗಳಿಗೆಯ ಸರ್ವರ್ ಸಮಸ್ಯೆಗಳಿಂದ ಪಾರಾಗಲು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಉದ್ಯೋಗದ ಹುಡುಕಾಟದಲ್ಲಿರುವ ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲು ಮರೆಯದಿರಿ.
ಇದನ್ನು ಓದಿ.
