Anganvadi Recruitment 2026 : 10 ನೇ ತರಗತಿ ಪಾಸಾದ ಮಹಿಳೆಯರಿಗೆ ಉದ್ಯೋಗಾವಕಾಶ. 232 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, important update.

WhatsAppಫಾಲೋ ಮಾಡಿ

Anganvadi Recruitment 2026  Anganvadi Recruitment 2026 : 232 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿ ಪಾಸಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ. 

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (woman and child development department) ಹಾಗೂ ಜಿಲ್ಲಾ ಪಂಚಾಯಿತಿ ಯಾದಗಿರಿ ವತಿಯಿಂದ ಉದ್ಯೋಗ ಆಕಾಂಕ್ಷಿ ಮಹಿಳೆಯರಿಗೆ ಉತ್ತಮ ಅವಕಾಶ ದೊರೆತಿದೆ.

ಜಿಲ್ಲೆಯ ವಿವಿಧ ತಾಲೂಕುಗಳ ಅಂಗನವಾಡಿ (Anganwadi) ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ (online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ನೇಮಕಾತಿಯಡಿ ಒಟ್ಟು 232 ಹುದ್ದೆಗಳು ಭಕ್ತಿಯಾಗಲಿದ್ದು, 61 ಅಂಗನವಾಡಿ ಕಾರ್ಯಕರ್ತೆ (Anganwadi worker) ಹಾಗೂ 171 ಅಂಗನವಾಡಿ ಸಹಾಯಕಿ (Anganvadi helper) ಹುದ್ದೆಗಳು ಒಳಗೊಂಡಿದೆ.

ಇದನ್ನು ಓದಿ

Karnataka Old Pension Scheme: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಹಳೆ ಪಿಂಚಣಿ ಜಾರಿಗೆ ಸರ್ಕಾರದ ಹೆಜ್ಜೆ.ಸಿಎಂ ಡಿಕೆಶಿ ಸೂಚನೆ.Important update.

Anganvadi Recruitment 2026: ಯಾವ ತಾಲೂಕುಗಳಲ್ಲಿ ನೇಮಕಾತಿ? 

ಈ ನೇಮಕಾತಿ ಯಾದಗಿರಿ ಜಿಲ್ಲೆಯ ಕೆಳಕಂಡ ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ನಡೆಯಲಿದೆ.

  • ಯಾದಗಿರಿ
  • ಶಹಾಪುರ
  • ಶೋರಾಪುರ
  • ಹುಣಸಗಿ
  • ಗುರುಮಠಕಲ್
  • ವಡಗೇರಾ

ಆಯ್ಕೆಯಾದ ಅಭ್ಯರ್ಥಿಗಳು ಸಂಬಂಧಿಸಿದ ತಾಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.

Anganvadi Recruitment 2026 : ಶೈಕ್ಷಣಿಕ ಅರ್ಹತೆ ಏನು? 

ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ತಿಗಳು 10ನೇ ತರಗತಿ (SSLC )ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಾಸ ಮಾಡಿರಬೇಕು.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಪಿಯುಸಿ (PUC ), ಪದವಿ (degree) ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯ ಹತ್ತನೇ ತರಗತಿಯ ಅಂಕಗಳನ್ನೇ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.

ಇದನ್ನು ಓದಿ

Kotak Kanya Scholarship 2026 : ಪದವೀಧರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನ. ಇಲ್ಲಿದೆ ಸಂಪೂರ್ಣ ಮಾಹಿತಿ, Important update.

Anganvadi Recruitment 2026 : ವಯೋಮಿತಿ 

  • ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ವಯಸ್ಸಿರಬೇಕು.
  • ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ.
  • ಅಂಗವಿಕಲ (PWD) ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ 10 ವರ್ಷಗಳ ವಯೋಸಡಿಲಿಕೆಯನ್ನು (age relaxation) ನೀಡಲಾಗಿದೆ.

Anganvadi Recruitment 2026: ಅಗತ್ಯ ದಾಖಲೆಗಳು 

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

  1. ಹತ್ತನೇ ತರಗತಿ ಅಂಕಪಟ್ಟಿ  (10th marks card)
  2. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ (residence certificate)
  3. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ (caste and income certificate
  4. ಆಧಾರ್ ಕಾರ್ಡ್ (Aadhar card)
  5. ಇತ್ತೀಚಿನ ಭಾವಚಿತ್ರ (passport size photo)
  6. ವಿಧವೇ, ಅಂಗವಿಕಲ ಅಥವಾ ಯೋಜನಾ ಸಂತ್ರಸ್ತರಿಗೆ ಸಂಬಂಧಿಸಿದ ವಿಶೇಷ ಮೀಸಲಾತಿ ಪ್ರಮಾಣ ಪತ್ರ (ಅನ್ವಯಿಸಿದರೆ)
Anganvadi Recruitment 2026 : ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? 

ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ (interview) ಇರುವುದಿಲ್ಲ.

ಅಭ್ಯರ್ಥಿಗಳು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ ಶೇಕಡವಾರು (merit percentage) ಹಾಗೂ ಸರ್ಕಾರದ ನಿಯಮಾನುಸಾರ ಅನ್ವಯವಾಗುವ ಮೀಸಲಾತಿ ಮತ್ತು ವಿಶೇಷ ಆದ್ಯತೆಯನ್ನು ಆಧರಿಸಿ ಮೆರಿಟ್ ಪಟ್ಟಿಯ (merit list) ಮೂಲಕ ನೇರವಾಗಿ ಆಯ್ಕೇ ಮಾಡಲಾಗುತ್ತದೆ.

ಹೀಗಾಗಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ ಇದೆ.

ಇದನ್ನು ಓದಿ

221 Crore Crop Insurance : 221 ಕೋಟಿ ರೂ ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ| ರೈತರ ಖಾತೆಗೆ ಹಣ ಜಮಾ. ಮೊಬೈಲ್ನಲ್ಲೇ ಸ್ಟೇಟಸ್ ಚೆಕ್ ಮಾಡಿ, Important update.

Anganvadi Recruitment 2026 : ಅರ್ಜಿ ಸಲ್ಲಿಸುವ ವಿಧಾನ 

ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಸಿಂಧು ಪೋರ್ಟಲ್ ಮೂಲಕ ಮಾತ್ರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ವೆಬ್ ಸೈಟ್ ಈ ಕೆಳಗಿನಂತಿದೆ.

https://zpyadgiri.karnataka.gov.in/

ಅಂಚೆ ಮೂಲಕ ಅಥವಾ ಕಚೇರಿಗೆ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಂಡು, ಸೂಚನೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅರ್ಜಿ ಭರ್ತಿ ಮಾಡುವುದು ಉತ್ತಮ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ : 24 , 2026

ಹತ್ತನೇ ತರಗತಿ ವಿದ್ಯಾರ್ಹತೆ ಹೊಂದಿರುವ ಹಾಗೂ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ. ವಿಶೇಷವಾಗಿ ಯಾದಗಿರಿ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಎಲ್ಲಾ ಷರತ್ತುಗಳನ್ನು ಪರಿಶೀಲಿಸಿ, ನಿಗದಿತ ಅವಧಿ ಒಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ.

Anganvadi Recruitment 2026 : ಅಂಗನವಾಡಿ ಕೆಲಸಕ್ಕೆ ಸೇರುವ ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು. 
  1. ಮಕ್ಕಳ ಮೇಲಿನ ಪ್ರೀತಿ ಮತ್ತು ತಾಳ್ಮೆ ಬೆಳೆಸಿಕೊಳ್ಳಿ-ಅಂಗನವಾಡಿ ಕೆಲಸದಲ್ಲಿ ಚಿಕ್ಕ ಮಕ್ಕಳ ಆರೈಕೆ, ಶಿಕ್ಷಣ ಮತ್ತು ಪೌಷ್ಟಿಕತೆಗೆ ಹೆಚ್ಚಿನ ಮಹತ್ವವಿದೆ.
  2. ಸಮಯ ಪಾಲನೆ ಮಾಡಿ-ಕೇಂದ್ರವನ್ನು ಸಮಯಕ್ಕೆ ತೆರೆಯುವುದು, ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸುವುದು ಮತ್ತು ದಿನನಿತ್ಯದ ಕಾರ್ಯಗಳನ್ನು ನಿಯಮಿತವಾಗಿ ಪೂರ್ಣಗೊಳಿಸುವುದು ಮುಖ್ಯ.
  3. ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ-ಮಕ್ಕಳ, ಗರ್ಭಿಣಿಯರ ಮತ್ತು ಬಾಣಂತಿಯರಿಗಾಗಿ ಇರುವ ಯೋಜನೆಗಳು ಹಾಗೂ ಸೇವೆಗಳ ಬಗ್ಗೆ ಮಾಹಿತಿ ಹೊಂದಿರಿ.
  4. ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ-ಪೋಷಕರು, ಗ್ರಾಮಸ್ಥರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಸೌಹಾರ್ದಯುತವಾಗಿ ಮಾತನಾಡುವ ಕೌಶಲ್ಯ ಅಗತ್ಯ.
  5. ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿ-ಹಾಜರಾತಿ, ಪೌಷ್ಟಿಕ ಆಹಾರ ವಿತರಣೆ, ಮಕ್ಕಳ ಬೆಳವಣಿಗೆ ದಾಖಲೆಗಳು ಇತ್ಯಾದಿಗಳನ್ನು ನಿಖರವಾಗಿ ದಾಖಲಿಸಿ.
  6. ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ-ಅಂಗನವಾಡಿ ಕೇಂದ್ರವನ್ನು ಸ್ವಚ್ಛವಾಗಿದೆ ಮತ್ತು ಮಕ್ಕಳ ಸುರಕ್ಷತೆಯನ್ನು ಯಾವಾಗಲೂ ಗಮನದಲ್ಲಿಡಿ.
  7. ನಿರಂತರವಾಗಿ ಕಲಿಯಿರಿ-ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು ಹೊಸ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಿ.
  8. ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಇರಲಿ- ಈ ಕೆಲಸವು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಯ ಅವಕಾಶವಾಗಿದೆ.
  9. ಮಕ್ಕಳ ಬೆಳವಣಿಗೆಯ ಹಂತಗಳನ್ನು ತಿಳಿದುಕೊಳ್ಳಿ- 0-6 ವರ್ಷದ ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾಷಾ ಬೆಳವಣಿಗೆಯ ಬಗ್ಗೆ ಮೂಲಭೂತ ಅರಿವು ಹೊಂದಿರಿ.
  10. ಪೌಷ್ಟಿಕ ಆಹಾರದ ಮಹತ್ವ ತಿಳಿಯಿರಿ-ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಸಮತೋಲನ ಆಹಾರದ ಅಗತ್ಯವನ್ನು ತಿಳಿಸಿ.
  11. ಪ್ರಾಥಮಿಕ ಆರೋಗ್ಯದ ಅರಿವು ಹೊಂದಿರಿ -ಲಸಿಕೆ, ಸ್ವಚ್ಛತೆ, ಕೈ ತೊಳೆಯುವ ಅಭ್ಯಾಸ ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಇರಲಿ.
  12. ದಾಖಲೆ ನಿರ್ವಹಣೆಯಲ್ಲಿ ನಿಖರತೆ ಇರಲಿ – ಯಾವುದೇ ಮಾಹಿತಿ ಅಥವಾ ವರದಿಯನ್ನು ತಪ್ಪಿಲ್ಲದೆ ಮತ್ತು ಸಮಯಕ್ಕೆ ಸರಿಯಾಗಿ ದಾಖಲಿಸಿ.
  13. ತಂಡದೊಂದಿಗೆ ಉತ್ತಮ ಸಹಕಾರ ಬೆಳೆಸಿಕೊಳ್ಳಿ – ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಶಾಲಾ ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿಯೊಂದಿಗೆ ಉತ್ತಮ ಹೊಂದಾಣಿಕೆ ಇರಲಿ.
  14. ಪೋಷಕರೊಂದಿಗೆ ವಿಶ್ವಾಸದ ಸಂಬಂಧ ಬೆಳೆಸಿಕೊಳ್ಳಿ- ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ನಿಯಮಿತವಾಗಿ ಮಾಹಿತಿ ಹಂಚಿಕೊಳ್ಳಿ.
  15. ಮಕ್ಕಳಿಗೆ ಆಟದ ಮೂಲಕ ಕಲಿಕೆ ನೀಡಿರಿ – ಹಾಡು, ಕಥೆ, ಚಿತ್ರಕಲೆ ಮತ್ತು ಆಟಗಳ ಮೂಲಕ ಮಕ್ಕಳ ಕಲಿಕೆಯನ್ನು ಆಸಕ್ತಿದಾಯಕ ಗೊಳಿಸಿ.
  16. ತಂತ್ರಜ್ಞಾನ ಬಳಸುವುದನ್ನು ಕಲಿಯಿರಿ – ಮೊಬೈಲ್ ಅಪ್ಲಿಕೇಶನ್ಗಳು ಅಥವಾ ಆನ್ಲೈನ್ ವರದಿ ವ್ಯವಸ್ಥೆಗಳ ಬಳಕೆಯಲ್ಲಿ ಪರಿಣತಿ ಹೊಂದಿರಿ
  17. ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸಿ – ಪೋಷಕರು ಅಥವಾ ಸಾರ್ವಜನಿಕರೊಂದಿಗೆ ಭಿನ್ನಾಭಿಪ್ರಾಯ ಉಂಟಾದರೆ ಸಮಾಧಾನದಿಂದ ಮಾತಾಡಿ.
  18. ನಿರಂತರ ಆತ್ಮವಿಶ್ವಾಸಕ್ಕೆ ಪ್ರಯತ್ನಿಸಿ – ಹೊಸ ತರಬೇತಿಗಳು, ಸರ್ಕಾರಿ ಮಾರ್ಗಸೂಚಿಗಳು ಮತ್ತು ಮಕ್ಕಳ ಆರೈಕೆಯ ಹೊಸ ವಿಧಾನಗಳನ್ನು ಕಲಿಯುತ್ತಿರಿ.

ಸಂದರ್ಶನ (interview) ಇದ್ದರೆ ನೆನಪಿಡಿ 

  • ಆತ್ಮವಿಶ್ವಾಸದಿಂದ ಉತ್ತರಿಸಿ
  • ಸ್ವಚ್ಛ ಮತ್ತು ಸರಳ ಉಡುಗೆ ಧರಿಸಿ
  • ನಿಮ್ಮ ವಿದ್ಯಾರ್ಹತೆ, ದಾಖಲೆಗಳು ಮತ್ತು ಪ್ರಮಾಣ ಪತ್ರಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಿ.
  • ಅಂಗನವಾಡಿಯಲ್ಲಿ ಕೆಲಸ ಮಾಡಲು ಏಕೆ ಆಸಕ್ತಿ? ಎಂಬ ಪ್ರಶ್ನೆಗೆ ಸ್ಪಷ್ಟ ಮತ್ತು ಪ್ರಾಮಾಣಿಕ ಉತ್ತರ ಸಿದ್ಧಪಡಿಸಿ.
  • ಮಕ್ಕಳ ಕಲ್ಯಾಣ, ಮಹಿಳೆಯರ ಆರೋಗ್ಯ ಮತ್ತು ಸಮಾಜ ಸೇವೆಯ ಬಗ್ಗೆ ನಿಮ್ಮ ಆಸಕ್ತಿಯನ್ನು ಸ್ಪಷ್ಟವಾಗಿ ತಿಳಿಸಿ.

ಇದನ್ನು ಓದಿ

Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿ ವೇತನ. ಆನ್ಲೈನ್ ಅರ್ಜಿ ಆಹ್ವಾನ, Important update.

Leave a Comment