RRC Hubli Recruitment 2026: ದಕ್ಷಿಣ ಪಶ್ಚಿಮ ರೈಲ್ವೆಯಲ್ಲಿ ಖಾಲಿ ಇರುವ 258 ಗೂಡ್ಸ್ ಟ್ರೈನ್ ಮ್ಯಾನೇಜರ್ ಮತ್ತು ಜೂನಿಯರ್ ಇಂಜಿನಿಯರ್ (JE) ಹುದ್ದೆಗಳ ನೇಮಕಾತಿಯ ಅಧಿಸೂಚನೆ ಪ್ರಕಟವಾಗಿದೆ. ಅರ್ಹತೆ, ವಯೋಮಿತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಾ ಇಲಾಖೆಯ ಒಳಗಡೆ ಪ್ರಮೋಷನ್ ಅಥವಾ ಉನ್ನತ ಹುದ್ದೆಗೆ ಏರಲು ಕಾಯುತ್ತಿರುವ ನೌಕರರಿಗೆ ಸುವರ್ಣ ಅವಕಾಶ ಬಂದಿದೆ. ದಕ್ಷಿಣ ಪಶ್ಚಿಮ ರೈಲು (South Western Railway – SWR) ವಲಯದ ರೈಲ್ವೆ ನೇಮಕಾತಿ ಸೆಲ್ (RRC Hubli) 2026 ನೇ ಸಾಲಿನ ಜಿಡಿಸಿಇ (GDCE) ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಈ ನೇಮಕಾತಿಯ ಅಡಿಯಲ್ಲಿ ಒಟ್ಟು 258 ಗೂಡ್ಸ್ ಟ್ರೈನ್ ಮ್ಯಾನೇಜರ್ ಮತ್ತು ಜೂನಿಯರ್ ಇಂಜಿನಿಯರ್ (JE) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಲೇಖನದಲ್ಲಿ RRC Hubli GDCE Recruitment 2026 ರ ಪ್ರಮುಖ ದಿನಾಂಕಗಳು, ಖಾಲಿ ಹುದ್ದೆಗಳ ವಿವರ, ವಿದ್ಯಾರ್ಹತೆ ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ವಿವರವಾಗಿ ತಿಳಿದುಕೊಳ್ಳೋಣ.
RRC Hubli Recruitment 2026 : ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ : ರೈಲ್ವೆ ನೇಮಕಾತಿ ಸೆಲ್, ದಕ್ಷಿಣ ಪಶ್ಚಿಮ ರೈಲು (RRC Hubli)
- ಅಧಿಸೂಚನೆ ಸಂಖ್ಯೆ : GDCE Notification No.01/2026
- ಹುದ್ದೆಗಳ ಹೆಸರು : ಗೂಡ್ಸ್ ಟ್ರೈನ್ ಮ್ಯಾನೇಜರ್ & ಜೂನಿಯರ್ ಇಂಜಿನಿಯರ್ (JE)
- ಒಟ್ಟು ಹುದ್ದೆಗಳು : 258 ಹುದ್ದೆಗಳು
- ಅರ್ಜಿ ಸಲ್ಲಿಕೆ ಆರಂಭ : 9 ನವೆಂಬರ್ 2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 8 ಡಿಸೆಂಬರ್ 2026 (ರಾತ್ರಿ 11:59 ರವರೆಗೆ)
- ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (Nil)
- ಅಧಿಕೃತ ವೆಬ್ಸೈಟ್ : https://www.rrchubli.in/
ಪ್ರಮುಖ ಗಮನಿಸಿ : ಇದು ಮುಕ್ತ ಮಾರುಕಟ್ಟೆ ನೇಮಕಾತಿ (Open Market Recruitment) ಅಲ್ಲ. ಕೇವಲ ನೈರುತ್ಯ ರೈಲ್ವೆ (SWR) ಮತ್ತು ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ (RWF/YNK) ಯಲ್ಲಿ ಪ್ರಸ್ತುತ ಕಾಯಂ ಆಗಿ ಸೇವೆ ಸಲ್ಲಿಸುತ್ತಿರುವ ಅರ್ಹ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುದ್ದೆಗಳ ವಿವರ (Vacancy Details)
RRC Hubli Recruitment 2026 ಒಟ್ಟು 258 ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.
1. ಗೂಡ್ಸ್ ಟ್ರೈನ್ ಮ್ಯಾನೇಜರ್ (Goods Train Manager) : 247 ಹುದ್ದೆಗಳು
2. ಜೂನಿಯರ್ ಇಂಜಿನಿಯರ್ (Junior Engineer- JE): 11 ಹುದ್ದೆಗಳು
- JE/ Bridge: 02 ಹುದ್ದೆಗಳು
- JE/ P.Way : 02 ಹುದ್ದೆಗಳು
- JE/ Mechanical Work Shop: 05 ಹುದ್ದೆಗಳು
- JE/S&T/ Signal: 02 ಹುದ್ದೆಗಳು
RRC Hubli Recruitment 2026 : ಅರ್ಹತೆ ಮತ್ತು ವಿದ್ಯಾರ್ಹತೆ
RRC Hubli Recruitment 2026 ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
- ಗೂಡ್ಸ್ ಟ್ರೈನ್ ಮ್ಯಾನೇಜರ್ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
- ಜೂನಿಯರ್ ಇಂಜಿನಿಯರ್ (JE) : ಹುದ್ದೆಗೆ ಸಂಬಂಧಿಸಿದ ಇಂಜಿನಿಯರಿಂಗ್ ವಿಭಾಗದಲ್ಲಿ (Civil, Mechanical, Electrical, Electronics, Computer Science ಇತ್ಯಾದಿ) 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೋಮಾ ಅಥವಾ ಬಿಇ/ಬಿ ಟೆಕ್ (B.E/B.Tech) ಅಥವಾ ಬಿಎಸ್ಸಿ (B.sc) ಪದವಿ ಪಡೆದಿರಬೇಕು.
ವಯೋಮಿತಿ (Age Limit)
ಅಭ್ಯರ್ಥಿಗಳ ವಯಸ್ಸನ್ನು 01 ಜನವರಿ 2027 ಕ್ಕೆ ಅನ್ವಯವಾಗುವಂತೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿ ಈ ಕೆಳಗಿನಂತಿರಬೇಕು.
- ಸಾಮಾನ್ಯ ವರ್ಗ (UR) : 18 ರಿಂದ 42 ವರ್ಷಗಳು
- ಇತರ ಹಿಂದುಳಿದ ವರ್ಗ (OBC) : 18 ರಿಂದ 45 ವರ್ಷಗಳು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC, ST) : 18 ರಿಂದ 47 ವರ್ಷಗಳು
ಇದನ್ನು ಓದಿ
ಆಯ್ಕೆ ವಿಧಾನ (Selection Process)
RRC Hubli Recruitment 2026 ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ.
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) : ಅಭ್ಯರ್ಥಿಗಳಿಗೆ ಸಿಂಗಲ್ ಸ್ಟೇಜ್ ಆನ್ಲೈನ್ ಲಿಖಿತ ಪರೀಕ್ಷೆ ಇರುತ್ತದೆ.
- ದಾಖಲಾತಿ ಪರಿಶೀಲನೆ (Documents Verification) : ಪರೀಕ್ಷೆಯಲ್ಲಿ ತೇರ್ಗಡೆ ಯಾದವರ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
- ವೈದ್ಯಕೀಯ ತಪಾಸಣೆ (Medical Examination) : ಹುದ್ದೆಗೆ ನಿಗದಿ ಪಡಿಸಿದ ರೈಲ್ವೆ ವೈದ್ಯಕೀಯ ಮಾನದಂಡಗಳ ಪ್ರಕಾರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
RRC Hubli Recruitment 2026 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ರೈಲ್ವೆ ನೌಕರರು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲು RRC ಹುಬ್ಬಳ್ಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://www.rrchubli.in/
- ಹೋಂ ಪೇಜ್ ನಲ್ಲಿ ಕಾಣಿಸುವ “GDCE Notification No.01/2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಲಾಖೆಯ ಐಡಿ (IPAS ID/HRMS ID) ಮತ್ತು ವೈಯಕ್ತಿಕ ವಿವರಗಳನ್ನು ನಮೂದಿಸಿ ನೋಂದಣಿ (Registration) ಮಾಡಿಕೊಳ್ಳಿ.
- ಕೇಳಲಾಗಿರುವ ಎಲ್ಲಾ ಶೈಕ್ಷಣಿಕ ಮತ್ತು ಸೇವಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಿಮ್ಮ ಸಹಿ, ಇತ್ತೀಚಿನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಅಪ್ಲಿಕೇಶನ್ ಫಾರ್ಮ್ ಅನ್ನು ಮರುಪರಿಶೀಲಿಸಿ (Preview) ನಂತರ “Submit “ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ಅನ್ನು ಪಡೆದಿಟ್ಟುಕೊಳ್ಳಿ.
ಇದನ್ನು ಓದಿ
RRC Hubli Recruitment 2026 : FAQs
1. RRC Hubli Recruitment 2026 ಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
ಇದು ಮುಕ್ತ ನೇಮಕಾತಿ ಅಲ್ಲ. ಪ್ರಸ್ತುತ ದಕ್ಷಣ ಪಶ್ಚಿಮ ರೈಲ್ವೆ (SWR) ವಲಯ ಮತ್ತು ಯಲಹಂಕ ರೈಲ್ ವೀಲ್ ಫ್ಯಾಕ್ಟರಿ ಯಲ್ಲಿ ಖಾಯಂ ಆಗಿ ಕೆಲಸ ಮಾಡುತ್ತಿರುವ ಅರ್ಹ ರೈಲ್ವೆ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 8 ಡಿಸೆಂಬರ್ 2026 (ರಾತ್ರಿ 11:59ರವರೆಗೆ) ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಯು 9 ನವೆಬರ್ 2026 ರಿಂದ ಆರಂಭವಾಗುತ್ತದೆ.
3.RRC Hubli Recruitment 2026 ರ ಅಡಿಯಲ್ಲಿ ಒಟ್ಟು ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ?
ಈ ಅಧಿಸೂಚನೆಯ ಮೂಲಕ ಒಟ್ಟು 258 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ 247 ಗೂಡ್ಸ್ ಟ್ರೈನ್ ಮ್ಯಾನೇಜರ್ ಮತ್ತು 11 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳು ಸೇರಿವೆ.
4. ಈ ನೇಮಕಾತಿಗೆ ಅರ್ಜಿ ಶುಲ್ಕ ಎಷ್ಟು ಇರುತ್ತದೆ?
ಜಿಡಿಸಿಇ (GDCE) ಇಲಾಖೆವಾರು ಪರೀಕ್ಷೆಯಾಗಿರುವುದರಿಂದ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
5. ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree )ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕೊನೆಯ ಮಾತು : ಅರ್ಜಿ ಸಲ್ಲಿಸಲು 8 ಡಿಸೆಂಬರ್ 2026 ಕೊನೆಯ ದಿನವಾಗಿದ್ದರು, ಕೊನೆಯ ಕ್ಷಣದ ಸರ್ವರ್ ಬ್ಯುಸಿಯನ್ನು ತಪ್ಪಿಸಲು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಪಿಡಿಎಫ್ ನೋಟಿಫಿಕೇಶನ್ ಡೌನ್ಲೋಡ್ ಮಾಡಲು ದಕ್ಷಿಣ ಪಶ್ಚಿಮ ರೈಲ್ವೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಇದನ್ನು ಓದಿ