Supreme Court Recruitment 2026 : ಜೂನಿಯರ್ ಕೋರ್ಟ್ ಅಟೆಂಡೆಂಟ್ 130 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ, Important update.

Supreme Court Recruitment 2026Supreme Court Recruitment 2026 : ಸುಪ್ರೀಂ ಕೋರ್ಟ್ ಜೂನಿಯರ್ ಕೋರ್ಟ್ ಅಟೆಂಡೆಂಟ್ ನೇಮಕಾತಿ 2026, 10 ನೇ ತರಗತಿ ಪಾಸಾದವರಿಗೆ 130 ಹುದ್ದೆಗಳು ಲಭ್ಯ. ಸಂಬಳ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ. 

ನೀವು ಕೇಂದ್ರ ಸರ್ಕಾರಿ ಉದ್ಯೋಗದ (Central Government Jobs 2026) ಹುಡುಕಾಟದಲ್ಲಿ ಇದ್ದೀರಾ? ಆಗಿದ್ದಲ್ಲಿ ನಿಮಗೊಂದು ಸುವರ್ಣ ಅವಕಾಶವಿದೆ. ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಆಫ್ ಇಂಡಿಯಾ (Supreme Court Of India) ಖಾಲಿ ಇರುವ Junior Court Attendant (Group C, Non – Clerical) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಅಕ್ಟೋಬರ್ 15, 2026 ರಂದು ಹೊರಡಿಸಲಾದ ಈ ಅಧಿಸೂಚನೆಯ ಪ್ರಕಾರ, ಒಟ್ಟು 130 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೇವಲ ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಇದು ದೇಶದ ಅತ್ಯುನ್ನತ ಸಂಸ್ಥೆಯಲ್ಲಿ ಕೆಲಸ ಮಾಡಲು ಸಿಗುತ್ತಿರುವ ಅದ್ಭುತಾವಕಾಶವಾಗಿದೆ.

ಈ ಲೇಖನದಲ್ಲಿ ನಾವು ಸುಪ್ರೀಂಕೋರ್ಟ್ ಜೂನಿಯರ್ ಅಟೆಂಡೆಂಟ್ ನೇಮಕಾತಿಯ ಅರ್ಹತೆಗಳು, ವಯೋಮಿತಿ, ಸಂಬಳ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಿದ್ದೇವೆ.

ಇದನ್ನು ಓದಿ

ಬೆಳಗಾವಿ TCO ನೇಮಕಾತಿ 2026 : ಸ್ಟಾಫ್ ನರ್ಸ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

Supreme Court Recruitment 2026 : ಪ್ರಮುಖ ವಿವರಗಳು 

  • ಸಂಸ್ಥೆಯ ಹೆಸರು : ಸುಪ್ರೀಂ ಕೋರ್ಟ್ ಆಫ್ ಇಂಡಿಯಾ (Supreme Court Of India)
  • ಹುದ್ದೆಯ ಹೆಸರು : Junior Court Attendant (Group C, Non – Clerical)
  • ಒಟ್ಟು ಹುದ್ದೆಗಳು: 130
  • ಅಧಿಸೂಚನೆ ಸಂಖ್ಯೆ : Advt No.F.3/2026-SC
  • ಉದ್ಯೋಗದ ಸ್ಥಳ : ನವದೆಹಲಿ (New Delhi)
  • ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ (Online)
  • ಅಧಿಕೃತ ವೆಬ್ಸೈಟ್ : sci.gov.in

ಪ್ರಮುಖ ದಿನಾಂಕಗಳು (Important Dates)

Supreme Court Recruitment 2026 ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಿನ ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

  • ಅಧಿಸೂಚನೆ ಪ್ರಕಟವಾದ ದಿನಾಂಕ : ಅಕ್ಟೋಬರ್ 15, 2026
  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 4 ನವಂಬರ್ 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 25, 2026
  • ಲಿಖಿತ ಪರೀಕ್ಷೆಯ ದಿನಾಂಕ (ತಾತ್ಕಾಲಿಕ) : ಡಿಸೆಂಬರ್ 26, 2026

Supreme Court Recruitment 2026 : ಅರ್ಹತೆಯ ಮಾನದಂಡಗಳು 

Supreme Court Recruitment 2026 Junior Court Attendant ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

1. ಶೈಕ್ಷಣಿಕ ವಿದ್ಯಾರ್ಹತೆ (Educational Qualification)

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ (Class 10th/SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
  • ಗಮನಿಸಿ : ಈ ಹುದ್ದೆಗೆ ಗರಿಷ್ಠ ಶೈಕ್ಷಣಿಕ ಅರ್ಹತೆಯನ್ನು 12ನೇ ತರಗತಿ (PUC )ಎಂದು ನಿಗದಿ ಪಡಿಸಲಾಗಿದೆ.

2. ವಯೋಮಿತಿ (Age Limit)

  • ಕನಿಷ್ಠ ವಯಸ್ಸು : 18 ವರ್ಷ ತುಂಬಿರಬೇಕು.
  • ಗರಿಷ್ಠ ವಯಸ್ಸು : 27 ವರ್ಷ ಮೀರಿರಬಾರದು.
  • ವಯೋಮಿತಿ ಲೆಕ್ಕಾಚಾರದ ದಿನಾಂಕ : ಅಕ್ಟೋಬರ್ 1, 2026 ಕ್ಕೆ ಅನ್ವಯವಾಗುವಂತೆ ವಯಸ್ಸು ಲೆಕ್ಕಾಚಾರ ಹಾಕಲಾಗುತ್ತದೆ.
  • ವಯೋಮಿತಿ ಸಡಿಲಿಕೆ : ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್ ಸಿ, ಎಸ್ ಟಿ, ಓಬಿಸಿ ಮತ್ತು ಇತರೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಸಂಬಳ ಮತ್ತು ಭತ್ಯೆ ಗಳು ( Salary Details)

Supreme Court Recruitment 2026 Junior Court Attendant ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುತ್ತದೆ.

  • ಈ ಹುದ್ದೆಯು ಕೇಂದ್ರವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ನ Level 3 ರ ಅಡಿಯಲ್ಲಿ ಬರುತ್ತದೆ.
  • ಆರಂಭಿಕ ಮೂಲವೇತನ (Basic Pay) : ₹21,700
  • ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ತುಟ್ಟಿ ಭತ್ಯೆ (DA) , ಮನೆ ಬಾಡಿಗೆ ಭತ್ಯೆ (HRA) , ಸಾರಿಗೆ ಭತ್ಯೆ (TA) ಲಭ್ಯವಿರುತ್ತದೆ. ಎಲ್ಲಾ ಭತ್ಯೆ ಗಳು ಸೇರಿ ಆರಂಭಿಕ ಮಾಸಿಕ ಸಂಬಳ ಸರಿಸುಮಾರು ₹40,000 ಆಸು ಪಾಸಿನಲ್ಲಿ ಇರುತ್ತದೆ.

ಅರ್ಜಿ ಶುಲ್ಕ (Application Fee)

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಕೆಳಗಿನಂತೆ ಆನ್ಲೈನ್ ಮೂಲಕ ಶುಲ್ಕ ಪಾವತಿಸಬೇಕಾಗುತ್ತದೆ.

  • ಸಾಮಾನ್ಯ (General/UR) ಅಭ್ಯರ್ಥಿಗಳಿಗೆ : ₹1,500
  • SC, ST, OBC, ಮಾಜಿ ಸೈನಿಕ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ₹750
  • ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ (UCO Bank Payment Gateway)ಮೂಲಕ ಮಾತ್ರ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)

Supreme Court Recruitment 2026 Junior Court Attendant ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಯಾವುದೇ ರೀತಿಯ ಪ್ರಭಾವವಿಲ್ಲದೆ ಕಟ್ಟುನಿಟ್ಟಾದ ಎರಡು ಹಂತಗಳ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

  1. ವಸ್ತುನಿಷ್ಠ ಮಾದರಿಯ ಲಿಖಿತ ಪರೀಕ್ಷೆ (Written Test – Objective Type) : ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಸಾಮಾನ್ಯ ಜ್ಞಾನ, ಗಣಿತ ಮತ್ತು ಭಾಷಾ ಸಾಮರ್ಥ್ಯದ ಪ್ರಶ್ನೆಗಳಿರುತ್ತವೆ.
  2. ಸಂದರ್ಶನ (Interview) : ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಅಂತಿಮ ಹಂತದ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಇದನ್ನು ಓದಿ

Sangolli Rayanna Sainik School Recruitment: ಸಂಗೊಳ್ಳಿ ಸೈನಿಕ ಶಾಲೆಯಲ್ಲಿ ನೇಮಕಾತಿ, ₹1.5 ಲಕ್ಷ ವೇತನ, Important update.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (How to Apply Online)

  1. ಮೊದಲು ಸುಪ್ರೀಂ ಕೋರ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://www.sci.gov.in/recruitments/
  2. ಹೋಂ ಪೇಜ್ ನಲ್ಲಿರುವ “Recruitment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  3. “Online Application For Junior Court Attendant – 2026” ಲಿಂಕ್ ಅನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.
  4. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಬಳಸಿ ನೋಂದಣಿ (Registration) ಮಾಡಿಕೊಳ್ಳಿ.
  5. ನಂತರ ಲಾಗಿನ್ ಆಗಿ, ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  6. ಅಗತ್ಯವಿರುವ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  7. ಆನ್ಲೈನ್ ಬ್ಯಾಂಕಿಂಗ್ ಅಥವಾ ಕಾರ್ಡ್ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಿ.
  8. ಕೊನೆಯದಾಗಿ, ಅರ್ಜಿಯನ್ನು ‘Submit ” ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Supreme Court Recruitment 2026 : FAQs

1. ಸುಪ್ರೀಂಕೋರ್ಟ್ ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 25, 2026 (ರಾತ್ರಿ 11:55 ರವರೆಗೆ)

2. ಈ ಹುದ್ದೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಏನು? 

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ ತೇರ್ಗಡೆಯಾಗಿರಬೇಕು (Class 10th/SSLC). ಆದರೆ ಗರಿಷ್ಠ ಶೈಕ್ಷಣಿಕ ಅರ್ಹತೆ 12ನೇ ತರಗತಿ.

3. ಜೂನಿಯರ್ ಕೋರ್ಟ್ ಅಟೆಂಡೆಂಟ್ ಹುದ್ದೆಯ ಆರಂಭಿಕ ಸಂಬಳ ಎಷ್ಟಿರುತ್ತದೆ? 

ಈ ಹುದ್ದೆಯು ಪೇ ಮ್ಯಾಟ್ರಿಕ್ಸ್ ಲೆವೆಲ್ 3 ರ ಅಡಿಯಲ್ಲಿ ಬರುತ್ತದೆ. ಇದರ ಮೂಲವೇತನ ₹21,700 ಆಗಿದ್ದು ಎಲ್ಲಾ ಭತ್ಯೆ ಗಳು ಸೇರಿ ಆರಂಭಿಕ ಮಾಸಿಕ ಸಂಬಳ ಸರಿಸುಮಾರು ₹40,000 ಇರಲಿದೆ.

4. ಈ ಹುದ್ದೆಗೆ ವಯೋಮಿತಿ ಎಷ್ಟಿರಬೇಕು? 

ಅಕ್ಟೋಬರ್ 1, 2026 ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 27 ವರ್ಷ ಮೀರಿರಬಾರದು. ಮೀಸಲಾತಿ ವರ್ಗದವರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

5. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? 

ಅಭ್ಯರ್ಥಿಗಳನ್ನು ಪ್ರಮುಖವಾಗಿ ಎರಡು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಮೊದಲನೆಯದು ವಸ್ತುನಿಷ್ಠ ಮಾದರಿಯ ಲಿಖಿತ ಪರೀಕ್ಷೆ (Written Test) ಮತ್ತು ಎರಡನೆಯದು ಸಂದರ್ಶನ (Interview).

6. ಅರ್ಜಿ ಶುಲ್ಕ ಎಷ್ಟು ಮತ್ತು ಅದನ್ನು ಹೇಗೆ ಪಾವತಿಸಬೇಕು? 

ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹1,500 ಮತ್ತು SC, ST, OBC ಮಾಜಿ ಸೈನಿಕ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ₹750 . ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.

Supreme Court Recruitment 2026 : Conclusion

10 ನೇ ತರಗತಿ ಮುಗಿಸಿ ಗೌರವಾನ್ವಿತ ಸುಪ್ರೀಂಕೋರ್ಟ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಆನ್ಲೈನ್ ಅರ್ಜಿ ಸಲ್ಲಿಕೆ ನವಂಬರ್ 4 ರಿಂದ ಆರಂಭವಾಗುವುದರಿಂದ, ಕೊನೆಯ ದಿನದ ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಅಭ್ಯರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಪರೀಕ್ಷೆಯು ಡಿಸೆಂಬರ್ ಕೊನೆಯಲ್ಲಿ ಇರುವುದರಿಂದ ಈಗಿನಿಂದಲೇ ನಿಮ್ಮ ಸಿದ್ಧತೆಯನ್ನು ಆರಂಭಿಸಿ.

ನಿಮಗೆ ಈ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಹಾಗೂ ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.

ಇದನ್ನು ಓದಿ

BMRCL Recruitment 2026 : ಬೆಂಗಳೂರು ಮೆಟ್ರೋದಲ್ಲಿ 50 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳ ನೇಮಕಾತಿ, ಪದವಿ ವಿದ್ಯಾರ್ಥಿಗಳಿಗೆ important update.

Leave a Comment