KEA FDA SDA ನೇಮಕಾತಿ 2026 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 5,431 FDA ಮತ್ತು SDA ಹುದ್ದೆಗಳ ಬೃಹತ್ ನೇಮಕಾತಿ! ಅರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯ ಸರ್ಕಾರದ ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ ಬೃಹತ್ 5,431 ಪ್ರಥಮ ದರ್ಜೆ ಸಹಾಯಕರು (FDA) ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವ ಜನತೆಗೆ ಇದು ಅತ್ಯಂತ ದೊಡ್ಡ ಅವಕಾಶವಾಗಿದೆ.
ಈ ಲೇಖನದಲ್ಲಿ KEA FDA ಮತ್ತು SDA ನೇಮಕಾತಿಯ ಅರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ಹಂತ ಹಂತದ ಸಂಪೂರ್ಣ ವಿವರಗಳನ್ನು ವಿವರವಾಗಿ ನೀಡಲಾಗಿದೆ.
KEA FDA SDA ನೇಮಕಾತಿ 2026 : ಪ್ರಮುಖ ವಿವರಗಳು
- ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಹುದ್ದೆಗಳ ಹೆಸರು : FDA (First Division Assistant) & SDA (Second Division Assistant)
- ಒಟ್ಟು ಹುದ್ದೆಗಳ ಸಂಖ್ಯೆ : 5,431 ಹುದ್ದೆಗಳು
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online)
- ಉದ್ಯೋಗ ಸ್ಥಳ : ಕರ್ನಾಟಕದಾದ್ಯಂತ
- ಅಧಿಕೃತ ವೆಬ್ಸೈಟ್ :https://cetonline.karnataka.gov.in/kea/
ಹುದ್ದೆಗಳ ವರ್ಗೀಕರಣ (Vacancy Details)
ಒಟ್ಟು 5,431 ಹುದ್ದೆಗಳನ್ನು ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ ವೃಂದ (KK) ಎಂದು ವಿಂಗಡಿಸಲಾಗಿದೆ.
1. FDA (ಪ್ರಥಮ ದರ್ಜೆ ಸಹಾಯಕರು) – ಒಟ್ಟು 2,726 ಹುದ್ದೆಗಳು
- ಉಳಿಕೆ ಮೂಲ ವೃಂದ (RPC) : 2,163 ಹುದ್ದೆಗಳು
- ಕಲ್ಯಾಣ ಕರ್ನಾಟಕ ವೃಂದ (KK) : 563 ಹುದ್ದೆಗಳು
2. SDA (ದ್ವಿತೀಯ ದರ್ಜೆ ಸಹಾಯಕರು) – ಒಟ್ಟು 2,705 ಹುದ್ದೆಗಳು
- ಉಳಿಕೆ ಮೂಲ ವೃಂದ (RPC) : 2,070 ಹುದ್ದೆಗಳು
- ಕಲ್ಯಾಣ ಕರ್ನಾಟಕ ವೃಂದ (KK) : 635 ಹುದ್ದೆಗಳು
ಪ್ರಮುಖ ದಿನಾಂಕಗಳು (Important Dates)
KEA FDA SDA ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಮತ್ತು ಪರೀಕ್ಷೆಗೆ ಸಿದ್ಧರಾಗಲು ಪ್ರಮುಖ ದಿನಾಂಕಗಳನ್ನು ಡೈರಿಯಲ್ಲಿ ಗುರುತು ಮಾಡಿಕೊಳ್ಳಿ.
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : ಅಕ್ಟೋಬರ್ 30, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 25, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 26, 2026
- ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ದಿನಾಂಕಗಳು : 2027ರ ಜನವರಿ 8, 9,10,16 ಮತ್ತು 17
KEA FDA SDA ನೇಮಕಾತಿ 2026 : ಶೈಕ್ಷಣಿಕ ಅರ್ಹತೆ
- FDA ಹುದ್ದೆಗಳಿಗೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation/Degree) ಪಾಸ್ ಆಗಿರಬೇಕು.
- SDA ಹುದ್ದೆಗಳಿಗೆ : ಅಭ್ಯರ್ಥಿಗಳು ದ್ವಿತೀಯ ಪಿಯುಸಿ (12th pass) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ ಮತ್ತು ಸಡಿಲಿಕೆ (Age Limit & Relaxation)
KEA FDA SDA ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ವರ್ಗವಾರು ಗರಿಷ್ಠ ವಯೋಮಿತಿ ಹೀಗಿದೆ.
- ಸಾಮಾನ್ಯ ವರ್ಗ (General Merit) : 35 ವರ್ಷಗಳು
- ಹಿಂದುಳಿದ ವರ್ಗಗಳು (OBC,2A,2B,3A,3B) : 38 ವರ್ಷಗಳು (3 ವರ್ಷ ಸಡಿಲಿಕೆ)
- SC, ST , ಪ್ರವರ್ಗ-1 : 40 ವರ್ಷಗಳು (5 ವರ್ಷ ಸಡಿಲಿಕೆ)
- ವಿಕಲಚೇತನರು ಮತ್ತು ವಿಧವೆಯರು : ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ (Application Fee)
- ಸಾಮಾನ್ಯ ಮತ್ತು ಓಬಿಸಿ (GM/2A,2B,3A,3B) : ₹750
- SC, ST, ಪ್ರವರ್ಗ-1 /ಮಾಜಿ ಸೈನಿಕರು : ₹500
- ವಿಕಲಚೇತನ ಅಭ್ಯರ್ಥಿಗಳು (PWD) : ₹250
- ಪಾವತಿ ವಿಧಾನ : ಆನ್ಲೈನ್ ಮೂಲಕ (UPI, Credit card, debit card, Net banking)
KEA FDA SDA ನೇಮಕಾತಿ 2026 : ವೇತನ ಶ್ರೇಣಿ
ಕರ್ನಾಟಕ ಸರ್ಕಾರದ ನಿಯಮಾವಳಿಗಳ ಪ್ರಕಾರ ಹಾಗೂ ಇತ್ತೀಚಿನ 7ನೇ ವೇತನ ಆಯೋಗದ (7th pay commission)ಶಿಫಾರಸ್ಸುಗಳ ಅನ್ವಯ, ಕೆಇಎ ಮೂಲಕ ನೇಮಕವಾಗುವ FDA & SDA ಹುದ್ದೆಗಳ ಪರಿಷ್ಕೃತ ಅಧಿಕೃತ ವೇತನ ಶ್ರೇಣಿ (Salary Structure) ಈ ಕೆಳಗಿನಂತಿದೆ.
1. FDA (ಪ್ರಥಮ ದರ್ಜೆ ಸಹಾಯಕರು) ವೇತನ ಶ್ರೇಣಿ
- ಮೂಲವೇತನ (Basic Pay) : ₹38,000 ಇಂದ ಆರಂಭವಾಗಿ ₹73,200 ರ ವರೆಗೆ ಇರುತ್ತದೆ.
- ಆರಂಭಿಕ ಒಟ್ಟು ಸಂಬಳ (Gross Salary) : ₹53,000 ರಿಂದ ₹57,000 ವರೆಗೆ (ಮೂಲವೇತನದ ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) , ಮತ್ತು ನಗರ ಭತ್ಯೆ ಗಳು ಸೇರಿರುತ್ತದೆ.)
- ಕೈಗೆ ಸಿಗುವ ಸಂಬಳ (In hand Salary) : ಎಲ್ಲಾ ಕಡಿತಗಳ (NPS, ಇನ್ಸೂರೆನ್ಸ್ ಇತ್ಯಾದಿ) ನಂತರ ಆರಂಭದಲ್ಲಿ ಸರಿಸುಮಾರು ₹48,000 ರಿಂದ ₹52,000 ವರೆಗೆ ಕೈಗೆ ಸಿಗುತ್ತದೆ.
2. SDA (ದ್ವಿತೀಯ ದರ್ಜೆ ಸಹಾಯಕರು) ವೇತನ ಶ್ರೇಣಿ
- ಮೂಲವೇತನ (Basic Pay) : ₹29,600 ಇಂದ ಆರಂಭವಾಗಿ ₹57,100 ರ ವರೆಗೆ ಇರುತ್ತದೆ.
- ಆರಂಭಿಕ ಒಟ್ಟು ಸಂಬಳ (Gross Salary) : ₹42,000 ರಿಂದ ₹45,000 ವರೆಗೆ (ಎಲ್ಲಾ ಭತ್ಯೆ ಗಳು ಸೇರಿ)
- ಕೈಗೆ ಸಿಗುವ ಸಂಬಳ (In hand Salary) : ಎಲ್ಲಾ ಕಡಿತಗಳ ನಂತರ ಆರಂಭದಲ್ಲಿ ಸರಿಸುಮಾರು ₹37,000 ರಿಂದ ₹40,000 ವರೆಗೆ ಕೈಗೆ ಸಿಗುತ್ತದೆ.
(ಗಮನಿಸಿ : ಉದ್ಯೋಗ ನಿಯೋಜನೆಗೊಳ್ಳುವ ನಗರ/ಸ್ಥಳದ (ಮೆಟ್ರೋ ಸಿಟಿ, ಜಿಲ್ಲಾ ಕೇಂದ್ರ ಅಥವಾ ಗ್ರಾಮೀಣ ಭಾಗ) ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆ (HRA) ವ್ಯತ್ಯಾಸವಾಗುವುದರಿಂದ ಸಂಬಳದಲ್ಲಿ ಸ್ವಲ್ಪ ಬದಲಾವಣೆಗಳಿರುತ್ತವೆ.)
ಇದನ್ನು ಓದಿ
ಆಯ್ಕೆ ವಿಧಾನ ಮತ್ತು ಪರೀಕ್ಷಾ ಸ್ವರೂಪ (Selection Process & Exam Pattern)
KEA FDA SDA ನೇಮಕಾತಿ 2026 ರಲ್ಲಿ ಯಾವುದೇ ಸಂದರ್ಶನ (Interview )ಇರುವುದಿಲ್ಲ. ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ.
1. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (150 ಅಂಕಗಳು)
ಶಾಲಾ ಕಾಲೇಜುಗಳಲ್ಲಿ ಕನ್ನಡ ಓದದವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಇದರಲ್ಲಿ ಕನಿಷ್ಠ 50 ಅಂಕಗಳಿಸಿ ಅರ್ಹತೆ ಪಡೆಯುವುದು ಕಡ್ಡಾಯ. (ಇದರ ಅಂಕಗಳನ್ನು ಮೆರಿಟ್ ಗೆ ಪರಿಗಣಿಸುವುದಿಲ್ಲ)
2. ಪತ್ರಿಕೆ-1 : ಸಾಮಾನ್ಯ ಜ್ಞಾನ (100 ಅಂಕಗಳು)
ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ, ಪ್ರಚಲಿತ ವಿದ್ಯಮಾನಗಳು ಮತ್ತು ಮೆಂಟಲ್ ಎಬಿಲಿಟಿ ಪ್ರಶ್ನೆಗಳಿರುತ್ತವೆ. (ಸಮಯ 2 ಗಂಟೆ)
3. ಪತ್ರಿಕೆ-2 : ಸಾಮಾನ್ಯ ಕನ್ನಡ/ಇಂಗ್ಲಿಷ್ ಮತ್ತು ಕಂಪ್ಯೂಟರ್ ( 100 ಅಂಕಗಳು)
ಭಾಷಾಜ್ಞಾನ ಮತ್ತು ಕಂಪ್ಯೂಟರ್ ಸಾಕ್ಷರತೆ ಕುರಿತ ಪ್ರಶ್ನೆಗಳು (ಸಮಯ 2 ಗಂಟೆ)
(ನೆನಪಿಡಿ : ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.25 (1/4) ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಮೆರಿಟ್ ಪಟ್ಟಿಯನ್ನು ಒಟ್ಟು 200 ಅಂಕಗಳಿಗೆ ಸಿದ್ಧಪಡಿಸಲಾಗುತ್ತದೆ.)
KEA FDA SDA ನೇಮಕಾತಿ 2026 ಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ KEA ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://cetonline.karnataka.gov.in/kea/
- ಮುಖಪುಟದಲ್ಲಿರುವ “Recruitment” ವಿಭಾಗದಲ್ಲಿ “FDA SDA Recruitment 2026” ಲಿಂಕ್ ಕ್ಲಿಕ್ ಮಾಡಿ.
- “New Registration” ಕ್ಲಿಕ್ ಮಾಡಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ನೀಡಿ ಓಟಿಪಿ (OTP) ಮೂಲಕ ನೋಂದಣಿ ಮಾಡಿ.
- ದೊರೆತ User ID ಮತ್ತು Password ಬಳಸಿ ಲಾಗಿನ್ ಆಗಿ.
- ನಿಮ್ಮ ವೈಯಕ್ತಿಕ ವಿವರ, ವಿದ್ಯಾರ್ಹತೆ ಮತ್ತು ಮೀಸಲಾತಿ ವಿವರಗಳನ್ನು ಭರ್ತಿ ಮಾಡಿ.
- ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ವಿವರಗಳನ್ನೆಲ್ಲ ಮರುಪರಿಶೀಲಿಸಿ (Preview) ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಅರ್ಜಿ ಸಬ್ಮಿಟ್ ಮಾಡಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ Application Form ಅನ್ನು ಪ್ರಿಂಟ್ ಅಥವಾ PDF ಆಗಿ ಸೇವ್ ಮಾಡಿ ಕೊಳ್ಳಿ.
ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿ
KEA FDA SDA ನೇಮಕಾತಿ 2026 : FAQs
1. FDA & SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 25, 2026 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕವನ್ನು ಪಾವತಿಸಲು ನವೆಂಬರ್ 26, 2026 ರ ವರೆಗೆ ಕಾಲಾವಕಾಶವಿದೆ.
2. ಈ ನೇಮಕಾತಿಯ ಒಟ್ಟು ಹುದ್ದೆಗಳು ಎಷ್ಟು ಮತ್ತು ಪರೀಕ್ಷೆ ಯಾವಾಗ ನಡೆಯುತ್ತದೆ?
ಈ ಪ್ರಕಟಣೆಯ ಅಡಿಯಲ್ಲಿ ಒಟ್ಟು 5,431 ಹುದ್ದೆಗಳನ್ನು (2,726 FDA & 2,705 SDA) ಕರೆಯಲಾಗಿದೆ. ಇದರ ಸ್ಪರ್ಧಾತ್ಮಕ ಪರೀಕ್ಷೆಗಳು 2027ರ ಜನವರಿ 8, 9, 10, 16 ಮತ್ತು 17 ರಂದು ನಡೆಯಲಿದೆ.
3. FDA ಮತ್ತು SDA ಹುದ್ದೆಗಳಿಗೆ ಇರುವ ಶೈಕ್ಷಣಿಕ ಅರ್ಹತೆ ಏನು?
FDA (ಪ್ರಥಮ ದರ್ಜೆ ಸಹಾಯಕ) ಹುದ್ದೆಗಳಿಗೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಕಡ್ಡಾಯ. SDA (ದ್ವಿತೀಯ ದರ್ಜೆ ಸಹಾಯಕ) ಹುದ್ದೆಗಳಿಗೆ ದ್ವಿತೀಯ ಪಿಯುಸಿ (12th pass) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
4. ಒಬ್ಬರೇ ಅಭ್ಯರ್ಥಿ FDA ಮತ್ತು SDA ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಹೌದು, ಖಂಡಿತ ಸಲ್ಲಿಸಬಹುದು. ನೀವು ಪದವಿ (Degree ) ಮುಗಿಸಿದ್ದರೆ, ಅರ್ಜಿಯಲ್ಲಿ ಎರಡು ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಒಂದೇ ಲಾಗಿನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಎರಡು ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.
5. KEA FDA SDA ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇದೆಯೇ?
ಹೌದು, ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 (1/4) ಅಂಕಗಳನ್ನು ಕಳೆಯಲಾಗುತ್ತದೆ.
6. ಈ ಹುದ್ದೆಗಳಿಗೆ ಆಯ್ಕೆಯಾಗಲು ಸಂದರ್ಶನ (Interview) ಇರುತ್ತದೆಯೇ ?
ಇಲ್ಲ. ಈ ಹುದ್ದೆಗಳಿಗೆ ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಗಳಿಸುವ ಅಂಕಗಳ (Merit) ಆಧಾರದ ಮೇಲೆ ನೇರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
KEA FDA SDA ನೇಮಕಾತಿ 2026 : Conclusion
ಕೊನೆಯ ದಿನಾಂಕದವರೆಗೆ ಕಾಯದೆ ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿಯನ್ನು ಸಲ್ಲಿಸಿ ಪರೀಕ್ಷಾ ತಯಾರಿಯನ್ನು ಆರಂಭಿಸಿ. ಕೇವಲ ಎರಡು ಪತ್ರಿಕೆಗಳಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ನೀವು ಸುಲಭವಾಗಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಇಲಾಖೆಗಳಲ್ಲಿ FDA & SDA ಅಧಿಕಾರಿಯಾಗಬಹುದು.
ಇದೇ ರೀತಿಯ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಇದನ್ನು ಓದಿ