PMFME SCHEME 2026: ಕೇಂದ್ರ ಸರ್ಕಾರದ ರೂ 10 ಲಕ್ಷ ಸಬ್ಸಿಡಿ ಯೋಜನೆ, ಯಾರು ಅರ್ಹರು?
ಭಾರತದಲ್ಲಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು ಮತ್ತು ಆಹಾರ ಸಂಸ್ಕರಣ ವಲಯವನ್ನು ಬಲಪಡಿಸಲು ಕೇಂದ್ರ ಸರ್ಕಾರವು ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಅದೇ PMFME ಯೋಜನೆ ಇದರ ಪೂರ್ಣ ಹೆಸರು Pradhan mantri formalisation of micro food processing enterprises.
ಹೊಸದಾಗಿ ಸಣ್ಣ ಪ್ರಮಾಣದ ಆಹಾರ ಉತ್ಪನ್ನಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಬಯಸುವವರಿಗೆ ಅಥವಾ ಈಗಾಗಲೇ ನಡೆಸುತ್ತಿರುವ ಹಳೆಯ ಉದ್ಯಮವನ್ನು ಆಧುನಿಕರಿಸಿ ವಿಸ್ತರಿಸಲು ಬಯಸುವವರಿಗೆ ಈ ಯೋಜನೆ ದೊಡ್ಡ ಆರ್ಥಿಕ ಬೆಂಬಲವನ್ನು ನೀಡುತ್ತದೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅನೇಕ ಯುವ ಉದ್ಯಮಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ತಮ್ಮ ಸ್ವಂತ ವ್ಯವಹರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಈ ಲೇಖನದಲ್ಲಿ PMFME ಯೋಜನೆ ಎಂದರೇನು? ಯಾರಿಗೆಲ್ಲ ಲೋನ್ ಸಿಗುತ್ತದೆ? ಸಬ್ಸಿಡಿ ಎಷ್ಟು? ಯಾವೆಲ್ಲ ಬಿಜಿನೆಸ್ ಗಳಿಗೆ ಸಾಲ ನೀಡಲಾಗುತ್ತದೆ? ಮತ್ತು ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು? ಎಂಬುದನ್ನು ವಿವರವಾಗಿ ತಿಳಿಯೋಣ.
PMFME ಯೋಜನೆ ಎಂದರೇನು?
PMFME ಎಂಬುದು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ಯಮಗಳ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಮಹತ್ವಕಾಂಕ್ಷೆಯ ಯೋಜನೆಯಾಗಿದೆ ಭಾರತದಲ್ಲಿ ಅಸಂಘಟಿತವಾಗಿರುವ ಸಣ್ಣ ಸಣ್ಣ ಆಹಾರ ಉದ್ಯಮಗಳನ್ನು ಸದುಪಯೋಗಪಡಿಸಿಕೊಂಡು ಅವುಗಳನ್ನು ನಿಯಮ ಬದ್ಧಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಮನೆಯಲ್ಲೇ ಉಪ್ಪಿನಕಾಯಿ ಮಸಾಲೆ ಪುಡಿ ಅಥವಾ ಸಣ್ಣ ಹಿಟ್ಟಿನ ಗಿರಣಿಗಳನ್ನು ನಡೆಸುತ್ತಿದ್ದಾರೆ ಆದರೆ ಅವರಿಗೆ ಸರಿಯಾದ ಬ್ರಾಂಡಿಂಗ್ ಪ್ಯಾಕೇಜಿಂಗ್ ಮತ್ತು ತಾಂತ್ರಿಕ ಜ್ಞಾನವಿಲ್ಲದ ಕಾರಣ ದೊಡ್ಡ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಅಂತಹ ಸಣ್ಣ ಘಟಕಗಳಿಗೆ ಆರ್ಥಿಕ ಸಹಾಯ ತಾಂತ್ರಿಕ ನೆರವು ಮತ್ತು ಮಾರುಕಟ್ಟೆ ಸಂಪರ್ಕವನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
ಸಬ್ಸಿಡಿ ಮತ್ತು ಆರ್ಥಿಕ ಸಹಾಯದ ವಿವರಗಳು (subsidy details)
ಈ ಯೋಜನೆ ಅಡಿ ಅರ್ಹ ಅರ್ಜಿದಾರರಿಗೆ ಒಟ್ಟು ಪ್ರಾಜೆಕ್ಟ್ ವೆಚ್ಚದಲ್ಲಿ ಗರಿಷ್ಠ ಶೇಕಡ 35 ರಷ್ಟು ಅಥವಾ ಗರಿಷ್ಠ ರೂ 10 ಲಕ್ಷದವರೆಗೆ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಸಬ್ಸಿಡಿಯನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.
- ಉದಾಹರಣೆ 1: ನೀವು ಪ್ರಾರಂಭಿಸಲಿರುವ ಫುಡ್ ಪ್ರೋಸೆಸಿಂಗ್ ಯೂನಿ ತೈಲಟ್ ನ ಒಟ್ಟು ವೆಚ್ಚ 25 ಲಕ್ಷ ಹಾಗಿದ್ದರೆ ಅದರಲ್ಲಿ ಶೇಕಡ 35 ರಂತೆ ನಿಮಗೆ ರೂ 8.75 ಲಕ್ಷ ಸಬ್ಸಿಡಿ ರೂಪದಲ್ಲಿ ಸಿಗುತ್ತದೆ.
- ಉದಾಹರಣೆ 2: ಒಂದು ವೇಳೆ ನಿಮ್ಮ ಪ್ರಾಜೆಕ್ಟ್ ವೆಚ್ಚ 30 ಲಕ್ಷ ರೂಪಾಯಿ ಆಗಿದ್ದರೆ ಅದರ ಶೇಕಡ 35 ಅಂದರೆ 10.5 ಲಕ್ಷ ರೂಪಾಯಿ ಆಗುತ್ತದೆ ಆದರೆ ಈ ಯೋಜನೆಯ ಗರಿಷ್ಠ ಸಬ್ಸಿಡಿಮಿತಿ ರೂ 10 ಲಕ್ಷ ಮಾತ್ರ ಆಗಿರುವುದರಿಂದ ನಿಮಗೆ ಹತ್ತು ಲಕ್ಷ ರೂಪಾಯಿ ಸಬ್ಸಿಡಿ ದೊರೆಯುತ್ತದೆ ಬಾಕಿ ಉಳಿದ ಮೊತ್ತವನ್ನು ಬ್ಯಾಂಕುಗಳ ಮೂಲಕ ಸುಲಭವಾದ ವ್ಯಾಪಾರ ಸಾಲದ ರೂಪದಲ್ಲಿ ಪಡೆಯಬಹುದು. ಇದರಿಂದಾಗಿ ವ್ಯಾಪಾರ ಆರಂಭಿಸಲು ಕೈಯಲ್ಲಿ ದೊಡ್ಡ ಮೊತ್ತದ ಹಣವಿಲ್ಲದಿದ್ದರೂ ಸ್ವಂತ ಉದ್ಯಮ ಸ್ಥಾಪಿಸುವ ನಿಮ್ಮ ಕನಸು ನನಸಾಗುತ್ತದೆ.
PMFME ಯೋಜನೆಗೆ ಯಾರು ಅರ್ಹರು?(Eligibility criteria)
ಈ ಯೋಜನೆಯಡಿ ಕೇವಲ ವೈಯಕ್ತಿಕ ವ್ಯಕ್ತಿಗಳು ಮಾತ್ರವಲ್ಲದೆ ವಿವಿಧ ಗುಂಪುಗಳು ಸಹ ಪ್ರಯೋಜನ ಪಡೆಯಬಹುದು.
1.ವೈಯಕ್ತಿಕ ಅರ್ಜಿದಾರರು
- ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸು ತುಂಬಿರಬೇಕು
- ಕನಿಷ್ಠ 8ನೇ ತರಗತಿ ತೇರ್ಗಡೆ ಆಗಿರಬೇಕು
- ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿರುತ್ತದೆ
- ಅರ್ಜಿದಾರರು ಆ ಮೈಕ್ರೋ ಉದ್ಯಮದ ಮಾಲೀಕತ್ವದ ಹಕ್ಕನ್ನು ಹೊಂದಿರಬೇಕು.
2. ಗುಂಪುಗಳು ಮತ್ತು ಸಂಘಗಳು
- ಮಹಿಳಾ ಸ್ವಸಹಾಯ ಸಂಘಗಳು ಒಟ್ಟಾಗಿ ಫುಡ್ ಪ್ರೋಸೆಸಿಂಗ್ ಯೂನಿಟ್ ಸ್ಥಾಪಿಸಲು ಅರ್ಹರಾಗಿರುತ್ತಾರೆ.
- ರೈತರು ಒಟ್ಟಾಗಿ ಸೇರಿ ಸ್ಥಾಪಿಸುವ ಸಂಸ್ಥೆಗಳು.
- ಆಹಾರ ಉತ್ಪನ್ನಗಳ ಸಂಗ್ರಹಣೆ ಮತ್ತು ಸಂಸ್ಕರಣೆ ಮಾಡುವ ಸಹಕಾರ ಸಂಘಗಳು ಸಹ ಈ ಯೋಜನೆ ಅಡಿ ಸಾಮಾನ್ಯ ಮೂಲಸೌಕರ್ಯ ಅಥವಾ ಸಂಸ್ಕರಣ ಘಟಕಗಳಿಗೆ ಸಾಲ ಮತ್ತು ಸಬ್ಸಿಡಿಯನ್ನು ಪಡೆಯಬಹುದು.
ಯಾವೆಲ್ಲ ಬಿಜಿನೆಸ್ ಗಳಿಗೆ ಲೋನ್ ಮತ್ತು ಸಬ್ಸಿಡಿ ಸಿಗುತ್ತದೆ?
ಆಹಾರ ಪದಾರ್ಥಗಳ ತಯಾರಿಕೆ ಪ್ಯಾಕೇಜಿಂಗ್ ಮತ್ತು ಶೇಖರಣೆಗೆ ಸಂಬಂಧಿಸಿದ ಯಾವುದೇ ಸಣ್ಣ ಪ್ರಮಾಣದ ಉದ್ಯಮಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ವಿಶೇಷವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿ ಆಯ್ಕೆಯಾದ ಸ್ಥಳೀಯ ಉತ್ಪನ್ನಗಳಿಗೆ ಈ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಆದಾಗಿಯೂ ಓ ಡಿ ಓ ಪಿ ಅಲ್ಲದ ಇತರ ಆಹಾರ ಉತ್ಪನ್ನಗಳ ಉದ್ಯಮಗಳಿಗೂ ಈ ಯೋಜನೆ ಅಡಿ ಸಹಾಯ ಸಿಗುತ್ತದೆ.
ಅರಹವಿರುವ ಕೆಲವು ಪ್ರಮುಖ ಉದ್ಯಮಗಳ ಪಟ್ಟಿ.
1. ಮಸಾಲೆ ಪುಡಿ ಮತ್ತು ಉಪ್ಪಿನಕಾಯಿ ಉದ್ಯಮ
- ಎಲ್ಲಾ ರೀತಿಯ ಉಪ್ಪಿನಕಾಯಿ ಮತ್ತು ಚಟ್ನಿ ತಯಾರಿಕಾ ಘಟಕಗಳು
- ಅಚ್ಚಕಾರದ ಪುಡಿ ಅರಿಶಿಣ ಪುಡಿ ಗರಂ ಮಸಾಲ ಸಾಂಬಾರ್ ಪುಡಿ ಮುಂತಾದ ಮಸಾಲೆ ದಿನಸಿಗಳ ಗ್ರೈಂಡಿಂಗ್ ಮತ್ತು ಪ್ಯಾಕೇಜಿಂಗ್ ಯೂನಿಟ್ ಗಳು.
2. ಬೇಕರಿ ಮತ್ತು ಸ್ನಾಕ್ಸ್ ಉತ್ಪನ್ನಗಳು
- ಬ್ರೆಡ್ ಬಿಸ್ಕತ್ ಕೇಕ್ ಮತ್ತು ಕುಕೀಸ್ ತಯಾರಿಸ ಬೇಕರಿಗಳು.
- ಆಲೂಗಡ್ಡೆ ಚಿಪ್ಸ್ ಬನಾನ ಚಿಪ್ಸ್, ಮಿಕ್ಸರ್ ಚಕ್ಕುಲಿ ಮುಂತಾದ ಸ್ನಾಕ್ಸ್ ತಯಾರಿಕಾ ಕೇಂದ್ರಗಳು.
3. ಹಣ್ಣು ಮತ್ತು ತರಕಾರಿ ಸಂಸ್ಕರಣೆ
- ಹಣ್ಣಿನ ರಸ ಪಲ್ಪ್ ಮತ್ತು ಸಿರಪ್ ಗಳ ತಯಾರಿಕೆ
- ಜೆಲ್ಲಿ ಜಾಮ್ ಹಾಗೂ ಸೂಟ್ ಬಾರ್ ಗಳ ತಯಾರಿಕೆ
- ಒಣಗಿಸಿದ ತರಕಾರಿಗಳು ಮತ್ತು ಟೊಮೇಟೊ ಕೆಚಪ್ ಅಥವಾ ಸಾಸ್ ತಯಾರಿಕೆ.
4. ಧಾನ್ಯಗಳು ಮತ್ತು ಎಣ್ಣೆ ಗಿರಣಿಗಳು
- ಹಿಟ್ಟಿನ ಗಿರಣಿ ಗೋಧಿ ರಾಗಿ ಜೋಳದ ಹಿಟ್ಟು ತಯಾರಿಕೆ.
- ಬೇಳೆಕಾಳುಗಳ ಸಂಸ್ಕರಣೆ ಮತ್ತು ಮಿನಿ ರೈಸ್ ಮಿಲ್
- ಶೇಂಗಾ ಎಳ್ಳು ಮತ್ತು ಸೂರ್ಯಕಾಂತಿ ಬೀಜಗಳಿಂದ ಎಣ್ಣೆ ತೆಗೆಯುವ ಗಾಣದ ಹೆಣ್ಣೆ ಗಿರಣಿಗಳು.
5. ಡೈರಿ ಮತ್ತು ಮಾಂಸದ ಉತ್ಪನ್ನಗಳು
- ಹಾಲು ಸಂಗ್ರಹಣೆ ಮೊಸರು ಮಜ್ಜಿಗೆ ಬೆಣ್ಣೆ ತುಪ್ಪ ಮತ್ತು ಪನ್ನೀರ್ ತಯಾರಿಕಾ ಘಟಕಗಳು
- ಮಾಂಸ ಮತ್ತು ಮೀನು ಸಂಸ್ಕರಣೆ ಪ್ಯಾಕೇಜಿಂಗ್ ಮತ್ತು ಕೋಲ್ಡ್ ಛ್ಘಯ್ದಸ್ಟೋರೇಜ್ ಯೂನಿಟ್ ಗಳು.
PMFME SCHEME ಗೆ ಬೇಕಾಗುವ ಮುಖ್ಯ ದಾಖಲೆಗಳು.
PMFME ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಬೇಕು.
- ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್
- ಕನಿಷ್ಠ 8ನೇ ತರಗತಿ ಪಾಸಾದ ಸರ್ಟಿಫಿಕೇಟ್ ಅಥವಾ ಮಾರ್ಕ್ಸ್ ಕಾರ್ಡ್
- ಬ್ಯಾಂಕ್ ಖಾತೆಯ ಪಾಸ್ ಬುಕ್ ಮೊದಲ ಪುಟ ಅಥವಾ ಕ್ಯಾನ್ಸಲ್ ಚೆಕ್
- ವ್ಯವಹಾರಕ್ಕೆ ಸಂಬಂಧಿಸಿದ ವಿವರವಾದ ಪ್ರಾಜೆಕ್ಟ್ ರಿಪೋರ್ಟ್ ಇದರಲ್ಲಿ ಯಂತ್ರೋಪಕರಣಗಳ ವೆಚ್ಚ ವರ್ಕಿಂಗ್ ಕ್ಯಾಪಿಟಲ್ ಮತ್ತು ಅಂದಾಜು ಲಾಭದ ವಿವರಗಳಿರಬೇಕು
- ಉದ್ಯಮ ನೋಂದಣಿ ಆಹಾರ ಸುರಕ್ಷತಾ ಲೈಸೆನ್ಸ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಇರಬೇಕು (ಈಗಾಗಲೇ ಬಿಸಿನೆಸ್ ಇದ್ದರೆ)
- ಉದ್ಯಮ ಸ್ಥಾಪಿಸುವ ಸ್ಥಳ ಸ್ವಂತದ್ದಾಗಿದ್ದರೆ ಆಸ್ತಿ ಪತ್ರಗಳು ಬಾಡಿಗೆ ಆದರೆ ಬಾಡಿಗೆ ಕರಾರು ಪತ್ರ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ.
ಈ ಯೋಜನೆಗಾಗಿ ಅರ್ಹ ಅಭ್ಯರ್ಥಿಗಳು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ ಹಂತಗಳು ಈ ಕೆಳಗಿನಂತಿವೆ
ಹಂತ 1. ಅಧಿಕೃತ ವೆಬ್ ಸಟ್ ಗೆ ಭೇಟಿ ನೀಡಿ
ಮೊದಲಿಗೆ ಕೇಂದ್ರ ಆಹಾರ ಸಂಸ್ಕರಣ ಉದ್ಯಮಗಳ ಸಚಿವಾಲಯದ ಅಧಿಕೃತ ಪೋರ್ಟಲ್ https://pmfme.mofpi.gov.in/ ಗೆ ಭೇಟಿ ನೀಡಿ.
ಹಂತ 2. ಆನ್ಲೈನ್ ನೋಂದಣಿ
ಹೋಂಪೇಜಿನಲ್ಲಿರುವ ಆನ್ಲೈನ್ ರಿಜಿಸ್ಟ್ರೇಷನ್ ಅಥವಾ ಅಪ್ಲೈ ಹಿಯರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅರ್ಜಿದಾರರ ವರ್ಗವನ್ನು ಆಯ್ದುಕೊಂಡು ನಿಮ್ಮ ಹೆಸರು ಮೊಬೈಲ್ ಸಂಖ್ಯೆ ಇಮೇಲ್ ಐಡಿ ನಮೂದಿಸಿ ಹೊಸ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಿ.
ಹಂತ 3. ಅರ್ಜಿ ನಮೂನೆ ಭರ್ತಿ ಮಾಡುವುದು
ರಚಿಸಿದ ಐಡಿಯೊಂದಿಗೆ ಲಾಗಿನ್ ಆದ ನಂತರ ಸ್ಕ್ರೀನ್ ಮೇಲೆ ಕಾಣಿಸುವ ಅಪ್ಲಿಕೇಶನ್ ಫಾರ್ಮಲ್ಲಿ ನಿಮ್ಮ ವೈಯಕ್ತಿಕ ವಿವರಗಳು ವಿಳಾಸ ವಿದ್ಯಾರ್ಹತೆ ಮತ್ತು ನೀವು ಪ್ರಾರಂಭಿಸಲು ಇಚ್ಛಿಸುವ ಪ್ರಾಜೆಕ್ಟ್ ವಿವರಗಳನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.
ಹಂತ 4. ದಾಖಲೆಗಳನ್ನು ಅಪ್ಲೋಡ್ ಮಾಡುವುದು.
ಮೇಲೆ ತಿಳಿಸಲಾದ ಆಧಾರ್ ಫ್ಯಾನ್ ವಿದ್ಯಾರ್ಥಿ ಪ್ರಮಾಣ ಪತ್ರ ಮತ್ತು ವಿವರವಾದ ಪ್ರಾಜೆಕ್ಟ್ ರಿಪೋರ್ಟ್ ನಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ನಿಗದಿಪಡಿಸಿದ ಸೈಜ್ ನಲ್ಲಿ ಸ್ಕ್ಯಾನ್ ಮಾಡಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ.
ಹಂತ 5. ಪರಿಶೀಲನೆ ಮತ್ತು ಸಾಲ ಮಂಜೂರಾತಿ.
ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಬ್ಮಿಟ್ ಮಾಡಿ.
- ನೀವು ಸಲ್ಲಿಸಿದ ಅರ್ಜಿಯನ್ನು ಮೊದಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮತ್ತು ಜಿಲ್ಲಾಮಟ್ಟದ ಸಮಿತಿ ಪರಿಶೀಲಿಸುತ್ತದೆ.
- ನಿಮ್ಮ ಪ್ರಾಜೆಕ್ಟ್ ಸೂಕ್ತವಾಗಿದ್ದರೆ ನಿಮ್ಮ ಅರ್ಜಿಯನ್ನು ನೀವು ಆಯ್ಕೆ ಮಾಡಿದ ಬ್ಯಾಂಕಿಗೆ ಆನ್ಲೈನ್ ಮೂಲಕ ಕಳುಹಿಸಲಾಗುತ್ತದೆ.
- ಬ್ಯಾಂಕ್ ಅಧಿಕಾರಿಗಳು ನಿಮ್ಮ ಪ್ರಾಜೆಕ್ಟ್ ಸ್ಥಳ ಮತ್ತು ವರದಿಯನ್ನು ಪರಿಶೀಲಿಸಿ ಸಾಲವನ್ನು ಮಂಜೂರು ಮಾಡುತ್ತಾರೆ ಸಾಲ ಮಂಜೂರಾದ ತಕ್ಷಣ ಕೇಂದ್ರ ಸರ್ಕಾರದಿಂದ ಬರಬೇಕಾದ 35 ಪರ್ಸೆಂಟ್ ಸಬ್ಸಿಡಿ ಮತ್ತು ನಿಮ್ಮ ಲೋನ್ ಖಾತೆಗೆ ಜಮೆಯಾಗುತ್ತದೆ.
ಸ್ವಂತವಾಗಿ ಉದ್ಯಮವನ್ನು ಪ್ರಾರಂಭಿಸಿ ಇತರರಿಗೆ ಉದ್ಯೋಗ ನೀಡಬೇಕೆಂದು ಬಯಸುವ ಪ್ರತಿಯೊಬ್ಬರಿಗೂ PMFME ಯೋಜನೆ ಒಂದು ಉತ್ತಮ ಅವಕಾಶವಾಗಿದೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸಿಗುವ ಸ್ಥಳೀಯ ಹಣ್ಣು ತರಕಾರಿ ಹಾಗೂ ಧಾನ್ಯಗಳನ್ನು ವ್ಯರ್ಥ ಮಾಡದೆ ಅವುಗಳನ್ನು ಪ್ರೋಸೆಸ್ ಮಾಡಿ ಮಾರುಕಟ್ಟೆಗೆ ತಂದರೆ, ಉತ್ತಮ ಲಾಭ ಗಳಿಸಬಹುದು ಕೇಂದ್ರ ಸರ್ಕಾರ ನೀಡುವ ಈ 10 ಲಕ್ಷದವರೆಗಿನ ಸಬ್ಸಿಡಿ ಯೋಜನೆಯನ್ನು ಮಿಸ್ ಮಾಡಿಕೊಳ್ಳದೆ ಹಿಂದೆ ನಿಮ್ಮ ಬಿಸಿನೆಸ್ ಪ್ಲಾನ್ ರೆಡಿ ಮಾಡಿಕೊಂಡು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ.