LIC HFL Recruitment 2026 : LIC HFL ಅಪ್ರೆಂಟಿಸ್ ನೇಮಕಾತಿ 2026 ಪ್ರಕಟಣೆ. 232 ಹುದ್ದೆಗಳು, ಅರ್ಹತೆ , ಮಾಸಿಕ ₹16,650 ಸ್ಟೈ ಫಂಡ್, ಪರೀಕ್ಷಾ ವಿಧಾನ ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳು ಕನ್ನಡದಲ್ಲಿ ಇಲ್ಲಿದೆ.
ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ (BFSI Sector) ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಲು ಬಯಸುವ ಪದವೀಧರರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ದೇಶದಾದ್ಯಂತ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.
ಈ ಲೇಖನದಲ್ಲಿ LIC HFL ಅಪ್ರೆಂಟಿಸ್ಶಿಪ್ ಕಾರ್ಯಕ್ರಮದ ಒಟ್ಟು ಹುದ್ದೆಗಳು, ಅರ್ಹತೆಗಳು, ವಯೋಮಿತಿ, ಸ್ಟೈಫಂಡ್, ಪರೀಕ್ಷಾ ವಿಧಾನ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ವಿವರವಾಗಿ ನೀಡಲಾಗಿದೆ.
LIC HFL Recruitment 2026 : ಪ್ರಮುಖ ವಿವರಗಳು
- ಸಂಸ್ಥೆಯ ಹೆಸರು : LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL)
- ಹುದ್ದೆಯ ಹೆಸರು : ಅಪ್ರೆಂಟಿಸ್ (Apprentice)
- ಒಟ್ಟು ಹುದ್ದೆಗಳ ಸಂಖ್ಯೆ : 232
- ಅರ್ಜಿ ಸಲ್ಲಿಸುವ ಮೋಡ್ : ಆನ್ಲೈನ್ ನಲ್ಲಿ ಮಾತ್ರ
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 20 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01 ನವಂಬರ್ 2026
- ಅಧಿಕೃತ ವೆಬ್ಸೈಟ್ : https://nats.education.gov.in/
ಮಾಸಿಕ ಸ್ಟೈ ಫಂಡ್ (Monthly Stipend)
LIC HFL Recruitment 2026 ಕ್ಕೆ ಆಯ್ಕೆಯಾಗುವ ಅಪ್ರೆಂಟಿಸ್ ಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ಭತ್ಯೆ (Stipend) ನೀಡಲಾಗುತ್ತದೆ. ನಗರಗಳ ಆಧಾರದ ಮೇಲೆ ಸ್ಟೈ ಫಂಡ್ ಈ ಕೆಳಗಿನಂತಿದೆ.
- ಮೆಟ್ರೋ ನಗರಗಳು (ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಪುಣೆ, ಸೂರತ್) : ₹16,650
- ಇತರ ನಗರಗಳು : ₹14,150 ಪ್ರತಿ ತಿಂಗಳು
ಅರ್ಹತಾ ಮಾನದಂಡಗಳು (Eligibility Criteria)
LIC HFL Recruitment 2026 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಮುಗಿಸಿರಬೇಕು.
- ವಯೋಮಿತಿ : (01 ಅಕ್ಟೋಬರ್ 2026 ಕ್ಕೆ ಅನ್ವಯಿಸುವಂತೆ) : ಕನಿಷ್ಠ 20 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ 25 ವರ್ಷಗಳ ಒಳಗಿರಬೇಕು. (ಅಭ್ಯರ್ಥಿಯು 01 ಅಕ್ಟೋಬರ್ 2001 ರ ಮುಂಚೆ ಜನಿಸಿರಬಾರದು.)
- ಕಾರ್ಯಾನುಭವ : ಅಭ್ಯರ್ಥಿಯು ಈ ಮುಂಚೆ ಯಾವುದೇ ಸಂಸ್ಥೆಯಲ್ಲಿ ಅಪ್ರೆಂಟಿಸ್ ಶಿಪ್ ತರಬೇತಿ ಪಡೆದಿರಬಾರದು ಅಥವಾ ಪ್ರಸ್ತುತ ಯಾವುದೇ ಸಂಸ್ಥೆಯೊಂದಿಗೆ ಅಪ್ರೆಂಟಿಸ್ ಶಿಪ್ ಒಪ್ಪಂದವನ್ನು ಹೊಂದಿರಬಾರದು.
LIC HFL Recruitment 2026 : ಅರ್ಜಿ ಶುಲ್ಕದ ವಿವರಗಳು
ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೋಡ್ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.
- SC, ST ಅಭ್ಯರ್ಥಿಗಳಿಗೆ : ₹200
- ಅಂಗವಿಕಲ (PWBD) ಅಭ್ಯರ್ಥಿಗಳಿಗೆ : ₹200
- ಸಾಮಾನ್ಯ (General ) , EWS ಮತ್ತು OBC- ಪುರುಷ ಅಭ್ಯರ್ಥಿಗಳಿಗೆ : ₹800
- ಸಾಮಾನ್ಯ (General ) , EWS ಮತ್ತು OBC- ಮಹಿಳಾ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ : ₹600
ಪ್ರವೇಶ ಪರೀಕ್ಷೆಯ ಮಾದರಿ (Online Exam Pattern)
LIC HFL Recruitment 2026 ನೇಮಕಾತಿಗಾಗಿ BFSI ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಆನ್ಲೈನ್ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಒಟ್ಟು ಸಮಯ : 60 ನಿಮಿಷಗಳು (1 ಗಂಟೆ)
- ಪ್ರಶ್ನೆಗಳ ಸಂಖ್ಯೆ : 100 ಪ್ರಶ್ನೆಗಳು (100 ಅಂಕಗಳು)
- ಪರೀಕ್ಷೆಯ ಭಾಷೆ : ಇಂಗ್ಲೀಷ್ ಮತ್ತು ಹಿಂದಿ ಮಾತ್ರ
ವಿಷಯವಾರು ಅಂಕಗಳ ಹಂಚಿಕೆ :
- General/Financial Awareness (ಸಾಮಾನ್ಯ/ಹಣಕಾಸು ಜಾಗೃತಿ) : 25 ಪ್ರಶ್ನೆಗಳು 25 ಅಂಕಗಳು.
- General English(ಸಾಮಾನ್ಯ ಇಂಗ್ಲಿಷ್ ) : 25 ಪ್ರಶ್ನೆಗಳು 25 ಅಂಕಗಳು .
- Reasoning Ability & Computer Aptitude (ಸಮರ್ಥನೆ ಮತ್ತು ಕಂಪ್ಯೂಟರ್ ಸಾಮರ್ಥ್ಯ) : 25 ಪ್ರಶ್ನೆಗಳು 25 ಅಂಕಗಳು .
- Quantitative Aptitude (ಗಣಿತ ಸಾಮರ್ಥ್ಯ ) : 25 ಪ್ರಶ್ನೆಗಳು 25 ಅಂಕಗಳು .
- ಒಟ್ಟು: 100 ಪ್ರಶ್ನೆಗಳು 100 ಅಂಕಗಳು.
ಪರೀಕ್ಷೆ ಬರೆಯುವ ವಿಧಾನ (Online Proctored Exam)
ಇದು ಮನೆಯಿಂದಲೇ ಬರೆಯಬಹುದಾದ ಆನ್ಲೈನ್ ಪರೀಕ್ಷೆಯಾಗಿದೆ. ಅಭ್ಯರ್ಥಿಗಳು ತಮ್ಮ ಸ್ವಂತ ಡೆಸ್ಕ್ ಟಾಪ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಅಥವಾ ಮುಂಭಾಗದ ಕ್ಯಾಮರಾ (Front Camera) ಹೊಂದಿರುವ ಸ್ಮಾರ್ಟ್ ಫೋನ್ ಬಳಸಿ ಪರೀಕ್ಷೆ ಬರೆಯಬಹುದು. ಪರೀಕ್ಷೆಯ ಸಮಯದಲ್ಲಿ ಉತ್ತಮ ಇಂಟರ್ನೆಟ್ ಸಂಪರ್ಕ ಇರಬೇಕು ಮತ್ತು ಕ್ಯಾಮರಾ ಮುಂದೆ ತಮ್ಮ ಆಧಾರ್ ಕಾರ್ಡ್ ತೋರಿಸಿ ಗುರುತು ದೃಢೀಕರಿಸಬೇಕು.
ಇದನ್ನು ಓದಿ
ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ (Important Dates)
ನಿಗದಿತ ವೇಳಾಪಟ್ಟಿಯ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಪ್ರಮುಖ ದಿನಾಂಕಗಳು ಹೀಗಿವೆ.
- ಆನ್ ಲೈನ್ ಅರ್ಜಿ ಸಲ್ಲಿಕೆ ಅವಧಿ : 20/10/2026 ರಿಂದ 01/11/2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 1/11/2026
- ಆನ್ಲೈನ್ ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 07/11/2026
- ದಾಖಲೆ ಪರಿಶೀಲನೆ ಮತ್ತು ಸಂದರ್ಶನ (Interview): 15/11/2026 ರಿಂದ
- ಆಯ್ಕೆ ಪತ್ರ (Offer Letter) ವಿತರಣೆ : ನವೆಂಬರ್ 2026ರ 3ನೇ ವಾರ
- ತರಬೇತಿಗೆ ಹಾಜರಾಗುವ ಅವಧಿ (Reporting) : ನವೆಂಬರ್ 2026ರ 4ನೇ ವಾರ.
ರಾಜ್ಯ ಮತ್ತು ನಗರವಾರು ಹುದ್ದೆಗಳ ವಿವರ (Vacancy Details)
LIC HFL Recruitment 2026 ದೇಶದಾದ್ಯಂತ ಒಟ್ಟು 232 ಹುದ್ದೆಗಳಿದ್ದು, ವಿವಿಧ ರಾಜ್ಯಗಳ ಪ್ರಮುಖ ನಗರಗಳ ಹಂಚಿಕೆ ಹೀಗಿದೆ.
1. ಕರ್ನಾಟಕ (Karnataka) – ಒಟ್ಟು 25 ಹುದ್ದೆಗಳು
- ಬೆಂಗಳೂರು (Bangalore) : 13 ಹುದ್ದೆಗಳು
- ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹಾಸನ, ಹೊಸಕೋಟೆ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಸರ್ಜಾಪುರ, ತುಮಕೂರು : ತಲಾ 1 ಹುದ್ದೆ.
2. ನೆರೆಹೊರೆಯ ಮತ್ತು ಇತರ ಪ್ರಮುಖ ರಾಜ್ಯಗಳು
- ತಮಿಳುನಾಡು
- ತೆಲಂಗಾಣ
- ಆಂಧ್ರ ಪ್ರದೇಶ
- ಮಹಾರಾಷ್ಟ್ರ
- ದೆಹಲಿ
- ಅಸ್ಸಾಂ
- ಬಿಹಾರ
- ಗುಜರಾತ್
- ಹರಿಯಾಣ
- ಮಧ್ಯಪ್ರದೇಶ
- ಒಡಿಸ್ಸಾ
- ಪಂಜಾಬ್
- ರಾಜಸ್ಥಾನ
- ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ
ಅರ್ಜಿ ಸಲ್ಲಿಸುವುದು ಹೇಗೆ ? (How to Apply)
LIC HFL Recruitment 2026 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹಂತ-1 (NATS Portal ನೋಂದಣಿ) :
ಮೊದಲು ಭಾರತ ಸರ್ಕಾರದ ಅಧಿಕೃತ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ತರಬೇತಿ ಯೋಜನೆ (NATS) ಪೋರ್ಟಲ್ https://nats.education.gov.in/ ಗೆ ಭೇಟಿ ನೀಡಿ. “Students Registration” ವಿಭಾಗದಲ್ಲಿ ನೋಂದಾಯಿಸಿಕೊಳ್ಳಿ ಮತ್ತು Enrollment ID ಪಡೆದುಕೊಳ್ಳಿ.
ಹಂತ -2 (ಶುಲ್ಕ ಪಾವತಿ ಮತ್ತು ಅರ್ಜಿ ಸಲ್ಲಿಕೆ) :
ತದನಂತರ https://beep.bfsissc.com/ ವೆಬ್ಸೈಟಿಗೆ ಭೇಟಿ ನೀಡಿ ಪರೀಕ್ಷಾ ಶುಲ್ಕವನ್ನು ಪಾವತಿಸಿ. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ submit ಮಾಡಿ.
ಗಮನಿಸಿ : NATS portal ನಲ್ಲಿ ನೀಡಲಾದ ವಿವರಗಳು ಮತ್ತು ಆನ್ ಲೈನ್ ಪರೀಕ್ಷೆಯ ನೋಂದಣಿ ವಿವರಗಳು ಪರಸ್ಪರ ಹೊಂದಾಣಿಕೆಯಾಗಬೇಕು. ಯಾವುದೇ ತಪ್ಪು ಮಾಹಿತಿ ಅಥವಾ ಅಪೂರ್ಣ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುವುದು.
ಸಹಾಯಕ್ಕಾಗಿ ಸಂಪರ್ಕಿಸಿ (Helpline Email)
ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ ಅಭ್ಯರ್ಥಿಗಳು apprenticeships@bfsissc.com ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ಪರಿಹಾರ ಪಡೆಯಬಹುದು.
ಇದನ್ನು ಓದಿ
LIC HFL Recruitment 2026 : FAQs
1. LIC HFL ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿಸಲು 1 ನವಂಬರ್ 2026 ಕೊನೆಯ ದಿನಾಂಕವಾಗಿದೆ.
2. LIC HFL ಅಪ್ರೆಂಟಿಸ್ ಶಿಪ್ ಗೆ ಮಾಸಿಕ ಎಷ್ಟು? ಸ್ಟೈಫಂಡ್ (Stipend )ನೀಡಲಾಗುತ್ತದೆ?
ಬೆಂಗಳೂರು ಸೇರಿದಂತೆ ಮೆಟ್ರೋ ನಗರಗಳಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ₹16,650 ಮತ್ತು ಇತರ ನಗರಗಳಲ್ಲಿ ₹14,150 ಸ್ಟೈಫಂಡ್ ನೀಡಲಾಗುತ್ತದೆ.
3. ಕರ್ನಾಟಕದಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ?
ಕರ್ನಾಟಕದಲ್ಲಿ 25 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಅತಿ ಹೆಚ್ಚು ಅಂದರೆ ಬೆಂಗಳೂರಿನಲ್ಲಿ 13 ಹುದ್ದೆಗಳು ಇವೆ. ಉಳಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಲ್ಲಿ ತಲಾ 1 ಹುದ್ದೆ ಇದೆ.
4. LIC HFL Recruitment 2026 ಹುದ್ದೆಗಳಿಗೆ ಪರೀಕ್ಷೆಯನ್ನು ಎಲ್ಲಿ ನಡೆಸಲಾಗುತ್ತದೆ?
ಇದು online Proctored ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳು ತಮ್ಮ ಮನೆಯಿಂದಲೇ ಸ್ವಂತ ಲ್ಯಾಪ್ಟಾಪ್, ಡೆಸ್ಕ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಬಳಸಿ ಕ್ಯಾಮೆರಾ ಆನ್ ಮಾಡಿಕೊಂಡು ಪರೀಕ್ಷೆ ಬರೆಯಬಹುದು.
5. LIC HFL ಅಪ್ರೆಂಟಿಸ್ ಪರೀಕ್ಷೆಯು ಯಾವ ಭಾಷೆಯಲ್ಲಿ ಇರುತ್ತದೆ?
ಆನ್ಲೈನ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಇರುತ್ತದೆ.
6. ಈ ಅಪ್ರೆಂಟಿಸ್ ತರಬೇತಿಯ ಅವಧಿ ಎಷ್ಟು ವರ್ಷ ಮತ್ತು ಇದು ಖಾಯಂ ಕೆಲಸವೇ?
ಈ ತರಬೇತಿಯ ಅವಧಿ 12 ತಿಂಗಳು ಮಾತ್ರ. ಇದು ಕೇವಲ ಆನ್ ಜಾಬ್ ತರಬೇತಿ ಕಾರ್ಯಕ್ರಮವಾಗಿದ್ದು, ಖಾಯಂ ಉದ್ಯೋಗವಲ್ಲ.
7. ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ ಏನು?
01 ಅಕ್ಟೋಬರ್ 2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 25 ವರ್ಷ ಮೀರಿರಬಾರದು.
8. ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅಧಿಕೃತ ಲಿಂಕ್ ಯಾವುದು?
ಅಭ್ಯರ್ಥಿಗಳು ಮೊದಲು education.gov.in ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡು, ನಂತರ bfsissc.com ಲಿಂಕ್ ಮೂಲಕ ಅರ್ಜಿ ಶುಲ್ಕ ಪಾವತಿಸಿ ಆನ್ಲೈನ್ ಅರ್ಜಿ ಸಲ್ಲಿಸಬೇಕು.
ಇದೇ ರೀತಿಯ ಉದ್ಯೋಗ ಮಾಹಿತಿಯನ್ನು ತಕ್ಷಣವೇ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ಹಾಗೂ ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಈ ಲೇಖನವನ್ನು ಶೇರ್ ಮಾಡಿ.
ಇದನ್ನು ಓದಿ