Sangolli Rayanna Sainik School Recruitment : ನೀವು ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಪ್ರತಿಷ್ಠಿತ ಸೈನಿಕ ಶಾಲೆಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಲು ಬಯಸುತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶವಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ (KSRSS) ಇತ್ತೀಚಿಗೆ ವಿವಿಧ ಬೋಧಕ (Teaching )ಮತ್ತು ಬೋಧಕೇತರ (Non Teaching)ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
ಸೈನಿಕ ಸ್ಕೂಲ್ ಸೊಸೈಟಿ ಮತ್ತು ರಕ್ಷಣಾ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಈ ಶಾಲೆಯು ಅರ್ಹ ಅಭ್ಯರ್ಥಿಗಳಿಂದ ಗುತ್ತಿಗೆ ಆಧಾರದ (Contractual Basis) ಮೇಲೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯವಿರುವ ಅರ್ಹತೆಗಳು, ವಯೋಮಿತಿ ಮತ್ತು ವೇತನದ ಸಂಪೂರ್ಣ ವಿವರಗಳನ್ನು ವಿವರವಾಗಿ ನೀಡಲಾಗಿದೆ.
ಇದನ್ನು ಓದಿ
Sangolli Rayanna Sainik School Recruitment : ಹುದ್ದೆಗಳ ವಿವರ, ವಿದ್ಯಾರ್ಹತೆ & ಮಾಸಿಕ ವೇತನ
Sangolli Rayanna Sainik School Recruitment ಗೆ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಒಟ್ಟು 15 ಕ್ಕೂ ಹೆಚ್ಚು ವಿಭಿನ್ನ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನದೊಂದಿಗೆ ಉಚಿತ ಊಟ ಮತ್ತು ಸುಸಜ್ಜಿತ ವಸತಿ ಸೌಲಭ್ಯವನ್ನು (Free Food & Furnished Family/Single Accommodation) ನೀಡಲಾಗುತ್ತದೆ.
ಆಡಳಿತ ಮಂಡಳಿ ಹುದ್ದೆಗಳು (Administrative Post)
1. ಅಡ್ಮಿನಿಸ್ಟ್ರೇಷನ್ ಆಫೀಸರ್ (Administration Officer – 01 ಹುದ್ದೆ)
- ಅಗತ್ಯ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು. ರಕ್ಷಣಾ ಪಡೆಗಳಲ್ಲಿ (ಆರ್ಮಿ, ನೇವಿ ಅಥವಾ ಏರ್ ಫೋರ್ಸ್) ಮೇಜರ್/ಲೆಫ್ಟಿನೆಂಟ್ ಕರ್ನಲ್ ಅಥವಾ ತತ್ಸಮಾನ ಹುದ್ದೆ ನಿರ್ವಹಿಸಿದ ನಿವೃತ್ತ ಅಧಿಕಾರಿಯಾಗಿರಬೇಕು. ಆಡಳಿತ ಮತ್ತು ಲಾಜಸ್ಟಿಕ್ಸ್ ವಿಭಾಗದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿನ ಅನುಭವ ಕಡ್ಡಾಯ. (ಆರ್ಮಿ ಎಜುಕೇಶನ್ ಕಾರ್ಪ್ಸ್ ಅಥವಾ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಅಭ್ಯರ್ಥಿಗಳಿಗೆ ಆದ್ಯತೆ.)
- ವಯೋಮಿತಿ : ಗರಿಷ್ಠ 63 ವರ್ಷಗಳು
- ಮಾಸಿಕ ವೇತನ : ₹1,15,000
2. ವೈದ್ಯಾಧಿಕಾರಿ (Medical Officer – 01 ಹುದ್ದೆ)
- ಅಗತ್ಯ ಅರ್ಹತೆ : ಕನಿಷ್ಠ 55% ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ MBBS ಅಥವಾ BAMS ಪದವಿ ಪಡೆದಿರಬೇಕು. ಎರಡು ವರ್ಷಗಳ ವೈದ್ಯಕೀಯ ಕೆಲಸದ ಅನುಭವ ಇದ್ದವರಿಗೆ ಆದ್ಯತೆ ಇರುತ್ತದೆ.
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ : ₹55,000
ಬೋಧಕ ಹುದ್ದೆಗಳು (Teaching Post’s)
1. ಟಿಜಿಟಿ-ವಿಜ್ಞಾನ/ಭೌತಶಾಸ್ತ್ರ (TGT Science/Physics – 01 ಹುದ್ದೆ) & ಟಿಜಿಟಿ-ಸಮಾಜ ವಿಜ್ಞಾನ ( TGT Social Science – 02 ಹುದ್ದೆಗಳು)
- ಅಗತ್ಯ ಅರ್ಹತೆ : ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹೊಂದಿರಬೇಕು. ಇದರೊಂದಿಗೆ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ B.ed ಪದವಿ ಕಡ್ಡಾಯ.
- ಆದ್ಯತೆ : ಕೇಂದ್ರ ಅಥವಾ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (CTET/TET) ಉತ್ತೀರ್ಣರಾದವರಿಗೆ, ವಸತಿ ಶಾಲೆಗಳಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ಜ್ಞಾನ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ : ₹44,000
2. ಕರಕುಶಲ ಬೋಧಕರು (Craft Instructor – 01 ಹುದ್ದೆ)
- ಅಗತ್ಯ ಅರ್ಹತೆ : ಕನಿಷ್ಠ 50% ಅಂಕಗಳೊಂದಿಗೆ ಫೈನ್ ಆರ್ಟ್ಸ್ ನಲ್ಲಿ ಪದವಿ (ಡ್ರಾಯಿಂಗ್ ಮತ್ತು ಪೇಂಟಿಂಗ್ ಮುಖ್ಯ ವಿಷಯವಾಗಿರಬೇಕು) ಮತ್ತು ಕನಿಷ್ಠ 50% ಅಂಕಗಳೊಂದಿಗೆ B.ed ಪದವಿ ಇರಬೇಕು. ಇಂಗ್ಲಿಷ್, ಹಿಂದಿ ಹಾಗೂ ಕನ್ನಡ ಭಾಷೆಗಳ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನದ ಜೊತೆಗೆ ಶಾಲಾ ಕೆಲಸದ ಅನುಭವ ಅಗತ್ಯ.
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ : ₹27,000
3. ಸಂಗೀತ ಶಿಕ್ಷಕರು/ಬ್ಯಾಂಡ್ ಮಾಸ್ಟರ್ (Music Teacher/ Band Master – 01 ಹುದ್ದೆ)
- ಅಗತ್ಯ ಅರ್ಹತೆ : ಕನಿಷ್ಠ 50% ಅಂಕಗಳೊಂದಿಗೆ ಸಂಗೀತ ವಿಷಯದಲ್ಲಿ ಪದವಿ ಹೊಂದಿರಬೇಕು ಅಥವಾ AEC ಟ್ರೈನಿಂಗ್ ಕಾಲೇಜಿನಿಂದ ಬ್ಯಾಂಡ್ ಮಾಸ್ಟರ್/ಬ್ಯಾಂಡ್ ಮೇಜರ್ ಕೋರ್ಸ್/ನೌಕಾದಳ/ವಾಯುದಳದ ತತ್ಸಮಾನ ಕೋರ್ಸ್ ಮಾಡಿರಬೇಕು. (ಇಂಗ್ಲಿಷ್/ಹಿಂದಿ/ಕನ್ನಡ ಜ್ಞಾನ ಹಾಗೂ ಮಾಜಿ ಸೈನಿಕರಿಗೆ ಆದ್ಯತೆ.)
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ : ₹21,600
ಬೋಧಕೇತರ ಹುದ್ದೆಗಳು (Non -Teaching Post’s)
1. ಮಹಿಳಾ ನರ್ಸ್ (Female Nurse – 01 ಹುದ್ದೆ)
- ಅಗತ್ಯ ಅರ್ಹತೆ : ಕನಿಷ್ಠ 50% ಅಂಕಗಳೊಂದಿಗೆ ನರ್ಸಿಂಗ್ ನಲ್ಲಿ ಡಿಪ್ಲೋಮಾ/GNM ಅಥವಾ b.sc ನರ್ಸಿಂಗ್ ಪದವಿ ಮತ್ತು ರಾಜ್ಯ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು. ಸೈನಿಕ/ಪಬ್ಲಿಕ್ ಶಾಲೆಗಳು ಅಥವಾ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಇರಬೇಕು.
- ವಯೋಮಿತಿ: ಗರಿಷ್ಠ 50 ವರ್ಷಗಳು
- ಮಾಸಿಕ ವೇತನ ₹27,000
2. ಪಿಟಿ/ಸ್ಪೋರ್ಟ್ಸ್/ಡ್ರಿಲ್ ಇನ್ಸ್ಟ್ರಕ್ಟರ್ (PT/Sports/Drill Instructor – 02 ಹುದ್ದೆಗಳು)
- ಅಗತ್ಯ ಅರ್ಹತೆ : ಕನಿಷ್ಠ 12ನೇ ತರಗತಿ ತೇರ್ಗಡೆಯಾಗಿದ್ದು, PT/Sports/Drill ಅರ್ಹತಾ ಪ್ರಮಾಣ ಪತ್ರ ಹೊಂದಿರಬೇಕು. (ಮಾಜಿ ಸೈನಿಕರು , C.P.ed,/B.Ped ಪದವಿ ಹೊಂದಿರುವವರಿಗೆ ಆದ್ಯತೆ.)
- ವಯೋಮಿತಿ: ಗರಿಷ್ಠ 45 ವರ್ಷಗಳು
- ಮಾಸಿಕ ವೇತನ : ₹21,600
3. ವಸತಿ ನಿಲಯ ಮೇಲ್ವಿಚಾರಕರು -ಪುರುಷ (Hostel Warden Male – 03 ಹುದ್ದೆಗಳು)
- ಅಗತ್ಯ ಅರ್ಹತೆ : 12ನೇ ತರಗತಿ ತೇರ್ಗಡೆಯಾಗಿರಬೇಕು. ಇಂಗ್ಲಿಷ್/ಹಿಂದಿ/ಕನ್ನಡದಲ್ಲಿ ಸಂವಹನ ನಡೆಸಲು ಬರಬೇಕು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ನಿಭಾಯಿಸಿದ ಅನುಭವ, ಕಂಪ್ಯೂಟರ್ ಮತ್ತು ಹೌಸ್ ಕೀಪಿಂಗ್ ಜ್ಞಾನ ಇರಬೇಕು. ಅಭ್ಯರ್ಥಿಯು ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಫಿಟ್ ಆಗಿರಬೇಕು. (ಮಾಜಿ ಸೈನಿಕರಿಗೆ ಆದ್ಯತೆ) .
- ವಯೋಮಿತಿ : 21 ರಿಂದ 45 ವರ್ಷಗಳು
- ಮಾಸಿಕ ವೇತನ ₹21,600
4. ಈಜು ತರಬೇತುದಾರ, (Swimming Coach Male – 01 & Female 01 ಹುದ್ದೆ)
- ಅಗತ್ಯ ಅರ್ಹತೆ : Sangolli Rayanna Sainik School Recruitment ಗೆ ಈಜು ತರಬೇತಿಯೊಂದಿಗೆ ಲೈಫ್ ಗಾರ್ಡ್ ಡಿಪ್ಲೋಮಾ/ಪ್ರಮಾಣ ಪತ್ರ ಹೊಂದಿರಬೇಕು. ಅಥವಾ ಜಿಲ್ಲಾ/ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವಿರಬೇಕು. ವಸತಿ ಶಾಲೆಗಳಲ್ಲಿ ಕೆಲಸದ ಅನುಭವ ಹಾಗೂ ತ್ರಿ ಭಾಷಾ (ಕನ್ನಡ, ಇಂಗ್ಲಿಷ್, ಹಿಂದಿ) ಜ್ಞಾನಕ್ಕೆ ಆದ್ಯತೆ.
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ : ₹21,600
5. ಸ್ಟೋರ್ ಕೀಪರ್ -ತಾಂತ್ರಿಕ (Store Keeper Technical – 01 ಹುದ್ದೆ)
- ಅಗತ್ಯ ಅರ್ಹತೆ : 12ನೇ ತರಗತಿ ತೇರ್ಗಡೆ, ಸ್ಟೋರ್ಸ್, ವಾಹನಗಳು, ಇಂಜಿನಿಯರಿಂಗ್ ಉಪಕರಣಗಳು ಮತ್ತು ಲೋಜಿಸ್ಟಿಕ್ ನಿರ್ವಹಣೆಯ ಜ್ಞಾನವಿರಬೇಕು. ಈ ಕ್ಷೇತ್ರದಲ್ಲಿ ಮೂರು ವರ್ಷ ಕೆಲಸದ ಅನುಭವವಿರುವ ಮಾಜಿ ಸೈನಿಕರಿಗೆ ಆದ್ಯತೆ.
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ ₹21,600
6. ಚಾಲಕರು (Driver – 02 ಹುದ್ದೆಗಳು)
- ಅಗತ್ಯ ಅರ್ಹತೆ : Sangolli Rayanna Sainik School Recruitment ಗೆ SSLC ತೆರ್ಗಡೆ, ಲಘು ಅಥವಾ ಭಾರಿ ವಾಹನ ಚಾಲನಾ ಪರವಾನಗಿ (Driving licence)ಹೊಂದಿರಬೇಕು. ಮಿನಿ ಬಸ್, ವ್ಯಾನ್ ಮತ್ತು ಹೆವಿ ಲಾಂಗ್ ಚಾಸಿಸ್ ಪ್ಯಾಸೆಂಜರ್ ಬಸ್ ಚಾಲನೆಯಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು. ಯಾವುದೇ ಅಪಘಾತ ಅಥವಾ ಕಾನೂನು ಪ್ರಕರಣಗಳು ಇರಬಾರದು.
- ವಯೋಮಿತಿ : ಗರಿಷ್ಠ 45 ವರ್ಷಗಳು
- ಮಾಸಿಕ ವೇತನ : ₹21,600
7. ಎಲೆಕ್ಟ್ರಿಷಿಯನ್ ಮತ್ತು ಪಂಪ್ ಆಪರೇಟರ್ (Electrician cum pump/plant Operator – 01 ಹುದ್ದೆ)
- ಅಗತ್ಯ ಅರ್ಹತೆ : ಹತ್ತನೇ ತರಗತಿ ತೇರ್ಗಡೆ ಹಾಗೂ ಮಾನ್ಯತೆ ಪಡೆದ ಐಟಿಐ (ITI) ಅಥವಾ ಪಾಲಿಟೆಕ್ನಿಕ್ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಕೋರ್ಸ್ ನಲ್ಲಿ ಡಿಪ್ಲೋಮಾ ಹೊಂದಿರಬೇಕು.
- ವಯೋಮಿತಿ : ಗರಿಷ್ಠ 50 ವರ್ಷಗಳು
- ಮಾಸಿಕ ವೇತನ : ₹21,600
8. ಕ್ಲರ್ಕ್ (Clerk – 01 ಹುದ್ದೆ)
- ಅಗತ್ಯ ಅರ್ಹತೆ : 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ. ಇಂಗ್ಲಿಷ್/ಕನ್ನಡ/ಹಿಂದಿ ಭಾಷೆಯಲ್ಲಿ ನಿಮಿಷಕ್ಕೆ 40 ಪದಗಳ ಟೈಪಿಂಗ್ ವೇಗ (Typing Speed Of 40 WPM) ಹೊಂದಿರಬೇಕು. ಶಾಲೆ ಅಥವಾ ದೊಡ್ಡ ಸಂಸ್ಥೆಗಳಲ್ಲಿ ಕಚೇರಿ ಕೆಲಸ ಮಾಡಿದ ಅನುಭವವಿರಬೇಕು.
- ವಯೋಮಿತಿ : ಗರಿಷ್ಠ 50 ವರ್ಷಗಳು.
- ಮಾಸಿಕ ವೇತನ : ₹25,500
Sangolli Rayanna Sainik School Recruitment: ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ (Application Fee & Payment Mode)
Sangolli Rayanna Sainik School Recruitment ಗೆ ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ ಈ ಕೆಳಗಿನಂತಿದೆ.
- ಸಾಮಾನ್ಯ ಮತ್ತು ಓಬಿಸಿ (General, OBC) ಅಭ್ಯರ್ಥಿಗಳಿಗೆ : ₹500
- ಎಸ್ಸಿ/ ಎಸ್ಟಿ (SC /ST)ಅಭ್ಯರ್ಥಿಗಳಿಗೆ : ₹350
- ಪಾವತಿ ವಿಧಾನ : ಅಧಿಸೂಚನೆಯಲ್ಲಿ ನೀಡಿರುವ ಅಧಿಕೃತ QR ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಆನ್ಲೈನ್ ನಲ್ಲಿ ರಸೀದಿ/ಟ್ರಾನ್ಸಾಕ್ಷನ್ ವಿವರದ ಪ್ರತಿ (UTR ಸಂಖ್ಯೆ ಮತ್ತು ದಿನಾಂಕ ಸ್ಪಷ್ಟವಾಗಿ ಕಾಣಿಸುವಂತೆ) ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ಎಸ್ಸಿ ಎಸ್ಟಿ ಅಭ್ಯರ್ಥಿಗಳು ರಿಯಾಯಿತಿ ಪಡೆಯಲು ಜಂಟಿ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ( How To Apply)
Sangolli Rayanna Sainik School Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.
- ವೆಬ್ಸೈಟ್ ಭೇಟಿ : ಮೊದಲು ಶಾಲೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. https://www.ksrss.com/view-all-recuitments ನಿಗದಿತ ಅರ್ಜಿ ನಮೂನೆಯನ್ನು (Application Form) ಡೌನ್ಲೋಡ್ ಮಾಡಿಕೊಳ್ಳಿ.
- ಮಾಹಿತಿ ಭರ್ತಿ: ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು (10ನೇ ತರಗತಿಯಿಂದ ಹಿಡಿದು ಇದುವರೆಗಿನ ಶೈಕ್ಷಣಿಕ ಅಂಕಗಳ ಶೇಕಡವಾರು ವಿವರಗಳು) ಸ್ಪಷ್ಟವಾಗಿ ಭರ್ತಿ ಮಾಡಿ.
- ದಾಖಲೆಗಳ ಲಗತ್ತು : ನಿಮ್ಮ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು, ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳು, ಮತ್ತು ಜಾತಿ ಪ್ರಮಾಣ ಪತ್ರಗಳ ನಕಲು ಪ್ರತಿಗಳಿಗೆ ಸ್ವಯಂ ದೃಢೀಕರಣ ಸಹಿ ಮಾಡಿ (Self Attested) ಅರ್ಜಿಯೊಂದಿಗೆ ಲಗತ್ತಿಸಿ.
- ಭಾವಚಿತ್ರ : ಅರ್ಜಿಯಲ್ಲಿ ನಿಗದಿಪಡಿಸಿದ ಜಾಗದಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಹಚ್ಚಿ.
- ಲಕೋಟೆಯ ಮೇಲಿನ ನಿಯಮ : ನೀವು ಅರ್ಜಿ ಹಾಕಿ ಕಳುಹಿಸುವ ಲಕೋಟೆಯ (Envelope Cover)ಮೇಲೆ ದೊಡ್ಡ ಅಕ್ಷರಗಳಲ್ಲಿ (CAPITAL LETTER S) ಕಡ್ಡಾಯವಾಗಿ ಈ ಕೆಳಗಿನಂತೆ ಬರೆಯಬೇಕು. APPLICATION FOR THE POST OF (ಹುದ್ದೆಯ ಹೆಸರು ಬರೆಯಬೇಕು).
- ಅಂಚೆ ಮೂಲಕ ಕಳುಹಿಸಿ : ಭರ್ತಿ ಮಾಡಿದ ಅರ್ಜಿಯನ್ನು ಭಾರತೀಯ ಅಂಚೆ ಇಲಾಖೆಯ ನೊಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ನೇರವಾಗಿ ಕೈಯಿಂದ ನೀಡುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
Sangolli Rayanna Sainik School Recruitment ಗೆ ಅರ್ಜಿ ಕಳುಹಿಸಬೇಕಾದ ವಿಳಾಸ .
- The Principal, Kranthiveera Sangolli Rayanna Sainik School, Post: Sangolli, Taluka Bailhongal , District: Belagavi, Karnataka, PIN Code -591115
ಪ್ರಮುಖ ದಿನಾಂಕಗಳು ಮತ್ತು ಆಯ್ಕೆ ವಿಧಾನ ( Important Dates & Selection Process)
Sangolli Rayanna Sainik School Recruitment ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2 ನವಂಬರ್ 2026 (ಅಂಚೆ ವಿಳಂಬಕ್ಕೆ ಶಾಲೆ ಜವಾಬ್ದಾರರಾಗುವುದಿಲ್ಲ)
- ಆಯ್ಕೆ ವಿಧಾನ : ಅಗತ್ಯ ಅರ್ಹತೆ ಹೊಂದಿದ್ದು, ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಮಾತ್ರ ಡೆಮೋ ತರಗತಿ ಮತ್ತು ಸಂದರ್ಶನಕ್ಕೆ ಕರೆಯಲಾಗುತ್ತದೆ. ಆಯ್ಕೆಯನ್ನು ಸಂಪೂರ್ಣವಾಗಿ ಡೆಮೋ ಕ್ಲಾಸ್ ಪ್ರದರ್ಶನ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಮಾಡಲಾಗುತ್ತದೆ.
- ಭತ್ಯೆ ಇರುವುದಿಲ್ಲ : ಪರೀಕ್ಷೆ, ಸ್ಕಿಲ್ ಟೆಸ್ಟ್ ಅಥವಾ ಸಂದರ್ಶನಕ್ಕೆ ಹಾಜರಾಗಲು ಯಾವುದೇ ರೀತಿಯ ಪ್ರಯಾಣ ಭತ್ಯೆ ಅಥವಾ ದಿನ ಭತ್ಯೆ ನೀಡಲಾಗುವುದಿಲ್ಲ.
- ಕರೆ ಪತ್ರ : ಸಂದರ್ಶನದ ವಿವರಗಳನ್ನು ಶಾಲೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಅಥವಾ ಅಭ್ಯರ್ಥಿಯ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಆದ್ದರಿಂದ ಅರ್ಜಿಯಲ್ಲಿ ಸ್ಪಷ್ಟವಾದ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ.
Sangolli Rayanna Sainik School Recruitment ಹೆಚ್ಚಿನ ಸಂಪೂರ್ಣ ವಿವರಗಳು ಮತ್ತು ಇತ್ತೀಚಿನ ಅಪ್ಡೇಟ್ ಗಳಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ಶಾಲೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಬೇಕು.
ಇದನ್ನು ಓದಿ
Sangolli Rayanna Sainik School Recruitment : FAQS
1. ಈ ಹುದ್ದೆಗಳು ಖಾಯಂ ಉದ್ಯೋಗಗಳೇ?
ಇಲ್ಲ, ಇವು ಸಂಪೂರ್ಣವಾಗಿ ಗುತ್ತಿಗೆ ಆಧಾರದ (Contractual Basis)ಮೇಲಿನ ಹುದ್ದೆಗಳಾಗಿವೆ.
2. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದ ಜೊತೆಗೆ ಸಿಗುವ ಇತರೆ ಸೌಲಭ್ಯಗಳು ಯಾವುವು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವ ಧನ ಜೊತೆಗೆ ಶಾಲಾ ಆವರಣದಲ್ಲಿ ಉಚಿತ ಊಟ ಮತ್ತು ಸುಸಜ್ಜಿತ ವಸತಿ ಸೌಲಭ್ಯವನ್ನು (Free Food Furnished Accommodation)ನೀಡಲಾಗುತ್ತದೆ.
3. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಭರ್ತಿ ಮಾಡಿದ ಅರ್ಜಿಗಳು ಶಾಲೆಯನ್ನು ತಲುಪಲು ನವಂಬರ್ 2 , 2026 ಕೊನೆಯ ದಿನಾಂಕವಾಗಿದೆ.
4. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದೇ?
ಇಲ್ಲ, Sangolli Rayanna Sainik School Recruitment ಗೆ ಅಭ್ಯರ್ಥಿಗಳು ಶಾಲೆಯ ಅಧಿಕೃತ ವೆಬ್ಸೈಟ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ, ಕೈಯಿಂದ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕವೇ ಕಳುಹಿಸಬೇಕು. ಆನ್ಲೈನ್ ಅರ್ಜಿ ಇರುವುದಿಲ್ಲ.
5. ಅರ್ಜಿಯನ್ನು ನೇರವಾಗಿ ಶಾಲೆಗೆ ಹೋಗಿ ಕೈಯಿಂದ ನೀಡಬಹುದೇ?
ಇಲ್ಲ, ನೇರವಾಗಿ ಕೈಯಿಂದ ನೀಡುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಕಡ್ಡಾಯವಾಗಿ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕವೆ ಕಳುಹಿಸಬೇಕು.
6. ಅರ್ಜಿ ಶುಲ್ಕ ಎಷ್ಟು ಮತ್ತು ಅದನ್ನು ಪಾವತಿಸುವುದು ಹೇಗೆ?
ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ₹500 ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ₹350 ಶುಲ್ಕ ಇರುತ್ತದೆ. ಅಧಿಸೂಚನೆಯಲ್ಲಿ ನೀಡಿರುವ QR code ಅನ್ನು scan ಮಾಡುವ ಮೂಲಕ ಆನ್ಲೈನ್ ನಲ್ಲಿ ಪಾವತಿಸಬೇಕು ಮತ್ತು ಅದರ ರಸೀದಿಯನ್ನು ಅರ್ಜಿಗೆ ಲಗತ್ತಿಸಬೇಕು.
7. ಅರ್ಜಿ ಕವರ್ ಮೇಲೆ ಏನು ಬರೆಯಬೇಕು?
ಲಕೋಟೆಯ ಮೇಲ್ಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಕಡ್ಡಾಯವಾಗಿ APPLICATION FOR THE POST OF (ಹುದ್ದೆಯ ಹೆಸರು). ಎಂದು ಬರೆಯಬೇಕು.
8. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಬಂದ ಅರ್ಜಿಗಳಲ್ಲಿ ಅರ್ಹರಾದವರನ್ನು ಕಾರ್ಕಲಿಸ್ಟ್ ಮಾಡಲಾಗುತ್ತದೆ . ನಂತರ ಅವರಿಗೆ ಡೆಮೋ ತರಗತಿ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
9. ಸಂದರ್ಶನಕ್ಕೆ ಹಾಜರಾಗಲು ಪ್ರಯಾಣ ಭತ್ಯೆ ಸಿಗುತ್ತದೆಯೇ?
ಇಲ್ಲ, ಪರೀಕ್ಷೆ ಅಥವಾ ಸಂದರ್ಶನಕ್ಕೆ ಹಾಜರಾಗಲು ಯಾವುದೇ ರೀತಿಯ ಪ್ರಯಾಣ ಭತ್ಯೆ ಅಥವಾ ದಿನ ಭತ್ಯೆ ನೀಡಲಾಗುವುದಿಲ್ಲ.
10. ಸಂದರ್ಶನದ ಸಮಯದಲ್ಲಿ ಯಾವ ದಾಖಲೆಗಳನ್ನು ತರಬೇಕು?
Sangolli Rayanna Sainik School Recruitment ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ಅಂಕಪಟ್ಟಿಗಳು, ಪದವಿ/ಡಿಪ್ಲೋಮಾ ಪ್ರಮಾಣ ಪತ್ರಗಳು ಮತ್ತು ಅನುಭವದ ಪ್ರಮಾಣ ಪತ್ರಗಳ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲನೆಗೆ ತರಬೇಕು.
ಇದೇ ರೀತಿಯ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ.
ಇದನ್ನು ಓದಿ