RRB Station Master Jobs 2026 : ₹35,400 ಆರಂಭಿಕ ಮೂಲವೇತನ, RRB Station Master Jobs 2026 ರ ಸಂಪೂರ್ಣ ವಿವರಗಳು, ಹೊಸ ಪರೀಕ್ಷಾ ಮಾದರಿ, ಪಠ್ಯಕ್ರಮ, ವೇತನ ಮತ್ತು ಅರ್ಹತೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಬೇಕು ಎಂಬುದು ಲಕ್ಷಾಂತರ ಯುವಕರ ಕನಸು. ಇದೀಗ ಆ ಕನಸನ್ನು ನನಸು ಮಾಡಿಕೊಳ್ಳಲು ಸುವರ್ಣ ಅವಕಾಶ ಬಂದಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB )ಇತ್ತೀಚಿಗೆ (Station Master) ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆಯನ್ನು (CEN 08/2026) ಹೊರಡಿಸಿದೆ.
ಈ ಬಾರಿ ರೈಲ್ವೆ ಇಲಾಖೆಯು ಸುಮಾರು 1,250 ಹುದ್ದೆಗಳ ಬೃಹತ್ ನೇಮಕಾತಿಯನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಈ ಬಾರಿಯ ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿಯಲ್ಲಿ ಭಾರಿ ಬದಲಾವಣೆಗಳನ್ನು ತರಲಾಗಿದೆ. ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಅರ್ಹತೆಗಳು, ಪ್ರಮುಖ ದಿನಾಂಕಗಳು, ಹೊಸ ಪರೀಕ್ಷಾ ವಿಧಾನ ಮತ್ತು ವೇತನದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಇದನ್ನು ಓದಿ
RRB Station Master Jobs 2026 : ಪ್ರಮುಖ ದಿನಾಂಕಗಳು
ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ, ನಿಗದಿತ ಸಮಯದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮ.
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 27 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 ನವಂಬರ್ 2026
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ (Eligibility Criteria)
RRB Station Master Jobs 2026 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
1. ಶೈಕ್ಷಣಿಕ ಅರ್ಹತೆ (Educational Qualification)
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation/Degree) ಪಾಸ್ ಆಗಿರಬೇಕು.
- ಗಮನಿಸಿ : ಪ್ರಸ್ತುತ ಅಂತಿಮ ವರ್ಷದ ಫಲಿತಾಂಶಕ್ಕಾಗಿ ಕಾಯುತ್ತಿರುವ (Appearing Candidates)ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
2. ವಯೋಮಿತಿ (Age Limit)
- 1 ಜನವರಿ 2027ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗೆ ಕನಿಷ್ಠ 20 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷದ ಒಳಗಿರಬೇಕು.
- (ವಿಶೇಷ ಸೂಚನೆ : ಇತ್ತೀಚಿನ ನಿಯಮದ ಪ್ರಕಾರ ಕನಿಷ್ಠ ವಯೋಮಿತಿಯನ್ನು 18 ರಿಂದ 20 ವರ್ಷಕ್ಕೆ ಹೆಚ್ಚಿಸಲಾಗಿದೆ.)
- ಸರ್ಕಾರದ ನಿಯಮಾವಳಿಗಳ ಪ್ರಕಾರ OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC, ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
3. ವೈದ್ಯಕೀಯ ಗುಣಮಟ್ಟ (Medical Standards)
- ಸ್ಟೇಷನ್ ಮಾಸ್ಟರ್ ಹುದ್ದೆಗೆ ಕಣ್ಣಿನ ದೃಷ್ಟಿ ಅತ್ಯಂತ ಪ್ರಮುಖವಾಗಿದೆ. ಅಭ್ಯರ್ಥಿಗಳು. A-2 ವೈದ್ಯಕೀಯ ಗುಣಮಟ್ಟವನ್ನು ಹೊಂದಿರಬೇಕು. ಅಂದರೆ ಯಾವುದೇ ಕನ್ನಡಕವಿಲ್ಲದೆ ದೂರದೃಷ್ಟಿ 6/9 ಇರಬೇಕು.
ಇದನ್ನು ಓದಿ
RRB Station Master Jobs 2026 : ವೇತನ ಶ್ರೇಣಿ ಎಷ್ಟು?
ರೈಲ್ವೆಯಲ್ಲಿ ಸ್ಟೇಷನ್ ಮಾಸ್ಟರ್ ಹುದ್ದೆಯು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಹುದ್ದೆಯಾಗಿದೆ. ಇದಕ್ಕೆ ತಕ್ಕಂತೆ ವೇತನವು ಉತ್ತಮವಾಗಿರುತ್ತದೆ.
- ಈ ಹುದ್ದೆಯು 7ನೇ ವೇತನ ಆಯೋಗದ ಲೆವೆಲ್ -6 ರ ಅಡಿಯಲ್ಲಿ ಬರುತ್ತದೆ.
- ಮೂಲವೇತನ (Basic Pay) : ₹35,400 ಪ್ರತಿ ತಿಂಗಳು.
- ಒಟ್ಟು ಇನ್ ಹ್ಯಾಂಡ್ ವೇತನ : ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ (TA) ಮತ್ತು ನೈಟ್ ಶಿಫ್ಟ್ ಭತ್ಯೆ ಗಳು ಎಲ್ಲವೂ ಸೇರಿ ತಿಂಗಳಿಗೆ ಸರಿ ಸುಮಾರು ₹45,000 ರಿಂದ ₹50,000 ವರೆಗೆ ಆರಂಭಿಕ ವೇತನ ಸಿಗುತ್ತದೆ.
ಆಯ್ಕೆ ವಿಧಾನದಲ್ಲಿ ಅತಿ ದೊಡ್ಡ ಬದಲಾವಣೆಗಳೇನು? (New Selection Process)
ರೈಲ್ವೆ ಮಂಡಳಿಯು ಈ ಬಾರಿ ಅಭ್ಯರ್ಥಿಗಳಿಗೆ ಶಾಕ್ ನೀಡುವಂತಹ ಮತ್ತು ಪ್ರಕ್ರಿಯೆಯನ್ನು ಸುಲಭಗೊಳಿಸುವಂತಹ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಮುಂಚೆ CBT -1 ಮತ್ತು CBT -2 ಎಂಬ ಎರಡು ಹಂತದ ಲಿಖಿತ ಪರೀಕ್ಷೆಗಳಿರುತ್ತಿದ್ದವು. ಆದರೆ ಈಗ ಒಂದೇ ಹಂತದ ಸಿ ಬಿ ಟಿ (Single Stage CBT) ಪರೀಕ್ಷೆಯನ್ನು ಜಾರಿಗೆ ತರಲಾಗಿದೆ.
ಆಯ್ಕೆಯ ಹಂತಗಳು ಹೀಗಿವೆ
- ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (Single Stage CBT) : ಇದು ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡುವ ಮೊದಲ ಹಂತ.
- ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT) : ಇದನ್ನು “ಸೈಕೋ ಟೆಸ್ಟ್ “ಎಂದು ಕರೆಯುತ್ತಾರೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದವರು ಇದನ್ನು ಬರೆಯಬೇಕು.
- ದಾಖಲೆಗಳ ಪರಿಶೀಲನೆ (Documents Verification)
- ವೈದ್ಯಕೀಯ ತಪಾಸಣೆ (Medical Examination)
ಹೊಸ ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ (New Exam Pattern & Syllabus)
ಈ ಬಾರಿಯ ಲಿಖಿತ ಪರೀಕ್ಷೆಯಿಂದ ಸಾಮಾನ್ಯ ಜ್ಞಾನ/ಜನರಲ್ ಸ್ಟಡೀಸ್ (GK/GS) ವಿಷಯವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಬದಲಾಗಿ ಇಂಗ್ಲಿಷ್ ರೀಡಿಂಗ್ ಕಾಂಪ್ರಿಹೆನ್ಶನ್ ಮತ್ತು ಡೇಟಾ ಅನಾಲಿಸಿಸ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪರೀಕ್ಷೆಯು ಒಟ್ಟು 100 ಅಂಕಗಳಿಗೆ ನಡೆಯಲಿದ್ದು, 120 ನಿಮಿಷಗಳ (2 ಗಂಟೆ) ಕಾಲಾವಕಾಶ ಇರುತ್ತದೆ.
- ಬೇಸಿಕ್ ಸೈನ್ಸ್, ಮ್ಯಾಥಮೆಟಿಕ್ಸ್ ಮತ್ತು ಅನಾಲಿಟಿಕಲ್ ಸಾಮರ್ಥ್ಯ (Basic Science, Maths & analytical Capability) : 60 ಅಂಕಗಳು
- ಲಾಜಿಕಲ್ ಸಾಮರ್ಥ್ಯ (Logical Capability) : 20 ಅಂಕಗಳು
- ಮೆಂಟಲ್ ರೀಸನಿಂಗ್ (Mental Reasoning) : 20 ಅಂಕಗಳು
- ಒಟ್ಟು: 100 ಅಂಕಗಳು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How To Apply)
RRB Station Master Jobs 2026 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 27 ಅಕ್ಟೋಬರ್ 2026ರ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ಮೊದಲು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. https://www.rrbapply.gov.in/#/auth/landing
- “CEN 08/2026 – Station Master Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಬಳಸಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
- ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಕೊನೆಯದಾಗಿ ಅರ್ಜಿಯನ್ನು “submit” ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಇದನ್ನು ಓದಿ
RRB Station Master Jobs 2026 : FAQS
1. RRB ಸ್ಟೇಷನ್ ಮಾಸ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
RRB Station Master Jobs 2026 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 25 ನವಂಬರ್ 2026 ಕೊನೆಯ ದಿನಾಂಕವಾಗಿದೆ.
2. ಈ ಬಾರಿಯ ನೇಮಕಾತಿಯಲ್ಲಿ ಆಯ್ಕೆ ವಿಧಾನ ಹೇಗೆ ಬದಲಾಗಿದೆ?
ಈ ಹಿಂದೆ CBT -1 & CBT -2 ಎಂಬ ಎರಡು ಲಿಖಿತ ಪರೀಕ್ಷೆಗಳಿರುತ್ತಿದ್ದವು, ಆದರೆ 2026ರ ಹೊಸ ನಿಯಮದ ಪ್ರಕಾರ, ಕೇವಲ ಒಂದೇ ಹಂತದ ಲಿಖಿತ ಪರೀಕ್ಷೆ (Single Stage CBT)ಇರಲಿದ್ದು, ಅದರ ನಂತರ ಆಪ್ಟಿಟ್ಯೂಡ್ ಟೆಸ್ಟ್ (CBAT )ನಡೆಯುತ್ತದೆ.
3. ಸ್ಟೇಷನ್ ಮಾಸ್ಟರ್ ಪರೀಕ್ಷೆಯಿಂದ ಜಿ. ಕೆ (General Knowledge) ವಿಷಯವನ್ನು ಕೈ ಬಿಡಲಾಗಿದೆಯೇ?
ಹೌದು. ಹೊಸ ಪಠ್ಯಕ್ರಮದ ಪ್ರಕಾರ ಸಾಮಾನ್ಯ ಜ್ಞಾನ (GK/GS) ವಿಷಯವನ್ನು ಕೈ ಬಿಡಲಾಗಿದೆ. ಬದಲಾಗಿ ಬೇಸಿಕ್ ಸೈನ್ಸ್, ಮ್ಯಾಥಮೆಟಿಕ್ಸ್, ಲಾಜಿಕಲ್ ಮತ್ತು ಮೆಂಟಲ್ ರೀಸನಿಂಗ್ ವಿಷಯಗಳು 100 ಅಂಕಗಳನ್ನು ನಿಗದಿಪಡಿಸಲಾಗಿದೆ.
4. ಈ ಹುದ್ದೆಗೆ ಕನಿಷ್ಠ ವಯೋಮಿತಿ ಎಷ್ಟಿರಬೇಕು?
ಹೊಸ ನಿಯಮದ ಪ್ರಕಾರ ಕನಿಷ್ಠ ವಯೋಮಿತಿಯನ್ನು 18 ರಿಂದ 20 ವರ್ಷಕ್ಕೆ ಹೆಚ್ಚಿಸಲಾಗಿದೆ. ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷದ ಒಳಗಿರಬೇಕು. (OBC/SC, ST ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.)
5. ಅಂತಿಮ ವರ್ಷದ ಪದವಿ ಓದುತ್ತಿರುವವರು (Appearing Candidates)ಅರ್ಜಿ ಸಲ್ಲಿಸಬಹುದೇ?
ಇಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಯು ಕಡ್ಡಾಯವಾಗಿ ಪದವಿ (Degree) ಪಾಸ್ ಆಗಿ ರಿಸಲ್ಟ್ ಹೊಂದಿರಬೇಕು. ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಅವಕಾಶವಿಲ್ಲ.
6. ಸ್ಟೇಷನ್ ಮಾಸ್ಟರ್ ಹುದ್ದೆಗೆ ಮಾಸಿಕ ವೇತನ ಎಷ್ಟು ಸಿಗುತ್ತದೆ?
ಇದು 7 ನೇ ವೇತನ ಆಯೋಗದ ಲೆವೆಲ್-6 ರ ಅಡಿಯಲ್ಲಿ ಬರುವ ಹುದ್ದೆಯಾಗಿದ್ದು,₹35,400 ಮೂಲವೇತನ ಇರುತ್ತದೆ. ಎಲ್ಲಾ ಭತ್ಯೆ ಗಳು ಸೇರಿ ಆರಂಭಿಕ ಇನ್ ಹ್ಯಾಂಡ್ ವೇತನ ₹45,000 ರಿಂದ ₹50,000 ವರೆಗೆ ಸಿಗುತ್ತದೆ.
7. ಈ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದೇ?
ಹೌದು. ಆನ್ಲೈನ್ ಅರ್ಜಿ ಸಲ್ಲಿಸುವಾಗ ಪ್ರಾದೇಶಿಕ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೀವು ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬಹುದು.
RRB Station Master Jobs 2026: Conclusion : ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಲು ಬಯಸುವ ಪದವೀಧರರಿಗೆ ಇದು ಸುವರ್ಣ ಅವಕಾಶ. ಜಿಕೆ ವಿಷಯ ಇಲ್ಲದಿರುವುದರಿಂದ, ಮ್ಯಾಥಮೆಟಿಕ್ಸ್ ಮತ್ತು ರಿಸನಿಂಗ್ ನಲ್ಲಿ ಉತ್ತಮ ಹಿಡಿತ ಸಾಧಿಸಿದರೆ ಈ ಹುದ್ದೆಯನ್ನು ಸುಲಭವಾಗಿ ಪಡೆಯಬಹುದು. ತಡ ಮಾಡದೆ ಇಂದಿನಿಂದಲೇ ನಿಮ್ಮ ಸಿದ್ಧತೆಯನ್ನು ಆರಂಭಿಸಿ.
ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ